ಡೀಸೆಲ್ ಕಾರುಗಳೇ ಅಚ್ಚುಮೆಚ್ಚು
Team Udayavani, Jul 20, 2018, 3:25 PM IST
ಮನೆ ಕಟ್ಟಬೇಕು, ಕಾರು ತೆಗೆಯಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದದ್ದೇ. ಆದರೆ ಕಾರುಗಳ ಖರೀದಿ ವಿಚಾರಕ್ಕೆ ಬಂದಾಗ ಯಾವ ಕಾರು? ಎಷ್ಟು ಬೆಲೆ? ಏನೇನು ಇರಬೇಕು? ದೊಡ್ಡದೋ ಸಣ್ಣದೋ? ಇತ್ಯಾದಿ ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಭಾರತದಲ್ಲಂತೂ ಹಿಂದಿನಿಂದಲೂ ಕಾರು, ಬೈಕ್ ಯಾವುದೇ ಇರಲಿ, ಮೈಲೇಜ್ ಎಷ್ಟು ಎಂದು ಕೇಳಿಯೇ ಕೇಳುತ್ತಾರೆ. ಆದರೂ ಈಗೀಗ, ಐಷಾರಾಮಿ ಕಾರುಗಳಿಗೂ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಕಂಫರ್ಟ್ ಬೇಕು ಎನ್ನುವ ಕಾರಣಕ್ಕೆ ಜನ ದೊಡ್ಡ ಕಾರುಗಳನ್ನೂ ಇಷ್ಟ ಪಡುತ್ತಿದ್ದಾರೆ. ಅಷ್ಟೇ ಅಲ್ಲ ಇವುಗಳಲ್ಲೂ ಡೀಸೆಲ್ ಕಾರುಗಳ ಆಯ್ಕೆಯೇ ಹೆಚ್ಚಾಗಿದೆ.
ಡೀಸೆಲ್ ಕಾರುಗಳತ್ತ ಆಸಕ್ತಿ
ಪೆಟ್ರೋಲ್ ಇಂಧನದ ಮೂಲಕ ಓಡಾಡುವ ಕಾರುಗಳಿಗೇ ಜನ ಹೆಚ್ಚು ಆಸಕ್ತಿ ತೋರುತ್ತಾರಾದರೂ ಈಗೀಗ ಡೀಸೆಲ್ ಕಾರುಗಳತ್ತಲೂ ಜನ ತಿರುಗಿದ್ದಾರೆ. ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಂತೆಯೇ ಡೀಸೆಲ್ ಕಾರುಗಳಿಗೂ ಬೇಡಿಕೆ ಇದ್ದು, ತಲಾ ಶೇ. 50ರ ಪ್ರಮಾಣದಲ್ಲಿ ಎರಡೂ ಕಾರುಗಳು ಮಾರಾಟವಾಗುತ್ತಿವೆ ಎಂಬುದು ಕೆಲ ಶೋರೂಂ ಪ್ರಮುಖರ ಅಭಿಪ್ರಾಯ. ಇನ್ನು ಕೆಲವು ಶೋರೂಂಗಳಲ್ಲಿ ಪೆಟ್ರೋಲ್ ಕಾರುಗಳಿಗೇ ಹೆಚ್ಚು ಬೇಡಿಕೆ.
ಡೀಸೆಲ್ ಬೆಲೆ ಕಡಿಮೆ
ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಪೈಕಿ ಡೀಸೆಲ್ ಕಾರುಗಳಿಗೂ ಬೇಡಿಕೆ ಹೆಚ್ಚಲು ಮುಖ್ಯ ಕಾರಣ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಕಡಿಮೆ ಇರುವುದು. ಪ್ರಸ್ತುತ ಮಾರುಕಟ್ಟೆ ದರಗಳನ್ನು ಗಮನಿಸಿದರೆ ಸುಮಾರು 10 ರೂ.ಗಳಷ್ಟು ದರ ವ್ಯತ್ಯಾಸವಿದೆ. ಅದಕ್ಕಾಗಿ ಜನ ಡೀಸೆಲ್ ಕಾರುಗಳತ್ತ ಚಿತ್ತ ಹರಿಸುತ್ತಿದ್ದಾರೆ. ಆದರೆ ಇದೇ ವೇಳೆ ಕಾರಿನ ಒಟ್ಟು ವೆಚ್ಚ ನೋಡಿದರೆ ಡೀಸೆಲ್ ಇಂಧನ ಚಾಲಿತ ಕಾರಿಗೆ ಪೆಟ್ರೋಲ್ ಇಂಧನ ಚಾಲಿತ ಕಾರಿಗಿಂತ ಸುಮಾರು 1.5 ಲಕ್ಷ ರೂ.ಗಳಷ್ಟು ದರ ಹೆಚ್ಚಿದೆ. ಒಟ್ಟಾರೆ ದರದಲ್ಲಿ ಹೆಚ್ಚಳವಿದ್ದರೂ ಬಳಿಕದ ಖರ್ಚುಗಳು ಡೀಸೆಲ್ ಚಾಲಿತ ಕಾರುಗಳಿಗೆ ಕಡಿಮೆಯೇ ಎನ್ನಬಹುದು.
ಅಧಿಕ ಮೈಲೇಜ್
ಪೆಟ್ರೋಲ್ ಇಂಧನ ಚಾಲಿತ ಕಾರುಗಳಿಗಿಂತ ಡೀಸೆಲ್ ಚಾಲಿತ ಕಾರುಗಳು ಅಧಿಕ ಮೈಲೇಜ್ ನೀಡುವುದರಿಂದ ಜನ ಇದರತ್ತ ಆಸಕ್ತಿ ತಾಳುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗಿಂತ ಐದಾರು ಕಿ.ಮೀ. ಹೆಚ್ಚು ಮೈಲೇಜ್ ಅನ್ನು ಡೀಸೆಲ್ ಕಾರುಗಳು ನೀಡುತ್ತವೆ. ದೊಡ್ಡ, ನಿತ್ಯ ಉಪಯೋಗಿಸುವ ಕಾರುಗಳಾದರೆ ಡೀಸೆಲ್ ಬೆಸ್ಟ್ ಎಂದೂ ಇದೆ. ಜತೆಗೆ ಸವಾರಿಯೂ ಆರಾಮದಾಯಕ ಎಂಬ ಅಭಿಪ್ರಾಯ ಕಾರು ಗ್ರಾಹಕ ವರ್ಗದ್ದು. ಅದಕ್ಕಾಗಿಯೇ ಈ ಕಾರಿನತ್ತ ಆಕರ್ಷಿತರಾಗುತ್ತಾರೆ ಎನ್ನುತ್ತಾರೆ ಕಾರು ಶೋರೂಂ ಪ್ರಮುಖರು.
ಅಧಿಕ ಮೊತ್ತದ ಕಾರುಗಳಿಗೆ ಬೇಡಿಕೆ
ಸಾಮಾನ್ಯವಾಗಿ ಕಡಿಮೆ ಬೆಲೆಯ ಕಾರುಗಳನ್ನು ಖರೀದಿಸುವವರಾದರೆ ಪೆಟ್ರೋಲ್ ಇಂಧನ ಚಾಲಿತ ಕಾರುಗಳನ್ನೇ ಖರೀದಿ ಮಾಡುತ್ತಾರೆ. ಆದರೆ 8 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಕಾರು ಖರೀದಿಸುವುದಿದ್ದರೆ ಡೀಸೆಲ್ ಚಾಲಿತ ಕಾರುಗಳನ್ನು ಖರೀದಿ ಮಾಡುತ್ತಾರೆ. ಆದರೂ ಸುಮಾರು ಶೇ. 20ರಷ್ಟು ಮಂದಿ ಹೀಗೆ ಖರೀದಿ ಮಾಡುವವರಿದ್ದು, ಉಳಿದೆಲ್ಲರೂ ಪೆಟ್ರೋಲ್‌ಚಾಲಿತ ಕಾರುಗಳತ್ತ ಆಸಕ್ತಿ ತೋರಿಸುತ್ತಾರೆ ಎಂಬುದು ಶೋರೂಂಗಳ ಲೆಕ್ಕಾಚಾರ.
ಪರಿಸರ ಪ್ರಜ್ಞೆ
ಡೀಸೆಲ್ ಕಾರುಗಳಲ್ಲಿ ಅಧಿಕ ಮೈಲೇಜ್, ಕಡಿಮೆ ದರದ ಇಂಧನ ಹೀಗೆ ಹತ್ತಾರು ಲಾಭಗಳಿವೆ. ಆದರೆ ಪರಿಸರದ ದೃಷ್ಟಿಯಿಂದ ನೋಡಿದರೆ ಡೀಸೆಲ್ ಕಾರುಗಳು ಅಷ್ಟು ಒಳ್ಳೆಯದಲ್ಲ. ಇವುಗಳ ಎಂಜಿನ್ ಉಗುಳುವ ಹಾನಿಕಾರಕ ಅಂಶಗಳು ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು. ಗ್ರಾಹಕರಲ್ಲೂ ಈಗ ಪರಿಸರ ಪ್ರಜ್ಞೆಯೂ ಅಧಿಕವಿರುವುದರಿಂದ ಈ ಬಗ್ಗೆಯೂ ಯೋಚನೆ ಮಾಡುತ್ತಾರೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.