ಉಡುಪಿ ಶ್ರೀಕೃಷ್ಣಮಠದ ಗರ್ಭಗುಡಿ ಶುದ್ಧೀಕರಣ
Team Udayavani, Jul 21, 2018, 11:12 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಹಾಭಿಷೇಕಕ್ಕೆ ಪೂರ್ವಭಾವಿಯಾಗಿ ಪ್ರತೀವರ್ಷ ನಡೆಯುವಂತೆ ಗರ್ಭಗುಡಿಯೊಳಗೆ ಉಧ್ವರ್ತನೆಯನ್ನು (ಶುದ್ಧೀಕರಣ) ವಿವಿಧ ಮಠಾಧೀಶರು ಶುಕ್ರವಾರ ನಡೆಸಿದರು. ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಪಾಲ್ಗೊಂಡರು.
ಉಧ್ವರ್ತನೆಯ ಸಂದರ್ಭ ತುಪ್ಪದ ನಂದಾ ದೀಪವನ್ನು ಕೇವಲ ಸಾಂಕೇತಿಕವಾಗಿ ಇರಿಸಿಕೊಂಡು ವಿಗ್ರಹವನ್ನು ತಟ್ಟಿಯಿಂದ ಮುಚ್ಚಲಾಗುತ್ತದೆ. ಸ್ವಾಮೀಜಿಯವರ ತಲೆಗೆ ನೀರು ಬೀಳದಂತೆ ಬಾಳೆ ಎಲೆಯ ಟೋಪಿಯನ್ನು ಧರಿಸುತ್ತಾರೆ. ಶುಚಿಗೊಳಿಸಿದ ಬಳಿಕ ದೀಪಗಳನ್ನು ಯಥಾಸ್ಥಿತಿಯಲ್ಲಿಡುತ್ತಾರೆ, ಮಹಾ ಪೂಜೆ ಮತ್ತೆ ನಡೆಯುತ್ತದೆ.
ರವಿವಾರ ಬೆಳಗ್ಗೆ 8.30ಕ್ಕೆ ಮಹಾಭಿಷೇಕ ಆರಂಭವಾಗುತ್ತದೆ. ಇದರಲ್ಲಿ ಕನಿಷ್ಠ 1,008 ಎಳನೀರು, 92 ಲೀ. ಹಾಲು, ಇದರ ಅರ್ಧ ಅಂದರೆ 46 ಲೀ. ಮೊಸರು, ತಲಾ ಹತ್ತು ಕೆ.ಜಿ. ಜೇನು ತುಪ್ಪ ಮತ್ತು ತುಪ್ಪ, 25 ಕೆ.ಜಿ. ಬೆಲ್ಲವನ್ನು ಅಭಿಷೇಕ ಮಾಡಲಾಗುತ್ತದೆ. ಇವುಗಳನ್ನು ತಂದು ಕೊಡುವ ಭಕ್ತರಿದ್ದಾರೆ. ರವಿವಾರ ಇದನ್ನು ಭಕ್ತರಿಗೆ ತೀರ್ಥರೂಪದಲ್ಲಿ ನೀಡಲಾಗುತ್ತದೆ. ಇದು ಪ್ರತಿವರ್ಷ ಆಷಾಢಶುದ್ಧ ದಶಮಿ ದಿನ ನಡೆಯುತ್ತದೆ. ಮರು ದಿನ ಪ್ರಥಮ ಏಕಾದಶಿದಿನದಂದು ಮುದ್ರಾಧಾರಣೆ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.