ಅನೈತಿಕ ಚಟುವಟಿಕೆ ತಾಣವಾದ ಪ್ರಯಾಣಿಕರ ತಂಗುದಾಣ

Team Udayavani, Jul 20, 2018, 12:29 PM IST

kol-2.jpg

ಮುಳಬಾಗಿಲು: ತಾಲೂಕಿನ ಕೆ.ಬೈಯಪಲ್ಲಿ ಮತ್ತು ತಾಯಲೂರು ಹೋಬಳಿಗಳ ವಿವಿಧ ಗ್ರಾಮಗಳ ಬಳಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ತಂಗುದಾಣಗಳು ಶಿಥಿಲಗೊಂಡು ಪುಂಡಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿವೆ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ.

ಮುಳಬಾಗಿಲು ಕೇಂದ್ರದಿಂದ ಕೆ.ಬಯ್ಯಪಲ್ಲಿ ಮತ್ತು ತಾಯಲೂರು ರಸ್ತೆಗಳಲ್ಲಿ ಸಾಕಷ್ಟು ಗ್ರಾಮಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ಸರ್ಕಾರ ಹಲವಾರು ವರ್ಷಗಳ ಹಿಂದೆ ಪ್ರತಿಯೊಂದು ಗೇಟ್‌ಗಳಲ್ಲಿ ಪ್ರಯಾಣಿಕರು ಗಾಳಿ, ಮಳೆ, ಬಿಸಿಲಿ ನಿಂದ ಯಾವುದೇ ತೊಂದರೆಗೆ ಈಡಾಗದಿರಲೆಂಬ ಉದ್ದೇಶ ದಿಂದ ತಂಗುದಾಣಗಳನ್ನು ನಿರ್ಮಿಸಿದೆ.

ತಂಗುದಾಣದಲ್ಲಿ ಮದ್ಯದ ಬಾಟಲಿ: ತಾಲೂಕಿನ ನೆರ್ನೆಹಳ್ಳಿ, ಮಿಟ್ಟಹಳ್ಳಿ, ಅಗ್ರಹಾರ, ಶೆಟ್ಟಿಕಲ್ಲು ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ಗೇಟ್‌ನಲ್ಲಿ ನಿರ್ಮಿಸಲಾಗಿರುವ ತಂಗುದಾಣಗಳು ಶಿಥಿಲಾವಸ್ಥೆ ತಲುಪಿದ್ದು, ತಂಗುದಾಣದಲ್ಲಿ ಗಿಡಗಂಟಿಗಳು ಬೆಳೆದಿವೆ. ಗೋಡೆಗಳಲ್ಲಿನ ಸಿಮೆಂಟ್‌ ಕಿತ್ತು ಬಂದು ಬೀಳುವ ಸ್ಥಿತಿಯನ್ನು ತಲುಪಿದೆ. ಮತ್ತೂಂದು ತಂಗುದಾಣದಲ್ಲಿ ಕೆಲವರು ಮದ್ಯದ ಬಾಟಲಿಗಳ ಚೂರುಗಳನ್ನು ಬಿಸಾಕಿದ್ದಾರೆ. ಇದರಿಂದ ಜನರು ತಂಗುದಾಣದ ಬಳಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಭಯದ ನೆರಳು: ರಾತ್ರಿ ವೇಳೆ ಪುಂಡಪೋಕರಿಗಳು ಇದೇ ತಂಗುದಾಣದಲ್ಲಿ ಕುಳಿತು ಮದ್ಯಪಾನ ಮಾಡಿ ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟ ಣಗಳ ಪ್ಲಾಸಿಕ್ಟ್ ಕವರ್‌ಗಳನ್ನು ಬಿಸಾಡಿರುವುದರಿಂದ ದುರ್ವಾಸನೆ ಬೀರುತ್ತಿದೆ. ಕುಳಿತುಕೊಳ್ಳಲು ಹಾಕಲಾದ ಕಲ್ಲಿನ ಚಪ್ಪಡಿಗಳನ್ನು ಮುರಿದು ಹಾಕಿರುವು ದರಿಂದ ಪ್ರಯಾಣಿಕರು, ವಾಹನ ಸವಾರರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ.

ಅಲ್ಲದೇ, ಇಲ್ಲಿನ ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ ಹೋಗಲು ಸುಮಾರು 1 ರಿಂದ 2 ಕಿ.ಮೀ. ದೂರ ಆಗುತ್ತದೆ. ರಾತ್ರಿ ಸಮಯದಲ್ಲಿ ಗೇಟ್‌ ಬಳಿ ವಿದ್ಯುದ್ಧೀಪ ಇಲ್ಲದಿರುವುದರಿಂದ ವಿಷ ಜಂತುಗಳು, ಕಳ್ಳರು ಮತ್ತು ಕಿಡಿಗೇಡಿಗಳ ಕಾಟದಿಂದ ಪ್ರಯಾಣಿಕರು ಒಂಟಿಯಾಗಿ ತಮ್ಮ ಗ್ರಾಮಗಳಿಗೆ ಭಯದಿಂದ ತೆರಳುವಂತಾಗಿದೆ.

ವಿದ್ಯುದ್ದೀಪವಿಲ್ಲದ ತಂಗುದಾಣ: ತಾಯಲೂರು ರಸ್ತೆಯ ಕನ್ನತ್ತ ಗೇಟ್‌ ಬಳಿಯ ಮೇಲಾಗಾಣಿ ಮತ್ತು ಕನ್ನತ್ತ ಗ್ರಾಮಗಳ ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣ ಸಹ ಶಿಥಿಲಾವ್ಯವಸ್ಥೆ ತಲುಪಿದ್ದು, ಪುಂಡ‌ ಪೋಕರಿಗಳ ಅನೈತಿಕ ಚಟು ವಟಿಕೆ ತಾಣವಾಗಿದೆ. ರಾತ್ರಿ ಸಮಯದಲ್ಲಿ ಗೇಟ್‌ನಲ್ಲಿ ವಿದ್ಯುದ್ದೀಪ ಇಲ್ಲದ ಕಾರಣ ಈ ಗ್ರಾಮಗಳಿಗೆ ತೆರಳಲು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮದ ರಮೇಶ್‌ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಂಗುದಾಣಗಳನ್ನು ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ. 

ಮುಳಬಾಗಿಲು ತಾಲೂಕಿನ ವಿವಿಧ ಗ್ರಾಮಗಳ ಬಸ್‌ ನಿಲ್ದಾಣಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ತಂಗುದಾಣಗಳ ಕುರಿತು ಲೋಕೋಪಯೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಿಶೇಷ ಅನುದಾನದಲ್ಲಿ ಹೊಸ ತಂಗುದಾಣಗಳನ್ನು ನಿರ್ಮಿಸಲಾಗುವುದು. 
 ಹೆಚ್‌.ನಾಗೇಶ್‌, ಶಾಸಕ

ಟಾಪ್ ನ್ಯೂಸ್

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

football

Football Ranking: ಭಾರತ ಒಂದು ಸ್ಥಾನ ಪ್ರಗತಿ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.