ಗುಡ್ ಮಾರ್ನಿಂಗ್ ಫ್ರೆಂಡ್ಸ್ !
Team Udayavani, Jul 20, 2018, 6:00 AM IST
ನಮ್ಮ ಕಾಲೇಜಿನಲ್ಲಿ ಇಂಗ್ಲಿಷ್ ಕ್ಲಾಸ್‌ನಲ್ಲಿ ಪ್ರತಿಯೊಬ್ಬರೂ ಭಾಷಣ ಮಾಡಬೇಕಿತ್ತು. ನಮ್ಮ ಕ್ಲಾಸ್‌ನಲ್ಲಿ ಕವನಾ ಅನ್ನುವವಳು ಇದ್ದಳು. ಅವಳ್ಳೋ ಇಂಗ್ಲಿಷ್ ಪಂಡಿತೆ. ಎಲ್ಲರೂ ಅವಳು ಯಾವ ವಿಷಯದ ಮೇಲೆ ಭಾಷಣ ಮಾಡಬಹುದು, ಯಾವ ತರ ಮಾಡಬಹುದು ಅಂತ ಲೆಕ್ಕ ಹಾಕುತ್ತ ಇದ್ದರು. ಅಂತೂ ಅವಳ ಸರದಿ ಬಂದೇಬಿಟ್ಟಿತು. ಅವಳು ಕ್ಲಾಸ್‌ನಲ್ಲಿ ಎದುರು ಹೋಗಿ ನಿಂತುಕೊಂಡಳು. ನಾನು ಕಣ್ಣರಳಿಸಿ, ಕಿವಿ ನಿಮಿರಿಸಿ, ಕತ್ತು ಎತ್ತರಿಸಿ ಅವಳನ್ನೇ ನೋಡುತ್ತ ಇದ್ದೆ. “ಗುಡ್ ಮಾರ್ನಿಂಗ್ ಫ್ರೆಂಡ್ಸ್’ ಎಂದು ಮಾತನ್ನು ಆರಂಭಿಸಿಯೇ ಬಿಟ್ಟಳು.A beautiful flower needs a company of a base to blossom. A dazling river needs a company of seen to glow on. A firm mountain needs a company of land to stand on and bright stars so high too need a company of dark sky to shine on. Yes, there is a need for all indeed ಎಂದು ಮಾತನ್ನಾರಂಭಿಸಿ, Can you guess what may be the topic?’ ಅಂದಳು.
ಅದಕ್ಕೆ ಎಲ್ಲರೂ ಜೋರಾಗಿ, “ಫ್ರೆಂಡ್ಸ್’ ಅಂತ ಕಿರುಚಿದರು. “”Yes, it is friend. ನಾನು ಇವತ್ತು ನನ್ನ ಫ್ರೆಂಡ್ ಬಗ್ಗೆ ಮಾತಾಡ್ತಿದ್ದೀನಿ. ಹೌದು, ನಾನು ಅವಳನ್ನು ತುಂಬಾ ಪ್ರೀತಿಸ್ತೀನಿ, ಗೌರವಿಸ್ತೀನಿ. ಅವಳು ನನ್ನ ಬೆಸ್ಟ್ ಫ್ರೆಂಡ್. ನಾವಿಬ್ಬರು ಹೇಗೆ ಹತ್ತಿರ ಆದೆವು ಎನ್ನುವುದು ನನಗೆ ಗೊತ್ತಿಲ್ಲ, ಆದರೆ, ಅವಳ ಧ್ವನಿ ಕೇಳಿದಾಗ ನನ್ನ ಗಮನ ಅವಳ ಹತ್ತಿರ ಹೋಗುತ್ತದೆ. ಅವಳು ಬೇರೆಯವರ ಜೊತೆ ಮಾತನಾಡಿದರೆ ನನಗೆ ಕೋಪ ಬರುತ್ತದೆ” ಎಂದು ಹೇಳುತ್ತಲೇ ಇದ್ದಳು. ಆದರೆ ಕೊನೆಯವರೆಗೆ ಆ ಫ್ರೆಂಡ್ ಯಾರು ಅಂತ ಅವಳ ಹೆಸರು ಹೇಳಲೇ ಇಲ್ಲ. ಎಲ್ಲರಿಗೂ ಕುತೂಹಲ. ಶಿಕ್ಷಕರ ಮೊಗದಲ್ಲೂ ನಗೆಯಾಡಿತು. ಕೊನೆಗೆ ಅವಳು ಹೇಳಿದ್ದು ಅಂದರೆ, “”ನನ್ನ ಬೆಸ್ಟ್ ಫ್ರೆಂಡ್ ಅಂದರೆ, ಅವಳು ಬೇರೆ ಯಾರೂ ಅಲ್ಲ, ಅವಳು ರಚನಾ” ಅಂದುಬಿಟ್ಟಳು.
ಅವಳು ಹೇಳಿದ ಆ ಫ್ರೆಂಡ್ಸ್ ಯಾರು ಅಂದುಕೊಂಡಿರಿ? ಅದು ಬೇರೆ ಯಾರೂ ಅಲ್ಲ , ಆ ಫ್ರೆಂಡ್ ನಾನೇ. ನನಗೆ ಅವಳು ಹಾಗೆ ಹೇಳುತ್ತಿರಬೇಕಾದರೆ ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ನಾನು ನನ್ನ ಕನಸಿನಲ್ಲೂ ಈ ತರಹದ ಸಂದರ್ಭವನ್ನು ಊಹಿಸಿರಲಿಲ್ಲ. ನಿಜಕ್ಕೂ ನನಗೆ ತುಂಬಾ ಸಂತೋಷವಾಯಿತು. ಕ್ಲಾಸ್‌ನಲ್ಲಿ ಎಲ್ಲರ ಮುಂದೆ ನಾನೊಬ್ಬಳು ಭಾಷಣಕ್ಕೆ ವಿಷಯವಾದೆನಲ್ಲ ಎಂದು!
ಹೌದು, ನನಗವಳು ಅಂದರೆ ತುಂಬಾ ಇಷ್ಟ. ನಮ್ಮ ಸ್ನೇಹ ಹಾಗೇ ಮುಂದುವರಿದಿದೆ. ಈಗ ಎಷ್ಟರ ಮಟ್ಟಿಗೆ ನಮ್ಮ ಸ್ನೇಹ ಮುಂದುವರಿದಿದೆ ಎಂದರೆ, ನಾವು ಯಾವಾಗಲೂ ಒಟ್ಟಿಗೇ ಇರ್ತೇವೆ. ನಾನು ಹಾಸ್ಟೆಲ್‌ನಲ್ಲಿ ಊಟ ಮಾಡದಿದ್ದಾಗ ಅಮ್ಮನಾಗಿ, ಓದದಿದ್ದಾಗ ಅಪ್ಪನಾಗಿ, ಮಾರ್ಕೆಟ್‌ನಿಂದ ನನಗಂತಲೇ ಏನಾದರೂ ತರುವ ಅಕ್ಕನಾಗಿ, ಜಾರಿ ಬಿದ್ದಾಗ ಎತ್ತುವ ಅಣ್ಣನಾಗಿ, ನನ್ನ ಕೈಹಿಡಿದು ನಡೆಸುವ ತಮ್ಮನಾಗಿ, ಹೆಗಲ ಮೇಲೆ ಕೈಹಾಕುವ ತಂಗಿಯಾಗಿ, ಪಾಠ ಹೇಳುವ ಗುರುವಾಗಿ, ಸುಖ-ದುಃಖಗಳಲ್ಲಿ ಭಾಗಿಯಾಗುವ ಆಪ್ತ ಸ್ನೇಹಿತೆಯಾಗಿ ನನ್ನೊಂದಿಗಿರುವವಳು.
ಅವಳು ನನ್ನ ಜೀವನದ ಒಂದು ಭಾಗವಾಗಿ ಬಿಟ್ಟಿದ್ದಾಳೆ. ಇಷ್ಟು ದಿನ “ಪಿಯು ಮುಗಿದು, ಒಮ್ಮೆ ಮನೆಗೆ ಹೋದರೆ ಸಾಕು’ ಎನ್ನುತ್ತಿದ್ದ ನನಗೆ ಈಗ ಇವಳನ್ನು ಬಿಟ್ಟು ಹೋಗುವುದು ಹೇಗೆ? ಎಂದು ಮನಸ್ಸಿನ ಮೂಲೆಯಲ್ಲೊಂದು ಆತಂಕ ಕಾಡುತ್ತಿದೆ. ಅದಕ್ಕೆ ಸರಿಯಾಗಿ, ಸಮಯ ಕಳೆದಂತೆ ಅವಳಿಂದ ದೂರವಾಗುವ ಕ್ಷಣಗಳು ಹತ್ತಿರವಾಗುತ್ತಿವೆ. ಇದನ್ನು ನೆನಪು ಮಾಡಿಕೊಂಡಾಗಲೆಲ್ಲ ತಳಮಳ ಉಂಟಾಗುತ್ತದೆ.
ಏನೇ ಆಗಲಿ, ಅವಳು ಮಾತ್ರ ನನ್ನ ಜೊತೆಗೇ ಇರ್ತಾಳೆ. Yes, I am in love with her. I love her very much.
ಕವನಾ, ನೀನು ನನ್ನ ಜೀವನದ ಕೊನೆಯ ಉಸಿರಿನವರೆಗೂ, ಕೊನೆಯ ಗಳಿಗೆಯವರೆಗೂ ಹಾಗೂ ಅದರ ನಂತರವೂ ಅಷ್ಟೇ ನೀನೇ ನನ್ನ ಆತ್ಮೀಯ ಗೆಳತಿ, ನನ್ನ ಬೆಸ್ಟ್ ಫ್ರೆಂಡ್ ಅಂತ ನಾನು ಯಾವಾಗಲೂ ಹೇಳಲು ಇಷ್ಟಪಡ್ತೀನಿ. “ಬಾಳೆಂಬ ಹಂಸತೂಲಿಕಾತಲ್ಪದ ಪುಷ್ಪಕವಿಮಾನದಲ್ಲಿ ಸದಾ ನನ್ನೊಂದಿಗಿನ ಪಯಣಿಗಳಾಗಿರು ಓ ಗೆಳತಿ’.
ರಚನಾಚಂದ್ರ, ದ್ವಿತೀಯ ಪಿಯುಸಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.