ಮಿಸ್ಟರ್ ಪ್ರಧಾನಮಂತ್ರಿ… ಇದೇನಾ ದೇಶ ಮುನ್ನಡೆಸುವ ಪರಿ?
Team Udayavani, Jul 21, 2018, 6:00 AM IST
ನವದೆಹಲಿ: ಅವಿಶ್ವಾಸ ಗೊತ್ತುವಳಿ ಮಂಡಿಸಿದ ತೆಲಗು ದೇಶಂ ಪಕ್ಷ (ಟಿಡಿಪಿ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೀರಾವೇಶದಿಂದ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಪ್ರಯತ್ನ ನಡೆಸಿತು. 52 ವರ್ಷ ವಯಸ್ಸಿನ ಕೋಟ್ಯಧಿಪತಿ, ಉದ್ಯಮಿ ಜಯದೇವ್ ಗಲ್ಲಾ ಅವರೇ ಅವಿಶ್ವಾಸ ಗೊತ್ತುವಳಿಗೆ ಚಾಲನೆ ನೀಡಿ, ಏರಿದ ಧ್ವನಿಯಲ್ಲಿ ಸರ್ಕಾರದ ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ತರಾಟೆಗೆ ತೆಗೆದುಕೊಂಡರು.
ವಿದೇಶದಲ್ಲಿ ಶಿಕ್ಷಣ ಪಡೆದು, ಮೊದಲ ಬಾರಿಗೆ ಆಂಧ್ರದ ಗುಂಟೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಜಯದೇವ್, ಅಮರ ರಾಜಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು. ದೇಶದ ಉತ್ತಮ ಸಿಇಒ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಇವರು 680 ಕೋಟಿ ರೂ. ಆಸ್ತಿಯ ಒಡೆಯ. ಅಮರಾನ್ ಬ್ಯಾಟರೀಸ್ ಮಾಲೀಕರೂ ಹೌದು. ತೆಲಗು ಸಿನಿಮಾವೊಂದರ ಕಥೆಯನ್ನು ಆಧಾರವಾಗಿಟ್ಟುಕೊಂಡು ಮಾತು ಆರಂಭಿಸಿದ ಜಯದೇವ್, ಬಳಿಕ ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿ ಕೊಂಡು ವಾಗ್ಧಾಳಿ ನಡೆಸಿದರು. “”ಮಿಸ್ಟರ್ ಪ್ರಧಾನಮಂತ್ರಿ, ನೀವು ನೀಡಿರುವ ಭರವಸೆಯಂತೆ, ನೀವು ನಿಮ್ಮ ಬದ್ಧತೆಯನ್ನಾದರೂ ಗೌರವಿಸುತ್ತೀರೋ ಹೇಗೆ? ದೇಶವನ್ನು ಹೇಗೆ ಮುನ್ನಡೆಸುತ್ತಿದ್ದೀರಾ ಎನ್ನುವುದರ ಬಗ್ಗೆ ಅರಿವಾದರೂ ಇದೆಯೋ ಇಲ್ಲವೋ? ನಮ್ಮಿಂದ ಊಹಿಸಲಿಕ್ಕೂ ಆಗದು. ಆಂಧ್ರ ಪ್ರದೇಶ ಸ್ಥಿತಿಯನ್ನೇ ಉದಾಹರಿಸಿ ಹೇಳುವುದಾದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಭರವಸೆಗಳಲ್ಲಿ ಕಿಂಚಿತ್ತೂ ಈಡೇರಿಲ್ಲ” ಎಂದು ಕಿಡಿಕಾರಿದರು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಗಳೆಲ್ಲವೂ ಹುಸಿಯಾಗಿದೆ ಎಂದು ಕೆಂಡಾಮಂಡಲರಾದರು.
ಬಹುಮತ, ನೈತಿಕತೆಯ ಯುದ್ಧ: ಮಾತಿನ ಉದ್ದಕ್ಕೂ ಪ್ರಧಾನಿ ಮೋದಿ ಅವರ ಮೇಲೆ ಕಿಡಿಕಾರಿದ ಜಯದೇವ್, “”ಇದು ಕೇವಲ ಟಿಡಿಪಿ ಮತ್ತು ಬಿಜೆಪಿ ನಡುವಿನ ಯುದ್ಧವಲ್ಲ. ಬಹುಮತ ಮತ್ತು ನೈತಿಕತೆಯ ನಡುವಿನ ಸಮರ. ಇದು ಸರ್ವಾಧಿಕಾರ ಧೋರಣೆಯ ವಿರುದ್ಧದ ಹೋರಾಟ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.