ಕನ್ನಡ ಸೇವಾ ಸಂಘ ಪೊವಾಯಿ ಇದರ ವಾರ್ಷಿಕ ಪುಸ್ತಕ ವಿತರಣೆ
Team Udayavani, Jul 20, 2018, 3:28 PM IST
ಮುಂಬಯಿ: ಮೌಲ್ಯಾಧಾರಿತ ಸಂಪೂರ್ಣ ಶಿಕ್ಷಣವೊಂದೇ ಸಮಾಜದ ಮತ್ತು ದೇಶದ ಉನ್ನತಿಗೆ ಮೂಲಾಧಾರ. ಶಿಕ್ಷಣವೆಂದರೆ ಕೇವಲ ಜ್ಞಾನಾರ್ಜನೆಯಲ್ಲ, ಇಲ್ಲವೇ ಪದವೀಧರರಾಗುವುದಲ್ಲ, ಅದರ ಜೊತೆಗೆ ಶಿಕ್ಷಣ ಬದುಕುವ ಕಲೆಯನ್ನು ತಿಳಿಸಿಕೊಡಬೇಕು. ಶಿಕ್ಷಣವೇ ಬಾಳಿಗೆ ಬೆಳಕು ಎಂದು ಬಂಟರ ಸಂಘ ಮುಂಬಯಿ ಇದರ ಗೌರವ ಜೊತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ ಅವರು ನುಡಿದರು.
ಕನ್ನಡ ಸೇವಾ ಸಂಘ ಪೊವಾಯಿ ವತಿಯಿಂದ ಸಂಘದ ಸಭಾ ಗೃಹದಲ್ಲಿ ನಡೆದ ಪಾಸ್‌ಪೋಲಿ ಮುನ್ಸಿಪಲ್ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಹ ಮುನ್ಸಿಪಲ್ ಶಾಲೆಯಲ್ಲಿ ಶಿಕ್ಷಣ ಪಡೆದವನು. ಹಾಗಾಗಿ ನಿಮ್ಮಲ್ಲಿ ಸಹ ಅಂತಹ ಯಾವುದೇ ರೀತಿಯ ಕೀಳರಿಮೆ ಬೇಡ. ಕಲಿಯುವ ಆಸಕ್ತಿ ಇದ್ದರೆ ಯಾವುದೇ ಶಾಲೆಯಲ್ಲಿ ಸಹ ಕಲಿಯಬಹುದು. ಕಲಿಯುವ ಆಸಕ್ತಿಯನ್ನು ಬೆಳೆಸಿಕೊಂಡು ವಿದ್ಯಾವಂತ ನಾಗರಿಕರಾಗಿ ಸಮಾಜದಲ್ಲಿ ಮುಂದೆ ಬನ್ನಿ. ಶಿಕ್ಷಣಕ್ಕೆ ನನ್ನಿಂದ ಆಗುವ ಎÇÉಾ ಸಹಕಾರವನ್ನು ಸದಾ ನಿಮಗೆ ನೀಡುತ್ತೇನೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇವಾ ಸಂಘದ ಅಧ್ಯಕ್ಷ ಕರುಣಾಕರ ವಿ. ಶೆಟ್ಟಿ ಅವರು ಮಾತನಾಡಿ, ಶಿಕ್ಷಣವೆಂಬುದು ನಿಧಾನವಾದ ಆದರೆ ನಿರಂತರವಾದ ಒಂದು ಸಾಧನೆ ಮತ್ತು ತಪಸ್ಸು. ಅದು ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕನ್ನಡ ಮಾಧ್ಯಮ ದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಿ¨ªಾರೆ. ಭಾಷೆ ಎನ್ನುವುದು ಕೇವಲ ಪರಸ್ಪರ ಪ್ರತಿಕ್ರಿಯೆಯ ಮಾಧ್ಯಮವಾಗಿದೆ ಎಂಬುದನ್ನು ಮಕ್ಕಳಿಗೆ ತಿಳಿಯ
ಪಡಿಸಿ, ಪ್ರತಿವರ್ಷ ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಗೆ ಸಹಕರಿಸುವ ಎÇÉಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುಸ್ತಕ ವಿತರಣೆಯ ಪ್ರಾಯೋಜಕ
ರಾದ ಸೋನಿ ಸ್ಟೀಲ್ ಅಪ್ಲಾಯನ್ಸ್‌ನ ನಿರ್ದೇಶಕ ಸಿದ್ದೇಶ್ ಪಾಂಡುರಂಗ ಅವರು ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಈ ಪುಸ್ತಕವು ನಿಮ್ಮ ಉಜ್ವಲ ಭವಿಷ್ಯ ನಿರ್ಮಾಣವಾಗಲು ಸಹಕಾರವಾಗಲಿ ಎಂದು ಶುಭ ಹಾರೈಸಿದರು.
ಉಪಾಧ್ಯಕ್ಷ ಸಾಂತೂರು ಅಶೋಕ್ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿದರು. ಸಿದ್ದೇಶ್ ಪಾಂಡುರಂಗ ಶೆಟ್ಟಿ ಅವರನ್ನು ಹಾಗೂ ಪಾಸ್‌ಪೋಲಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿ ಲಕ್ಷ್ಮಣ್, ಶಿಕ್ಷಕರಾದ ರವಿ ಮತ್ತು ಪ್ರಕಾಶ್ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕು| ರಮ್ಯಾ ಶೆಟ್ಟಿ, ಕು| ಭಾಗ್ಯಶ್ರೀ ಪ್ರಾರ್ಥನೆಗೈದರು. ಸಂಘದ ಜೊತೆ ಕಾರ್ಯದರ್ಶಿ ಪ್ರವೀಣಿ ಡಿ. ಸಾಲ್ಯಾನ್ ಪುಸ್ತಕ ಪಡೆದ ಎÇÉಾ ವಿದ್ಯಾರ್ಥಿಗಳ ಹೆಸರನ್ನು ಓದಿ ಹೇಳಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಪೂಜಾರಿ ಧನ್ಯವಾದಗೈದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ, ಸಲಹೆಗಾರ ಆರ್. ಜಿ. ಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ರೈ, ಪ್ರಭಾಕರ ಶೆಟ್ಟಿ ನಾನಯರ ಗರಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಸಂದೇಶ್ ವಿಜಯ್ ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಜ್ಯೋತಿ ಆರ್. ಶೆಟ್ಟಿ, ಅನಿತಾ ಶೆಟ್ಟಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಪಾಲಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.