ಜಾಂಡಿಸ್ ಅಥವಾ ಕಾಮಾಲೆ
Team Udayavani, Jul 22, 2018, 6:00 AM IST
ಜಾಂಡಿಸ್ ಅಥವಾ ಕಾಮಾಲೆ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಇದರ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ನಿಮಗೆ ಜಾಂಡಿಸ್ ಇದೆ ಎಂಬುದಾಗಿ ಯಾವುದೇ ರೋಗಿಗೆ ಹೇಳಿದರೆ ಸಾಕು, ಆಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಅದಕ್ಕೆ ಔಷಧವೇ ಇಲ್ಲ ಎಂಬಂತೆ ಆಯುರ್ವೇದ ವೈದ್ಯರತ್ತ ಧಾವಿಸುತ್ತಾರೆ. ಜಾಂಡಿಸ್‌ನ ವಿವಿಧ ಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಬಾರಿ ಜಾಂಡಿಸ್ ಜತೆಗೆ ಮುಖಾಮುಖೀಯಾದಾಗ ಏನು ಮಾಡಬೇಕು ಎಂಬ ಬಗ್ಗೆ ನಿಮ್ಮ ಅರಿವನ್ನು ವಿಸ್ತರಿಸುವ ಪ್ರಯತ್ನ ಈ ಲೇಖನದಲ್ಲಿದೆ.
ಜಾಂಡಿಸ್ ಅಥವಾ ಅರಶಿನ ಕಾಮಾಲೆಯಲ್ಲಿ ಕಣ್ಣು ಮತ್ತು ಚರ್ಮ ಹಳದಿಯಾಗುತ್ತವೆ. ಬಹುತೇಕ ಬಾರಿ ಮೂತ್ರವೂ ಹಳದಿಯಾಗುತ್ತದೆ, ಆದರೆ ಯಾವಾಗಲೂ ಅಲ್ಲ. ಕೆಲವು ಪ್ರಕರಣಗಳಲ್ಲಿ ಕಣ್ಣುಗಳು ಹಳದಿ ಬಣ್ಣ ತಾಳುತ್ತವೆ, ಆದರೆ ಮೂತ್ರದ ಬಣ್ಣ ಸಹಜವಾಗಿರುತ್ತದೆ. ಇದರ ಬಗ್ಗೆ ಮುಂದೆ ವಿವರಿಸುತ್ತೇನೆ.
ಈಗ ಕಣ್ಣುಗಳು ಏಕೆ ಹಳದಿಯಾಗುತ್ತವೆ ಎಂಬುದನ್ನು ನೋಡೋಣ. ಇದಕ್ಕೆ ಕಾರಣ ರಕ್ತದಲ್ಲಿ ಬಿಲಿರುಬಿನ್ ಪ್ರಮಾಣ ಹೆಚ್ಚಳವಾಗುವುದು. ಸಾಮಾನ್ಯವಾಗಿ ಇದು ರಕ್ತದಲ್ಲಿ ಡೆಸಿಲೀಟರ್‌ಗೆ ಒಂದು ಮಿ. ಗ್ರಾಂಗಿಂತ ಕಡಿಮೆ ಇರುತ್ತದೆ, ಇದು 2 ಮಿಲಿಗ್ರಾಂಗಿಂತ ಹೆಚ್ಚಾದರೆ ಕಣ್ಣುಗಳು ಹಳದಿಯಾಗುವುದನ್ನು ಕಾಣಬಹುದು.
ಈ ಬಿಲಿರುಬಿನ್
ಬರುವುದೆಲ್ಲಿಂದ?
ನಮ್ಮ ರಕ್ತದಲ್ಲಿ ಇರುವ ಕೆಂಪು ರಕ್ತಕಣಗಳ ಜೀವಿತಾವಧಿ ಸುಮಾರು 120 ದಿನಗಳು. ಈ ಕೆಂಪು ರಕ್ತಕಣಗಳು ಹಳೆಯದಾದಂತೆ ಅವುಗಳು ಪ್ಲೀಹ (ಸ್ಪ್ಲೀನ್) ನಲ್ಲಿ ನಾಶ ಹೊಂದುತ್ತವೆ. ರಕ್ತದಲ್ಲಿರುವ ಹಿಮೊಗ್ಲೊಬಿನ್ ವಿಭಜನೆಯಾಗಿ ಹೆಮೆ ಎಂಬ ಪ್ರೊಟೀನ್ ಉತ್ಪಾದನೆಯಾಗುತ್ತದೆ. ಈ ಹೆಮೆಗಳು ಬಿಲಿರುಬಿನ್ ಆಗಿ ವಿಭಜನೆಯಾಗುತ್ತವೆ. ಸಾಮಾನ್ಯವಾಗಿ ಈ ಬಿಲಿರುಬಿನ್‌ಗಳನ್ನು ಪಿತ್ತಕೋಶವು ಸ್ವೀಕರಿಸಿ ಅದು ಪಿತ್ತರಸದಲ್ಲಿ ಹೊರಹರಿಯುವಂತೆ ಪರಿವರ್ತಿಸುತ್ತದೆ. ಈ ಪಿತ್ತರಸವು ಬಳಿಕ ಕರುಳನ್ನು ಪ್ರವೇಶಿಸಿದಾಗ ಬಹುತೇಕ ಬಿಲಿರುಬಿನ್‌ಗಳು ಸ್ಟೆರ್ಕೊಬ್ಲಿನ್ ಆಗಿ ಪರಿವರ್ತನೆಗೊಂಡು ಮಲದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ.
– ಮುಂದಿನ ವಾರಕ್ಕೆ
– ಡಾ| ಬಿ. ವಿ. ತಂತ್ರಿ,
ವಿಭಾಗ ಮುಖ್ಯಸ್ಥರು,
ಗ್ಯಾಸ್ಟ್ರೊಎಂಟರಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.