ಗೂಗಲ್‌ನಲ್ಲಿ ಪ್ರಳಯ ಭವಿಷ್ಯ?
Team Udayavani, Jul 22, 2018, 6:00 AM IST
ವಾಷಿಂಗ್ಟನ್: ಜಗತ್ ಪ್ರಳಯದ ಸಂದೇಶವೊಂದು ಗೂಗಲ್ ಟ್ರಾನ್ಸ್‌ಲೇಷನ್ ಟೂಲ್‌ನಲ್ಲಿ ಅಚಾನಕ್ ಆಗಿ ಕಂಡುಬಂದಿದ್ದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಸ್ತಿಕರ ಹಾಗೂ ನಾಸ್ತಿಕರ ನಡುವಿನ ವೈಚಾರಿಕ ಸಮರಕ್ಕೆ ನಾಂದಿ ಹಾಡಿದೆ. ಮನುಷ್ಯನು ಇಂದು ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿರುವುದರಿಂದ ಭಗವಂತ ತಂತ್ರಜ್ಞಾನದ ಮೂಲಕವೇ ಎಚ್ಚರಿಕೆಯ ಸಂದೇಶವೊಂದು ರವಾನಿಸಿದ್ದಾನೆ. ಈಗಲಾದರೂ ಅರ್ಥ ಮಾಡಿಕೊಳ್ಳಿರೆಂದು ಆಸ್ತಿಕರು ಪ್ರಲಾಪಿಸುತ್ತಿದ್ದರೆ, ನಾಸ್ತಿಕರು ಈ ವಾದವನ್ನು ತಳ್ಳಿಹಾಕಿದ್ದಾರೆ.
ಏನಿದು ಗೊಂದಲ?: ಸಾಮಾನ್ಯವಾಗಿ ಗೂಗಲ್ ಟ್ರಾನ್ಸ್‌ಲೇಷನ್‌ನ ವೆಬ್‌ಪುಟದಲ್ಲಿ ಎರಡು ಅಂಕಣಗಳಿರುತ್ತವೆ. ಮೊದಲನೆ ಯದರಲ್ಲಿ ನಮಗೆ ಅರ್ಥವಾಗದ ಭಾಷೆಯ ಶಬ್ದ ಅಥವಾ ವಾಕ್ಯ ಟೈಪಿಸಿದರೆ, ಎರಡನೆಯದರಲ್ಲಿ ನಮ್ಮ ಆಯ್ಕೆಯ ಭಾಷೆಯಲ್ಲಿ ಅದರ ಅರ್ಥ ಮೂಡುತ್ತದೆ. ಮೊದಲನೆಯ ಅಂಕಣದಲ್ಲಿ ಪಶ್ಚಿಮ ಆಫ್ರಿಕಾದ ಯೊರುಬಾ ಭಾಷೆ ಆಯ್ಕೆ ಮಾಡಿಕೊಂಡು ಅಲ್ಲಿ, ಛಟಜ ಎಂದು 18 ಬಾರಿ ಟೈಪಿಸಿದರೆ, ಬಲಭಾಗದ ಭಾಷಾಂತರ ರೂಪವಾಗಿ, “”ಜಗತ್ ಪ್ರಳಯಕ್ಕೆ ಕ್ಷಣಗಣನೆ ಶುರುವಾಗಿದೆ. ಜಗತ್ತು ಅಂತ್ಯವಾಗುವ ಮೂಲಕ ಯೇಸುಕ್ರಿಸ್ತನು ಮತ್ತೆ ಹುಟ್ಟಿ ಬರಲಿದ್ದಾನೆ” ಎಂದು ಮೂಡಿ ಬರುತ್ತದೆ. ಇದೇ ಈಗ ಆಸ್ತಿಕರ ನಿದ್ದೆಗೆಡಿಸಿರುವ ವಿಚಾರ.
ಗೂಗಲ್ ಹೇಳ್ಳೋದೇನು?: ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್, ಟ್ರಾನ್ಸ್‌ಲೇಷನ್ ಟೂಲ್, ಕೃತಕ ಬುದ್ಧಿಮತ್ತೆ (ಎ.ಐ) ಆಧಾರ ದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಅಸಂಬದ್ಧ ಇನ್‌ಪುಟ್ ನೀಡಿದರೆ ಔಟ್‌ಪುಟ್ ಕೂಡ ಅಸಂಬದ್ಧವಾಗಿ ಇರುತ್ತದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.