ರಸ್ತೆ ಗುಂಡಿ: ನಿರಂತರ ವಾಟ್ಸ್‌ಆ್ಯಪ್ ದೂರು
Team Udayavani, Jul 19, 2018, 1:56 PM IST
ಉಡುಪಿ/ಮಂಗಳೂರು: ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಸಮಸ್ಯೆ, ಹೊಂಡಗಳ ಬಗ್ಗೆ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಿದ ಬಳಿಕ ನಿರಂತರ ದೂರುಗಳು ದಾಖಲಾಗುತ್ತಿವೆ. ಈ ದೂರುಗಳಿಗೆ ಅಧಿಕಾರಿಗಳು ಸ್ಪಂದನೆಯನ್ನೂ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಹೆಚ್ಚಿನ ಕರೆಗಳು ಮಹಾನಗರ ಪಾಲಿಕೆಗೆ ಸಂಬಂಧ ಪಟ್ಟಿದ್ದಾಗಿವೆ. ರಸ್ತೆ ಗುಂಡಿಗಳ ಫೋಟೋ ಕಳುಹಿಸಿದ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಗನ ಹರಿಸಿದ್ದಾರೆ.
ಉಡುಪಿ ವಿಭಾಗದಲ್ಲಿ ಅಧಿಕಾರಿಗಳಿಗೆ ಬುಧವಾರ 20ರಷ್ಟು ಫೋಟೋ ಸಂದೇಶಗಳು ಬಂದಿವೆ. ನಾಲ್ಕು ಕರೆಗಳು ಬಂದಿವೆ. ಈ ದೂರುಗಳ ಅನ್ವಯ ವಿಭಾಗೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತತ್‌ಕ್ಷಣ ಮಾಹಿತಿ ನೀಡಲಾಗಿದೆ. ಲೋಕೋಪಯೋಗಿ ಅಲ್ಲದ ರಸ್ತೆಗಳ ಬಗ್ಗೆಯೂ ದೂರುಗಳು ಬಂದಿದ್ದು ಪಂಚಾಯತ್, ಸ್ಥಳೀಯಾಡಳಿತಗಳಿಗೆ ಮಾಹಿತಿ ನೀಡಲಾಗಿದೆ. ಬುಧವಾರ ಕರೆಗಳ ಸಂಖ್ಯೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಕುಂದಾಪುರ ಭಾಗದಲ್ಲೂ ಹಲವು ದೂರುಗಳು ಬಂದಿದ್ದು, ಇವುಗಳಲ್ಲಿ ಎರಡು ಕಾರ್ಕಳ ಭಾಗದ್ದಾಗಿದ್ದು ಅಲ್ಲಿನವರ ಗಮನಕ್ಕೆ ತರಲಾಗಿದೆ. ದೂರುಗಳಲ್ಲಿ ಅನೇಕ ಜಿ.ಪಂ. ರಸ್ತೆಗಳದಾಗಿದ್ದವು. ಇಂತಹ ದೂರುಗಳನ್ನು ಅವರಿಗೇ ಸಲ್ಲಿಸಿದರೆ ಉತ್ತಮ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಕಾರ್ಕಳ ಉಪವಿಭಾಗದಲ್ಲಿ 14 ದೂರುಗಳು ಬಂದಿದ್ದು 2 ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟವು. ಇತರ 12 ಬೇರೆ ಇಲಾಖೆಯದ್ದಾಗಿವೆ.
ಪುತ್ತೂರಿನಲ್ಲಿ 3 ವರ್ಷದಿಂದ ಈ ವ್ಯವಸ್ಥೆ
ಪುತ್ತೂರು ತಾಲೂಕಿನಲ್ಲಿ ಲೋಕೋಪಯೋಗಿ ರಸ್ತೆಗಳ ಬಗ್ಗೆ ಗಮನ ಕೊಡಲು ಈ ಹಿಂದೆಯೇ ಗ್ರೂಪ್ ಒಂದನ್ನು ಮಾಡಲಾಗಿದ್ದು ಸಕ್ರಿಯವಾಗಿದೆ. ಈಗ ಇಲಾಖೆ ಸೂಚನೆ ಮೇರೆಗೆ ಮತ್ತೆ ಹೊಸ ವಾಟ್ಸ್‌ಆ್ಯಪ್ ವ್ಯವಸ್ಥೆ ಮಾಡ ಲಾಗಿದ್ದು ಒಂದು ದೂರಷ್ಟೇ ಬಂದಿದೆ. “ಕಳೆದ ಮೂರು ವರ್ಷಗಳಿಂದ ನಮ್ಮಲ್ಲಿ ಗ್ರೂಪ್ ಸಕ್ರಿಯವಾಗಿದೆ. ಇಲಾಖೆಯ ಸ್ಪಂದನೆಯೂ ಇದೆ. ಹೊಸ ಖಾತೆಗೆ 7 ದೂರು ಬಂದಿದ್ದರೂ ಇಲಾಖೆಗೆ ಸಂಬಂಧಿಸಿದ್ದು 1 ಮಾತ್ರ. ಉಳಿ
ದವು ಬೇರೆ ವ್ಯಾಪ್ತಿಗೆ ಸೇರಿದ್ದು’ ಎಂದು ಪಿಡಬ್ಲೂಡಿ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರಮೋದ್ ಕುಮಾರ್ ಕೆ.ಕೆ. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.