ಬೋಳಾರಿಗೆ ಕುದ್ಕನ ಮದಿಮೆ!
Team Udayavani, Jul 19, 2018, 3:09 PM IST
ಜಿ.ಆರ್.ಕೆ. ಕಂಬೈನ್ ಲಾಂಛನದಡಿಯಲ್ಲಿ ನಿರ್ಮಾಣವಾಗಲಿರುವ ‘ಕುದ್ಕನ ಮದ್ಮೆ’ ತುಳು ಚಿತ್ರಕ್ಕೆ ಇತ್ತೀಚೆಗೆ ಸುರತ್ಕಲ್ ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಕರಾವಳಿ ಭಾಗದಲ್ಲಿ ಬಹಳಷ್ಟು ಫೇಮಸ್ ಆದ ‘ಕುದ್ಕನ ಮದ್ಮೆ’ಎಂಬ ಡೈಲಾಗ್ ಆಧಾರಿತವಾಗಿ ಈ ಸಿನೆಮಾ ಮೂಡಿಬರಲಿದೆ. ಅಂದಹಾಗೆ, ಇದರಲ್ಲಿ ‘ಕುದ್ಕ’ನ ಪಾತ್ರ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಕೋಸ್ಟಲ್ವುಡ್ನಲ್ಲಿ ಕೇಳಿಬಂದಿತ್ತು. ಸದ್ಯಕ್ಕೆ ದೊರೆತ ಮಾಹಿತಿ ಪ್ರಕಾರ ಕುದ್ಕನ ರೋಲ್ನಲ್ಲಿ ಅರವಿಂದ ಬೋಳಾರ್ ಕಾಣಿಸಿಕೊಳ್ಳುವುದು ಬಹುತೇಕ ಫೈನಲ್ ಆಗಿದೆ.
ಮದುವೆಯಾಗಿ ಎರಡು ಮಕ್ಕಳಿರುವವನೊಬ್ಬ ಕೊನೆಯ ಕಾಲದಲ್ಲಿ ಇನ್ನೊಂದು ಮದುವೆಯಾಗಲು ಹೋಗುವ ಕಥೆಯಾಧಾರಿತವಾಗಿ ಕುದ್ಕನ ಮದುವೆ ರೆಡಿಯಾಗಲಿದೆ. ನಾದ ಮೃದಂಗ ಕಿರುಚಿತ್ರಕ್ಕೆ ‘ಪಿರ್ಕಿಬಿತ್ತಿಲ್’ ಧಾರಾವಾಹಿ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ರಂಗೋಳು’ ಚಿತ್ರ ನಿರ್ದೇಶಕರಾದ ಎ.ವಿ. ಜಯರಾಜ್ ‘ಕುದ್ಕನ ಮದ್ಮೆ ನಿರ್ದೇಶಿಸಲಿದ್ದಾರೆ. ಕನ್ನಡ ಮತ್ತು ತುಳು ಭಾಷೆಯ ಚಲನಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿರುವ ಮಹಾಬಲೇಶ್ವರ ಹೊಳ್ಳ ಕೆಮ ರಾಮ್ಯಾನ್ ಆಗಿದ್ದಾರೆ. ಚಿತ್ರಕತೆ ಸುಧನ್ ಶ್ರೀಧರ್, ಸಂಕಲನ ಸುಬ್ರಹ್ಮಣ್ಯ ಹೊಳ್ಳ, ಪಿ.ಆರ್.ಒ. ಮಹೇಶ್ ಮೂರ್ತಿ ಸುರತ್ಕಲ್ ಆಗಿದ್ದಾರೆ. ಇನ್ನುಳಿದಂತೆ, ದೇವಿಪ್ರಕಾಶ್ ಉರ್ವಸ್ಟೋರ್, ಅರುಣ್ ಶೆಟ್ಟಿ, ಅಶೋಕ್ ಶೆಟ್ಟಿ ಅಂಬ್ಲಿಮೊಗರು, ನವೀನ್ ಶೆಟ್ಟಿ ಮುಂತಾದವರು ಅಭಿನಯಿಸಲಿದ್ದು, ಇನ್ನೂ ಹಲವು ಖ್ಯಾತ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.