![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 20, 2018, 6:00 AM IST
ಸಿನಿಮಾದ ಆಸಕ್ತಿಯಿಂದ ಗಾಂಧಿನಗರಕ್ಕೆ ಬರುವವರ ಸಂಖ್ಯೆಯೇನು ಕಡಿಮೆಯಿಲ್ಲ. ನಟರಾಗಬೇಕು, ಸಿನಿಮಾ ಸಾಹಿತ್ಯ ಬರೆಯಬೇಕು, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಬೇಕು .. ಹೀಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಸತೀಶ್ ಕಮ್ಮಾರ. ಯಾರು ಈ ಸತೀಶ್ ಕಮ್ಮಾರ ಎಂದರೆ ಹೇಳಿಕೊಳ್ಳಲು, ತೋರಿಸಲು ದೊಡ್ಡ ಸಿನಿಮಾ ಯಾವುದೂ ಇಲ್ಲ. ಆದರೆ, ದೊಡ್ಡ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆಯಬೇಕು, ಕನ್ನಡ ಚಿತ್ರರಂಗದ ಗೀತರಚನೆಕಾರರಾದ ನಾಗೇಂದ್ರ ಪ್ರಸಾದ್‌ರಂತೆ ಫೇಮಸ್ ಆಗಬೇಕೆಂಬ ಆಸೆ ಈ ಸತೀಶ್‌ಗಿದೆ. ಈಗಷ್ಟೇ ಚಿತ್ರರಂಗಕ್ಕೆ ಬಂದಿರುವ ಸತೀಶ್ “ಅಮೋಘ’ ಎಂಬ ಸಿನಿಮಾಕ್ಕೆ ಎರಡು ಹಾಡು ಬರೆದಿದ್ದಾರಂತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಿಗೆ ಬರೆಯುವ ಉತ್ಸಾಹ ಅವರಲ್ಲಿದೆ.
“ನಾನು ಪತ್ರಿಕೆ ಹಾಕುತ್ತಾ, ಕ್ಯಾಟರಿಂಗ್ ಕೆಲಸ ಮಾಡುತ್ತಾ ಓದಿದವನು. ಹೀಗೆ ಓದುತ್ತಿರುವಾಗ ಸಿನಿಮಾ ಆಸಕ್ತಿ ಬೆಳೆದು ಹಾಡುಗಳನ್ನು ಬರೆಯಲು ಪ್ರಯತ್ನಿಸಿದೆ. ಚಿತ್ರರಂಗದಲ್ಲಿ ನಾನು ನಾಗೇಂದ್ರ ಪ್ರಸಾದ್ ಅವರನ್ನು ಗುರುವೆಂದು ಸ್ವೀಕರಿಸಿದ್ದೇನೆ. ಅವರಂತೆ ಹಾಡು ಬರೆಯಬೇಕು, ಹೆಸರು ಮಾಡಬೇಕೆಂಬ ಆಸೆ ಇದೆ’ ಎನ್ನುತ್ತಾರೆ ಸತೀಶ್. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಿಂದ ಅವಕಾಶ ಸಿಗುವ ನಿರೀಕ್ಷೆ ಸತೀಶ್‌ಗಿದೆ. ಅಂದಹಾಗೆ, ಸತೀಶ್ ಸದ್ಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ರವಿ ರೈ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.