ಮಾನಸಿಕ ಕುಸಿತ ಸೃಷ್ಟಿಸುವ ತೊನ್ನು
Team Udayavani, Jul 22, 2018, 6:00 AM IST
ಹಿಂದಿನ ವಾರದಿಂದ- ಪ್ರಾದೇಶಿಕ ಚಿಕಿತ್ಸೆಗಳು
ಇವು ತೊನ್ನು ಚಿಕಿತ್ಸೆಯ ಅವಶ್ಯ ಭಾಗಗಳಾಗಿದ್ದು, ಸ್ಟಿರಾಯ್ಡಗಳು ಅಥವಾ ಇಮ್ಯುನೊಮಾಡ್ಯುಲೇಟರ್‌ಗಳನ್ನು ಹೊಂದಿರುವ ಕ್ರೀಮುಗಳನ್ನು ಪೀಡಿತ ಭಾಗಕ್ಕೆ ಹಚ್ಚುವುದನ್ನು ಒಳಗೊಂಡಿವೆ.
ಚರ್ಮದ ವಿಶೇಷ ಹೊದಿಕೆಗಳು
ತೊನ್ನಿನ ಬಿಳಿಯ ಕಲೆಗಳು ಉಂಟಾ ಗಿರುವ ಭಾಗವನ್ನು ಮುಚ್ಚುವಂತೆ ವಿಶೇಷ ಬಣ್ಣದ ಕ್ರೀಮುಗಳನ್ನು ಹಚ್ಚು ವುದು ಈ ಚಿಕಿತ್ಸೆಯಲ್ಲಿ ಒಳಗೊಂಡಿದೆ. ಈ ಚಿಕಿತ್ಸೆ ಈ ಕಾಯಿಲೆಯನ್ನು ಬದಲಾಯಿಸುವುದಿಲ್ಲ ಅಥವಾ ಗುಣಪಡಿಸುವುದಿಲ್ಲ, ಆದರೆ ಚರ್ಮದ ರೂಪವನ್ನು ಉತ್ತಮಪಡಿಸುತ್ತದೆ. ನಿಮ್ಮ ಚರ್ಮದ ಸಹಜ ಬಣ್ಣವನ್ನು ಹೋಲುವ ಬಣ್ಣವನ್ನು ಒದಗಿಸುವುದು ಈ ಚಿಕಿತ್ಸೆಯ ಗುರಿಯಾಗಿದೆ.
ಲೇಸರ್ ಚಿಕಿತ್ಸೆಗಳು
ತೊನ್ನಿಗೆ ಚಿಕಿತ್ಸೆಯಲ್ಲಿ ಲೇಸರ್ ಚಿಕಿತ್ಸೆಯ ಒಂದು ರೂಪ ವಾದ ಎಕ್ಸಿಮರ್ ಲೇಸರ್ ಪರಿಣಾಮ ಕಾರಿಯಾಗಿರುವುದು ಸಾಬೀತಾಗಿದೆ.
ಶಸ್ತ್ರಕ್ರಿಯೆಯ ಮೂಲಕ ಚರ್ಮ ಕಸಿ
ತೊನ್ನು ಪೀಡಿತ ಚರ್ಮದ ಸಣ್ಣ ಪ್ರದೇಶಗಳಿಗೆ ಸಹಜ ಚರ್ಮವನ್ನು ಕಸಿ ಮಾಡುವ ಚಿಕಿತ್ಸೆಯನ್ನು ಪ್ರಯೋಗಿ ಸಲಾಗಿದೆ. ಕಸಿಯ ವಿವಿಧ ವಿಧಾನಗಳು ಲಭ್ಯವಿವೆ: ಮಿನಿ ಪಂಚ್ ಗ್ರಾಫ್ಟಿಂಗ್ ವಿಧಾನದಲ್ಲಿ ಆಯಾ ವ್ಯಕ್ತಿಯ ಚರ್ಮದ ಜೀವಕೋಶಗಳಿಂದ ಕಸಿಗಳನ್ನು ತೆಗೆದು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಣ್ಣ ಕಳೆದುಕೊಂಡ ಚರ್ಮಭಾಗದಲ್ಲಿ ಕಿರು ಕುಳಿಗಳನ್ನು ಕೊರೆಯಲಾಗುತ್ತದೆ. ತೊಡೆ ಅಥವಾ ಪೃಷ್ಠಭಾಗದ ಆರೋಗ್ಯಯುತ ಚರ್ಮದಿಂದ ಅಷ್ಟೇ ಗಾತ್ರದ ಚರ್ಮದ ತುಣುಗಳನ್ನು ತೆಗೆಯಲಾಗುತ್ತದೆ. ಇವುಗಳನ್ನು ಚರ್ಮ ಬಣ್ಣ ಕಳೆದುಕೊಂಡ ಭಾಗದಲ್ಲಿ ಮಾಡಲಾದ ಕುಳಿಗಳಲ್ಲಿ ಇರಿಸಿ ಸೂಕ್ತವಾಗಿ ಬ್ಯಾಂಡೇಜ್ ಮಾಡಲಾಗುತ್ತದೆ. ಬ್ಯಾಂಡೇಜನ್ನು 7 ದಿನಗಳ ಬಳಿಕ ತೆಗೆಯಲಾಗುತ್ತದೆ. ಕೆಲವು ದಿನಗಳ ಬಳಿಕ ಕಸಿ ಮಾಡಲಾದ ಭಾಗವನ್ನು ಬೆಳಕು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕಸಿ ಮಾಡಲಾದ ಚರ್ಮದ ಬಣ್ಣವು ಮೇಲ್ಮೆ„ಯಲ್ಲಿ ಪ್ರಸರಣಗೊಂಡು ಬಿಳಿ ಕಲೆಯಲ್ಲಿ ಬಣ್ಣ ಮೂಡುತ್ತದೆ. ಈ ಚಿಕಿತ್ಸೆಯನ್ನು ತೊನ್ನಿನ ಸಣ್ಣ ಕಲೆಗಳಿರುವ ವ್ಯಕ್ತಿಗಳಿಗೆ ಉಪಯೋಗಿಸುತ್ತಾರೆ. ಶಸ್ತ್ರಚಿಕಿತ್ಸೆಯ ಇತರ ವಿಧಾನಗಳಲ್ಲಿ ಅತಿ ತೆಳುವಾದ ಎಪಿಡರ್ಮಲ್ ಕಸಿ ಮತ್ತು ಸಕ್ಷನ್ ಬ್ಲಿಸ್ಟರ್ ಕಸಿ ಸೇರಿವೆ. ಇತ್ತೀಚೆಗೆ ಎಪಿಡರ್ಮಲ್ ಸೆಲ್ ಮತ್ತು ಮೆಲಾನೊಸೈಟ್ ಸೆಲ್ ಕಸಿಯನ್ನೂ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
ಪಿಗೆ¾ಂಟ್ ತೆಗೆಯುವಿಕೆ
ವ್ಯಾಪಕವಾದ ತೊನ್ನು ಇದ್ದು, ಸ್ವಲ್ಪವೇ ಭಾಗದಲ್ಲಿ ಸಹಜ ಚರ್ಮ ಹೊಂದಿರುವವರಿಗೆ ಸಹಜ ಚರ್ಮದ ಪಿಗೆ¾ಂಟನ್ನು ಹೈvxೊÅಕ್ವಿನಾನ್ ಎಂಬ ಕ್ರೀಮ್ ಉಪಯೋಗಿಸಿ ತೆಗೆದುಹಾಕ ಬಹುದು ಮತ್ತು ಚರ್ಮ ಏಕರೂಪದ ಬಣ್ಣ ಹೊಂದಿರುವಂತೆ ಮಾಡಬಹುದು.
ಪೂರಕ ಚಿಕಿತ್ಸೆ
ತೊನ್ನು ರೋಗಿಗಳು ಅಪಾರ ಒತ್ತಡದಲ್ಲಿ ಇರಬಹುದಾಗಿದ್ದು, ತರಬೇತಿ ಹೊಂದಿದವರಿಂದ ಆಪ್ತ ಸಮಾಲೋಚನೆ ಅವರಿಗೆ ಅಗತ್ಯವಾಗಬಹುದು. ತೊನ್ನು ಪೀಡಿತರ ಸಮೂಹ ಸಮಾಲೋಚನೆ, ಚರ್ಚೆಯು ಇತ್ತೀಚೆಗೆ ತೊನ್ನು ಪೀಡಿತರಾದವರಿಗೆ ಆತ್ಮಸ್ಥೈರ್ಯವನ್ನೂ ಆಶಾವಾದವನ್ನೂ ಒದಗಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.