ಇಲ್ಲಿ ಹಾಡುಗಳೇ ಗೂಗ್ಲಿ

Team Udayavani, Jul 20, 2018, 6:00 AM IST

x-28.jpg

ಕಾರು ಬಾಗಿಲು ತೆಗೆದು, “ನಾನು ಹೋಗಿರ್ತೀನಿ, ನೀನು ಬಂದುಬಿಡು …’ ಅಂತ ಹೇಳಿ ಓಡಿದರು ಪ್ರಥಮ್‌. ಕಲಾವಿದರ ಸಂಘದ ಮೂರು ಮಹಡಿ ಹತ್ತಿ, ಏದುಸಿರು ಬಿಡುತ್ತಲೇ ವೇದಿಕೆಗೆ ಹೋದರು. ಪ್ರಥಮ್‌ ಮುಖ ನೋಡಿದ ಸಂಘಟಕರು, ಖುಷಿಯಾಗಿ ಅವರಿಗೇ ಮೊದಲು ಮೈಕು ನೀಡಿದರು. ಏದುಸಿರುಬಿಡುತ್ತಲೇ, “ಎಲ್ಲರಿಗೂ ಒಳ್ಳೇದಾಗ್ಲಿ. ಏನ್‌ ಹೆಸರಿದು? ಇಲ್ಲಿ ಕೀರ್ತಿರಾಜ್‌ ಕೂತಿದ್ದಾರೆ. ಅವರು ಚೆನ್ನಾಗಿ ರೇಪ್‌ ಮಾಡುತ್ತಿದ್ದರು. ಆಡಿಯೋ ಬಿಡುಗಡೆ ಅಂದರೆ, ಅದು ಸಂಗೀತ ನಿರ್ದೇಶಕನ ಹುಟ್ಟುಹಬ್ಬವಿದ್ದಂತೆ. ವಿನು ಮನಸ್‌ಗೆ ಒಳ್ಳೆಯದಾಗಲಿ. ನಿರ್ಮಾಪಕರು ಎರಡು ಬೆರಳುಗಳಿಗೆ ಉಂಗುರ ಹಾಕಿದ್ದಾರೆ. ಐದು ಬೆರಳುಗಳಿಗೆ ಹಾಕುವಂತಾಗಲಿ. ಧರ್ಮಂಗೆ ಒಳ್ಳೇದಾಗಲಿ. ನಿರ್ಮಾಪಕರಿಗೆ “ಬಿಂದಾಸ್‌ ಗೂಗ್ಲಿ 5′ ಮಾಡುವಷ್ಟು ದುಡ್ಡು ಬರಲಿ. ಅವರ ಮನೆ ಮೇಲೆ ಐಟಿ ರೇಡ್‌ ಆಗಲಿ. ಕನ್ನಡ ಸಿನಿಮಾ ನೋಡಿ. ಕನ್ನಡ ಮಾತಾಡಿ …’ ಸುಸ್ತಾಗಿ ಮೈಕಿಟ್ಟರು ಪ್ರಥಮ್‌.

“ಬಿಂದಾಸ್‌ ಗೂಗ್ಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅಂದು ಪ್ರಥಮ್‌ ಜೊತೆಗೆ ಇನ್ನೊಂದಿಷ್ಟು ಗಣ್ಯರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ವಿಜಯ್‌ ರಾಘವೇಂದ್ರ, ಆಶಿಕಾ ರಂಗನಾಥ್‌, ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ, ಹಿರಿಯ ನಟ ರಾಮಕೃಷ್ಣ, ಕೀರ್ತಿರಾಜ್‌ ಮುಂತಾದವರಿದ್ದರು. ಇನ್ನು ಸಭಾಂಗಣದ ಭರ್ತಿ ಜನರಿದ್ದರು. ನಿರ್ಮಾಪಕ ವಿಜಯ್‌ ಅನ್ವೇಕರ್‌ ಬೆಳಗಾವಿಯವರಾದ್ದರಿಂದ, ಅಲ್ಲಿಂದೆಲ್ಲಾ ಜನ ಬಂದಿದ್ದರು. ಅವರೆಲ್ಲರ ಸಮ್ಮುಖದಲ್ಲಿ “ಬಿಂದಾಸ್‌ ಗೂಗ್ಲಿ’ ಚಿತ್ರದ ಹಾಡುಗಳು ಬಿಡುಗಡೆಯಾದವು. 

ಈ ಚಿತ್ರವನ್ನು ಸಂತೋಷ್‌ ನಿರ್ದೇಶಿಸುತ್ತಿದ್ದಾರೆ. ಇದು ಅವರ ಎರಡನೆಯ ಚಿತ್ರ. ಇದೊಂದು ಸಂಗೀತ ಮತ್ತು ನೃತ್ಯ ಪ್ರಧಾನ ಚಿತ್ರ ಎನ್ನುತ್ತಾರೆ ಅವರು. “ನಮ್ಮ ಚಿತ್ರದಲ್ಲಿ 11 ಹಾಡುಗಳಿದೆ. ಬಹುಶಃ “ಪ್ರೇಮ ಲೋಕ’ ಬಿಟ್ಟರೆ ಇಷ್ಟೊಂದು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿದೆಯೋ ಗೊತ್ತಿಲ್ಲ. 11 ಹಾಡುಗಳಿರುವ ಚಿತ್ರ ಮಾಡುವುದು ದೊಡ್ಡ ರಿಸ್ಕಾ. ಆದರೆ, ನಿರ್ಮಾಪಕರು ಬಹಳ ಪ್ರೋತ್ಸಾಹ ಕೊಟ್ಟಿದ್ದಾರೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಡ್ಯಾನ್ಸ್‌ ಕೋಚ್‌ ಪಾತ್ರ ಮಾಡಿದ್ದಾರೆ. ಇನ್ನು ಆಕಾಶ್‌, ಮಮತಾ ರಾಹುತ್‌, ನಿಮಿಷ, ಶಿಲ್ಪ ಮುಂತಾದವರು ನಟಿಸಿದ್ದಾರೆ. ವಿನು ಮನಸು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಮ್ಯಾಥ್ಯೂ ರಾಜನ್‌ ಅವರ ಛಾಯಾಗ್ರಹಣ ಚೆನ್ನಾಗಿದೆ’ ಎಂದು ಹೇಳಿದರು.

ಚಿತ್ರದಲ್ಲಿ ನಿರ್ಮಾಪಕ ವಿಜಯ್‌ ಅನ್ವೇಕರ್‌ ಸಹ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರ ನೋಡಿದರೆ ಒಂದು ದಿನ ಮಾತ್ರೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ ಅವರು. “ಈ ಚಿತ್ರ ಬಿಪಿ, ಶುಗರ್‌ ಎಲ್ಲಾ ಕಡಿಮೆ ಮಾಡುತ್ತೆ.  ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ಇದೊಂದು ಕ್ಲೀನ್‌ ಸಿನಿಮಾ. ಡಬ್ಬಲ್‌ ಮೀನಿಂಗ್‌ ಸಂಭಾಷಣೆ ಇಲ್ಲದ ಸಿನಿಮಾ. ಚಿತ್ರದಲ್ಲಿ ನಾನು ನಟಿಸೀನಿ. ಇಷ್ಟ ಆದರೆ, ನಿರ್ಮಾಪಕರು ನನಗೆ ಅವಕಾಧ ಕೊಡಬಹುದು. ಬ್ರೇಕ್‌ ಸಿಕ್ಕರೆ ಮಾತ್ರ ಮುಂದೆ ದುಡ್ಡು ತಗೋತೀನಿ. ಈ ಚಿತ್ರ ಮಾಡೋ ಮುನ್ನ, ನನಗೆ ಏನೂ ಗೊತ್ತಿರಲಿಲ್ಲ. ಇದರಿಂದ ತುಂಬಾ ತಿಳಿದುಕೊಂಡ ಹಾಗಾಯ್ತು’ ಎಂದರು.

ನಂತರ ಧರ್ಮ, ಆಕಾಶ್‌, ಮಮತಾ, ನಿಮಿಷ, ಶಿಲ್ಪ, ವಿನು, ಕೀರ್ತಿರಾಜ್‌, ರಾಮಕೃಷ್ಣ ಎಲ್ಲರೂ ಮಾತಾಡಿ, ಚಿತ್ರಕ್ಕೆ ಸಹಕಾರ, ಪ್ರೋತ್ಸಾಹಗಳನ್ನು ಕೇಳಿದರು.

ಟಾಪ್ ನ್ಯೂಸ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.