ಆಧಾರ್‌ ತಿದ್ದುಪಡಿಗೆ ಕಾಡಿದ ಸಿಬಂದಿ, ಮೂಲಸೌಕರ್ಯ ಕೊರತೆ


Team Udayavani, Jul 21, 2018, 6:00 AM IST

aadhaarsss.jpg

ಉಡುಪಿ: ರಾಜ್ಯಾದ್ಯಂತ ಆಗಸ್ಟ್‌ ಮೊದಲವಾರದಿಂದ ಆಧಾರ್‌ ನೋಂದಣಿ, ತಿದ್ದುಪಡಿ ಗ್ರಾ.ಪಂ.ಗಳಲ್ಲೇ ಶುರುವಾಗಲಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಉಡುಪಿ, ಕಾಪು ತಾಲೂಕು ಪ್ರದೇಶಗಳ ಗ್ರಾ.ಪಂ.ಗಳಲ್ಲಿ ಸಿದ್ಧತೆ ಹೇಗಿದೆ? ಎಂಬುದರ ಬಗ್ಗೆ ಉದಯವಾಣಿ ಪರಿಶೀಲನೆ ನಡೆಸಿದೆ. ಈ ವೇಳೆ ಕಂಡುಬಂದ ಅಂಶಗಳು ಹೀಗಿವೆ.

ಶಿರ್ವ
ಆಧಾರ್‌ ತಿದ್ದುಪಡಿಗೆ ಶಿರ್ವ ಗ್ರಾ.ಪಂ. ಕಂಪ್ಯೂಟರ್‌ನೊಂದಿಗೆ ಇಂಟರ್ನೆಟ್‌ ಸೌಲಭ್ಯ ಹೊಂದಿದ್ದು ಪಂಚಾಯತ್‌ ಸಿಬಂದಿಗೆ ಆಧಾರ್‌ ತಿದ್ದುಪಡಿ ಬಗ್ಗೆ ಜಿ.ಪಂ.ನಲ್ಲಿ ತರಬೇತಿ ದೊರೆತಿದೆ. ಇನ್ನೊಂದು ಸುತ್ತಿನ ತರಬೇತಿ ಪಡೆಯುತ್ತಿದ್ದಾರೆ ಎಂದು ಶಿರ್ವ ಪಂ.ಅಭಿವೃದ್ಧಿ ಅಧಿಕಾರಿ ಮಾಲತಿ ತಿಳಿಸಿದ್ದಾರೆ.

ಮೂಡುಬೆಳ್ಳೆ ಗ್ರಾಮ ಪಂಚಾಯತ್‌ನಲ್ಲೂ ಕಂಪ್ಯೂಟರ್‌ನೊಂದಿಗೆ ಇಂಟರ್ನೆಟ್‌ ಸೌಲಭ್ಯ ಹೊಂದಿದೆ. ಸಿಬಂದಿಗೆ ತರಬೇತಿ ನೀಡಲಾಗಿದೆ.  ಸಿಬಂದಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಜನರಿಗೆ ತೊಂದರೆಯಾಗದಂತೆ‌ 3 ತಿಂಗಳ ಮಟ್ಟಿಗೆ ಗೌರವಧನ ನೀಡಿ ಸಿಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬೆಳ್ಳೆ ಗ್ರಾ. ಪಂ.ಪಿಡಿಒ ದಯಾನಂದ ಬೆಣ್ಣೂರ್‌ ತಿಳಿಸಿದ್ದಾರೆ.

ಪಡುಬಿದ್ರಿ
ಪಡುಬಿದ್ರಿ, ಹೆಜಮಾಡಿ, ಪಲಿಮಾರು, ಎಲ್ಲೂರು, ಮುದರಂಗಡಿ, ಬಡಾ, ತೆಂಕ ಗ್ರಾ. ಪಂ.ಗಳಲ್ಲಿ  ಸಾಫ್ಟ್‌ವೇರ್‌ ಅಪ್‌ಡೇಟ್‌, ಸಿಸ್ಟಮ್‌ಗಳೊಡನೆ ಸಿಬಂದಿ ತರಬೇತಿ ನೀಡಲಾಗಿದೆ. ಪಂಚಾಯತ್‌ನ ಡಾಟಾ ಆಪರೇಟರ್‌ಗಳೇ ಈ ಕೆಲಸವನ್ನೂ ನಿಭಾಯಿಸಬೇಕಿದೆ.  ಬಯೋ ಮೆಟ್ರಿಕ್‌ ಸಿಸ್ಟಮ್ಸ್‌, ಕ್ಯಾಮರಾ, ಕಂಪ್ಯೂಟರ್‌ಗಳಿವೆ. ತಮ್ಮ ಸಿಬಂದಿ ಮೂರು ಬಾರಿ ತರಬೇತಿ ಹೊಂದಿದ್ದಾರೆ. ಸ್ಥಳದ ಕೊರತೆಯಿಲ್ಲ.  ಹೆಜಮಾಡಿಯಲ್ಲೂ ಸಿಬಂದಿ ತರಬೇತಿ ಆಗಿದೆ. ಪಂಚಾಯತ್‌ನ ಈಗಿರುವ ಕಂಪ್ಯೂಟರ್‌ಗೆ ಸಾಫ್ಟ್ವೇರ್‌ ಅಪ್ಡೆàಟ್‌ ಆಗಿದೆ. ಕಂಪ್ಯೂಟರ್‌ ಕೊರತೆ ಇದ್ದು ಮುಂದಿನ ಬಾರಿ ಹೊಂದಿಸಿಕೊಳ್ಳಲು ಉದ್ದೇಶಿಸಲಾಗಿದೆ.  ಪಲಿಮಾರಿಗೆ ಹೊಸದಾಗಿ ಕಂಪ್ಯೂಟರ್‌ ಖರೀದಿಸಲಾಗಿದೆ. ತರಬೇತಿ ಆಗಿದ್ದು, ಸಾಫ್ಟ್ವೇರ್‌ ಅಪ್ಡೆàಟ್‌ ಆಗಬೇಕಿದೆ. ಎಲ್ಲೂರು ಗ್ರಾ.ಪಂ.ನಲ್ಲಿ ಯಾವುದೇ ಸಮಸ್ಯೆಯಿಲ್ಲ ಇರುವ ಸಿಬಂದಿಯನ್ನೇ ಇದಕ್ಕೆ ಸಜ್ಜುಗೊಳಿಸಲಾಗಿದೆ.  ಬಡಾ ಗ್ರಾ. ಪಂ.ನಲ್ಲೂ ಕಂಪ್ಯೂಟರ್‌ ಸಿದ್ಧತೆ ನಡೆಯುತ್ತಿದೆ. ತರಬೇತಿ ಆಗಿದೆ. ಪಂಚಾಯತ್‌ ಕೆಲಸದ ನಡುವೆ ಆಧಾರ್‌ ಕೆಲಸವೂ ನಡೆಯಲಿದೆ.  ತೆಂಕ ಗ್ರಾ.ಪಂ. ಕೂಡ ಆಧಾರ್‌ ಕೆಲಸಕ್ಕೆ ಸಿದ್ಧವಾಗಿದೆ. ಮುದರಂಗಡಿ ಗ್ರಾಮದಲ್ಲಿ ಸಾಫ್ಟ್ವೇರ್‌ ಅಪ್ಡೆàಟ್‌ ಆಗಿಲ್ಲ. ಬಾಪೂಜಿ ಸೇವಾ ಕೇಂದ್ರಕ್ಕಾಗಿ ನೇಮಿಸಿದ ಹೆಚ್ಚಿನ ಸಿಬಂದಿಯನ್ನು ಆಧಾರ್‌ ಕೆಲಸಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.  

ಕೋಟ
ಕೋಟ ಹೋಬಳಿಯ ಪಾಂಡೇಶ್ವರ, ಐರೋಡಿ, ಕೋಡಿ, ಕೋಟತಟ್ಟು, ಕೋಟ, ವಡ್ಡರ್ಸೆ, ಶಿರಿಯಾರ, ಯಡ್ತಾಡಿ, ಆವರ್ಸೆ, ಬಿಲ್ಲಾಡಿ ಗ್ರಾ.ಪಂಗಳಲ್ಲಿ ಆಧಾರ್‌ ತಿದ್ದುಪಡಿ, ನೋಂದಣಿ ನಡೆಯಲಿದೆ. ಈಗಾಗಲೇ ಸಾಫ್ಟ್ವೇರ್‌ ಅಳವಡಿಕೆ, ಸಿಬಂದಿ ತರಬೇತಿ ಆಗಿದೆ. ಹೆಚ್ಚಿನ ಎಲ್ಲಾ ಪಂಚಾಯತ್‌ನಲ್ಲಿ  ಬಾಪೂಜಿ ಸೇವಾ ಕೇಂದ್ರ ಅಥವಾ ಡಾಟ ಎಂಟ್ರಿ ಸಿಬಂದಿಗಳಿಗೆ ತರಬೇತಿ ನೀಡಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಿರಿಯಾರದಲ್ಲಿ ಮಾತ್ರ ದೈನಂದಿನ ಕಾರ್ಯ ನಿರ್ವಹಣೆಗೆ ಸಮಸ್ಯೆ ಇದ್ದು, ಆಧಾರ್‌ ಕೆಲಸಕ್ಕೆ ಜನ ಹೆಚ್ಚಾದರೆ ಸಮಸ್ಯೆಯಾಗಲಿದೆ.  

ಮಲ್ಪೆ     
ಅಂಬಲಪಾಡಿ ಗ್ರಾ.ಪಂ.ಕಚೇರಿ ಸಿಬಂದಿ ತರಬೇತಿ ಪಡೆದುಕೊಂಡಿದ್ದಾರೆ. ಆದರೆ ಸಾಫ್ಟ್ವೇರ್‌ ಅಪ್ಡೆàಟ್‌ ಆಗಿಲ್ಲ. ಕಿಟ್‌ಗಳು ಇನ್ನಷ್ಟೆ ಬರಬೇಕಾಗಿದೆ. ಡಾಟಾ ಎಂಟ್ರಿಗೆ ಓರ್ವ ಸಿಬಂದಿ ಮಾತ್ರ ಇದ್ದು ಒತ್ತಡ ಉಂಟಾಗುವ ನಿರೀಕ್ಷೆ ಇದೆ.  ಕಡೆಕಾರು ಗ್ರಾಮಪಂಚಾಯತ್‌ನಲ್ಲಿಯೂ ಸಿಬಂದಿ ಕೊರತೆ ಇದೆ. ಪಂಚಾಯತ್‌ ಆಡಳಿತದಿಂದಲೇ ಓರ್ವ ಪ್ರತ್ಯೇಕ ಸಿಬಂದಿ ನೇಮಿಸಿಕೊಳ್ಳುವ ಯೋಜನೆ ಇದೆ. ತೆಂಕನಿಡಿಯೂರು ಗ್ರಾ.ಪಂ.ನಲ್ಲಿ ಸಿಬಂದಿ ತರಬೇತಿ ಆಗಿದ್ದರೂ ಸಾಫ್ಟ್ವೇರ್‌ ಅಳವಡಿಕೆಯಾಗಿದ್ದಾರೆ. ಬಡಾನಿಡಿಯೂರು ಗ್ರಾ.ಪಂ.ನಲ್ಲೂ ಸಿಬಂದಿ ಕೊರತೆ ಮಧ್ಯೆಯೇ ಸೇವೆಗೆ ಸಿದ್ಧವಾಗಿದ್ದಾರೆ.  
  
ಕಾಪು
ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಮೂರು ಗ್ರಾಮ ಪಂಚಾಯತ್‌ಗಳ ಜನತೆ ಆಧಾರ್‌ ತಿದ್ದುಪಡಿಗೆ ಕಾಪು ನೆಮ್ಮದಿ ಕೇಂದ್ರವನ್ನೇ ಅವಲಂಬಿಸುತ್ತಿದ್ದಾರೆ. 

ಇನ್ನು ಮಜೂರು ಗ್ರಾಮ ಪಂಚಾಯತ್‌ನಲ್ಲಿ ಇರುವ ಕಂಪ್ಯೂಟರನ್ನೇ ಬಳಕೆ ಮಾಡಲು ಉದ್ದೇಶಿಸಲಾಗಿದೆ. ತರಬೇತಿ ನಡೆದಿದ್ದು, ಸರ್ವರ್‌ ಜೋಡಣೆ ಕಾರ್ಯವೂ ಪೂರ್ಣವಾಗಿದೆ.  ಇನ್ನಂಜೆ ಗ್ರಾ.ಪಂ.ನಲ್ಲಿ ಕಂಪ್ಯೂಟರ್‌ಗೆ ಸಾಫ್ಟ್ವೇರ್‌ ಅಳವಡಿಸಲಾಗಿದೆ.
 
ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇವೆ. ಪಂಚಾಯತ್‌ ಡಾಟಾ ಎಂಟ್ರಿ ಸಿಬಂದಿಯೇ ಈ ಕೆಲಸವನ್ನು ನಿರ್ವಹಿಸಲಿದ್ದಾರೆ. ಬೆಳಪು ಗ್ರಾ.ಪಂ.ನಲ್ಲೂ ಸಾಫ್ಟ್ವೇರ್‌ ಅಪ್‌ಲೋಡ್‌ ಆಗಿದೆ. ತರಬೇತಿ ಇತ್ಯಾದಿ ಪೂರ್ಣಗೊಂಡಿದೆ.  ಕುತ್ಯಾರು ಗ್ರಾ.ಪಂ. ನಲ್ಲೂ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ.   

ಕಟಪಾಡಿ
ಕಟಪಾಡಿ ವ್ಯಾಪ್ತಿಯ ಹೆಚ್ಚಿನ ಪಂಚಾಯತ್‌ಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ ಒದಗಿಸದೇ ಇರುವ ವ್ಯವಸ್ಥೆಯಲ್ಲೇ ಆಧಾರ್‌ ಕೆಲಸಕ್ಕೆ ಸಿದ್ಧತೆ ಮಾಡಲಾಗಿದೆ. ಇಲ್ಲಿನ ಕೋಟೆ, ಕಟಪಾಡಿ, ಉದ್ಯಾವರ, ಕುರ್ಕಾಲು ಗ್ರಾ.ಪಂಗಳಲ್ಲಿ ಇರುವ ಡಾಟಾ ಎಂಟ್ರಿ ಸಿಬಂದಿಗೇ ತರಬೇತಿ ನೀಡಲಾಗಿದೆ. ಕೆಲವೆಡೆ ಇನ್ನೂ ಕಂಪ್ಯೂಟರ್‌, ತಂಬ್‌- ಅಕ್ಷಿಪಟಲ ಸ್ಕಾ Âನರ್‌ಗಳನ್ನು ಒದಗಿಸಲಾಗಿಲ್ಲ.

ಬ್ರಹ್ಮಾವರ 
ಬ್ರಹ್ಮಾವರ ಭಾಗದ ಬಹುತೇಕ ಗ್ರಾ.ಪಂಗಳಲ್ಲಿ ಸಿಬಂದಿ ಕೊರತೆ ತೀವ್ರವಾಗಿದ್ದು, ಇರುವ ಸಿಬಂದಿಗೇ ತರಬೇತಿ ನೀಡಲಾಗಿದೆ. ಈಗಾಗಲೇ ಬಹುತೇಕ ಗ್ರಾ.ಪಂ.ಗಳಲ್ಲಿ ಸಿಬಂದಿ ಕೊರತೆ ಕಾಡುತ್ತಿದೆ. ಈಗಿರುವ ಸಿಬಂದಿಗಳೇ ಹೆಚ್ಚುವರಿ ಸೇವೆ ನಿರ್ವಹಿಸಬೇಕಾಗಿದೆ. ತಾಲೂಕು ವ್ಯಾಪ್ತಿಯ ವಾರಂಬಳ್ಳಿ, ಚಾಂತಾರು, ಹಂದಾಡಿ, ಹಾರಾಡಿ, ನೀಲಾವರ, ಆರೂರು, ಚೇರ್ಕಾಡಿ, ಕರ್ಜೆ, ಕಳೂ¤ರು, ನಾಲ್ಕೂರು, ಕೊಕ್ಕರ್ಣೆ, ಕಾಡೂರು, ಹೆಗ್ಗುಂಜೆ, ಹನೆಹಳ್ಳಿ, ಬಾರಕೂರು, ಉಪ್ಪೂರು, ಹಾವಂಜೆ, ಕುಕ್ಕೆಹಳ್ಳಿ ಗ್ರಾ.ಪಂ.ಗಳಲ್ಲಿ ಸೇವೆ ಪ್ರಾರಂಭಗೊಳ್ಳಲಿದ್ದು ಕಂಪ್ಯೂಟರ್‌ ವ್ಯವಸ್ಥೆ ಕೆಲಸಗಳು ನಡೆದಿವೆ. ಸರ್ವರ್‌ಗೆ ಸಂಪರ್ಕವೂ ಕೆಲವೆಡೆ ಪೂರ್ಣಗೊಂಡಿಲ್ಲ.

ಯಾವೆಲ್ಲಾ ಸೌಲಭ್ಯಗಳಿರುತ್ತವೆ ?
ಆಧಾರ್‌ ಕಾರ್ಡಗೆ ಸಂಬಂಧಪಟ್ಟಂತೆ ನೋಂದಣಿ, ಫೋಟೋ ಬದಲಾವಣೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ, ಮೊಬೈಲ್‌ ಸಂಖ್ಯೆ, ಬೆರಳಚ್ಚು ಇತ್ಯಾದಿಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ.

ಪರಿಣಾಮಗಳೇನು? 
– ಆಧಾರ್‌ ನೋಂದಣಿ, ತಿದ್ದುಪಡಿ ಗ್ರಾಮದಲ್ಲೇ ಆಗುವುದರಿಂದ ಉಡುಪಿ, ಕಾಪು ವರೆಗೆ ಹೋಗಬೇಕಾದ ಆವಶ್ಯಕತೆ ಇಲ್ಲ.  
– ಆಧಾರ್‌ ತಿದ್ದಪಡಿಯಾದಲ್ಲಿ  ರೇಷನ್‌ ಕಾರ್ಡ್‌ ವ್ಯವಹಾರಗಳನ್ನೂ ಸುಲಭವಾಗಿ ಮಾಡಬಹುದು. 
– ಸಾಫ್ಟ್ವೇರ್‌, ಸರ್ವರ್‌ ಜೋಡಣೆ, ಇಂಟರ್ನೆಟ್‌ ಸಂಪರ್ಕ ಸರಿಯಾಗಿದ್ದರೆ ಸುಲಭವಾಗಿ ಆಧಾರ್‌ ಕೆಲಸ ನಡೆಯಲಿದೆ. 
– ಆಧಾರ್‌ ಕುರಿತ ಕೆಲಸಗಳು ಆರಂಭವಾದ ಬಳಿಕವೇ ಅದರ ಸಾಫ್ಟ್ವೇರ್‌ ಸಮಸ್ಯೆ, ಸರ್ವರ್‌ ಸಮಸ್ಯೆ ಇತ್ಯಾದಿಗಳು  ಆಡಳಿತದ ಗಮನಕ್ಕೆ ಬರಬಹುದು.
– ಹಲವೆಡೆ ಕಣ್ಣು ಮತ್ತು ಬೆರಳು ಗುರುತು ತೆಗೆದುಕೊಳ್ಳು ಮಷೀನ್‌ಗಳು ಇನ್ನಷ್ಟೇ ಬರಬೇಕಿದೆ. ಕೆಲವೆಡೆ ಲಾಗಿನ್‌ ಸಮಸ್ಯೆ ಇದೆ.  

ಟೋಕನ್‌ ವ್ಯವಸ್ಥೆ ಬೇಕು 
ಆಧಾರ್‌ ನೋಂದಣಿ, ತಿದ್ದುಪಡಿಗಾಗಿ ಹಲವು ಕಡೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಬೇಡಿಕೆಯಿದ್ದು ಜನದಟ್ಟನೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಕೆಲವು ಕಡೆ ಟೋಕನ್‌ ನೀಡಿ ಸರತಿಯಂತೆ ತಿದ್ದುಪಡಿ ಮಾಡುವ ಚಿಂತನೆ ನಡೆದಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಜನರು ಆತಂಕದಿಂದ ಮುಗಿಬಿಳುವ ಅವಶ್ಯಕತೆ ಇಲ್ಲ ಎನ್ನುವುದು ಅಧಿಕಾರಿಗಳ ಕಿವಿ ಮಾತಾಗಿದೆ.

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.