ಫಖರ್ ದ್ವಿಶತಕ; ಪಾಕ್ ದಾಖಲೆ ಆಟ
Team Udayavani, Jul 21, 2018, 6:00 AM IST
ಬುಲವಾಯೊ: ಸಾಲು ಸಾಲು ದಾಖಲೆಗಳ ಮೂಲಕ ಆತಿಥೇಯ ಜಿಂಬಾಬ್ವೆ ಮೇಲೆ ಸವಾರಿ ಮಾಡಿದ ಪಾಕಿಸ್ಥಾನ, ಶುಕ್ರವಾರದ 4ನೇ ಏಕದಿನ ಪಂದ್ಯವನ್ನು 244 ರನ್ನುಗಳಿಂದ ಗೆದ್ದು 5 ಪಂದ್ಯ ಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಪಾಕಿಸ್ಥಾನ ಪರ ಮೊದಲ ದ್ವಿಶತಕ ಬಾರಿಸಿದ ಫಖರ್ ಜಮಾನ್, ಮೊದಲ ವಿಕೆಟಿಗೆ ಫಖರ್ ಜಮಾನ್-ಇಮಾಮ್ ಉಲ್ ಹಕ್ ಜೋಡಿಯ 304 ರನ್ನುಗಳ ವಿಶ್ವದಾಖಲೆಯ ಜತೆಯಾಟ, ಏಕದಿನ ಇತಿಹಾಸದಲ್ಲಿ ಪಾಕಿಸ್ಥಾನದ ಗರಿಷ್ಠ ಸ್ಕೋರ್… ಈ ರೀತಿಯಾಗಿ ಬುಲವಾಯೊ ಪಂದ್ಯ ಇತಿಹಾಸ ನಿರ್ಮಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ಕೇವಲ ಒಂದು ವಿಕೆಟಿಗೆ 399 ರನ್ ಪೇರಿಸಿತು. ಇದರಲ್ಲಿ ಫಖರ್ ಜಮಾನ್ ಪಾಲು ಅಜೇಯ 210 ರನ್. ಅವರ ಜತೆಗಾರ ಇಮಾಮ್ ಉಲ್ ಹಕ್ 113 ರನ್ ಬಾರಿಸಿದರು. ಜವಾಬಿತ್ತ ಜಿಂಬಾಬ್ವೆ 42.4 ಓವರ್‌ಗಳಲ್ಲಿ 155ಕ್ಕೆ ಆಲೌಟ್ ಆಯಿತು. ಶಾಬಾದ್ ಖಾನ್ 4 ವಿಕೆಟ್ ಉರುಳಿಸಿದರು.
ಪಾಕ್ ಪರ ಮೊದಲ ಡಬಲ್ ಸೆಂಚುರಿ
17ನೇ ಪಂದ್ಯವಾಡುತ್ತಿರುವ ಎಡಗೈ ಆರಂಭಕಾರ ಫಖರ್ ಜಮಾನ್ ಪಾಕಿಸ್ಥಾನ ಏಕದಿನ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರನಾಗಿ ಮೂಡಿಬಂದರು. ಜಿಂಬಾಬ್ವೆ ಬೌಲರ್‌ಗಳಿಗೆ ಜಿಗುಟಾಗಿ ಕಾಡಿದ ಅವರು 156 ಎಸೆತಗಳಿಗೆ ಜವಾಬಿತ್ತರು. ಸಿಡಿಸಿದ್ದು 24 ಬೌಂಡರಿ ಹಾಗೂ 5 ಸಿಕ್ಸರ್. 1997ರಷ್ಟು ಹಿಂದೆ ಭಾರತದೆದುರಿನ ಚೆನ್ನೈ ಪಂದ್ಯದಲ್ಲಿ ಆರಂಭಕಾರ ಸಯೀದ್ ಅನ್ವರ್ 194 ರನ್ ಬಾರಿಸಿದ್ದು ಪಾಕ್ ಕ್ರಿಕೆಟಿಗನೊಬ್ಬನ ಈವರೆಗಿನ ಸರ್ವಾಧಿಕ ಮೊತ್ತವಾಗಿತ್ತು. ನಿಧಾನ ಗತಿಯಲ್ಲಿ ಆಡಿದ ಇಮಾಮ್ 122 ಎಸೆತಗಳಿಂದ 113 ರನ್ ಬಾರಿಸಿದರು (8 ಬೌಂಡರಿ).
ಫಖರ್ ಜಮಾನ್-ಇಮಾಮ್ ಉಲ್ ಹಕ್ ಜೋಡಿ ಮೊದಲ ವಿಕೆಟಿಗೆ 42 ಓವರ್‌ಗಳಲ್ಲಿ 304 ರನ್ ಪೇರಿಸಿತು. ಇದು ಏಕದಿನದಲ್ಲಿ ಮೊದಲ ವಿಕೆಟಿಗೆ ದಾಖಲಾದ ಮೊದಲ ತ್ರಿಶತಕದ ಜತೆಯಾಟ. ಒಟ್ಟಾರೆಯಾಗಿ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲಾದ 4ನೇ ತ್ರಿಶತಕದ ಜತೆಯಾಟ. ಇದರೊಂದಿಗೆ ಇಂಗ್ಲೆಂಡ್ ಎದುರಿನ 2006ರ ಲೀಡ್ಸ್ ಪಂದ್ಯದಲ್ಲಿ ಸನತ್ ಜಯಸೂರ್ಯ-ಉಪುಲ್ ತರಂಗ ಪ್ರಥಮ ವಿಕೆಟಿಗೆ 286 ರನ್ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.
ಪಾಕಿಸ್ಥಾನ ಕೇವಲ ಒಂದು ರನ್ ಕೊರತೆಯಿಂದ 400 ರನ್ನುಗಳ ಕ್ಲಬ್ ಸೇರುವಲ್ಲಿ ವಿಫಲವಾಯಿತು. ಆದರೆ ಇದು ಪಾಕಿಸ್ಥಾನದ ಗರಿಷ್ಠ ಸ್ಕೋರ್ ಆಗಿ ದಾಖಲಾಯಿತು. ಇದಕ್ಕೂ ಮುನ್ನ 2010ರ ಬಾಂಗ್ಲಾದೇಶ ವಿರುದ್ಧದ ಡಂಬುಲ ಪಂದ್ಯದಲ್ಲಿ 7 ವಿಕೆಟಿಗೆ 385 ರನ್ ಗಳಿಸಿದ್ದು ಸರ್ವಾಧಿಕ ಮೊತ್ತವಾಗಿತ್ತು.
ಏಕದಿನ ದ್ವಿಶತಕ ಸರದಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.