ಕಾಂಗ್ರೆಸ್‌ನದ್ದು ಅನಗತ್ಯ ಅಪ್ಪುಗೆ

Team Udayavani, Jul 22, 2018, 6:00 AM IST

23.jpg

ಲಕ್ನೋ: ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಪರೀಕ್ಷೆಯಲ್ಲಿ ಗೆದ್ದ ನಂತರ ಶನಿವಾರ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬೃಹತ್‌ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ಕೇವಲ ಪ್ರಧಾನಿ ಕುರ್ಚಿ ಮೇಲೆ ಮಾತ್ರವೇ ಕಣ್ಣಿದೆ ಎಂದಿದ್ದಾರೆ. ಅಲ್ಲದೆ, ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾರಣವನ್ನು ನಾವು ಕೇಳಿದೆವು. ಆದರೆ ಅದನ್ನು ಕೊಡದೇ ಅವರು ಅನಗತ್ಯ ಅಪ್ಪುಗೆ ನೀಡಿದರು ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ ನಂತರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಕುಳಿತಿದ್ದಲ್ಲಿಗೆ ಆಗಮಿಸಿ ಕೈಕುಲುಕಿ ತಬ್ಬಿಕೊಂಡಿದ್ದನ್ನು ಪರೋಕ್ಷವಾಗಿ ಉಲ್ಲೇಖೀಸಿ ಮೋದಿ ಈ ವ್ಯಂಗ್ಯವಾಡಿದ್ದಾರೆ.

ಅಲ್ಲದೆ ವಿಪಕ್ಷಗಳು ತೃತೀಯ ರಂಗ ರಚಿಸುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಮೋದಿ, ಹಲವು ದಳಗಳು ಸೇರಿದರೆ ಕಮಲ ಅರಳುವುದಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ. ಲೋಕಸಭೆಯಲ್ಲಿ ನಿನ್ನೆ ಏನು ನಡೆಯಿತು ಎಂದು ನೀವು ನೋಡಿದ್ದೀರಲ್ಲವೇ? ನಿಮಗೆ ಸರಿ ಎನಿಸಿತೇ? ಕಾಂಗ್ರೆಸ್‌ಗೆ ಬಡವರು ಕಾಣುವುದಿಲ್ಲ. ಅವರಿಗೆ ಕೇವಲ ಪ್ರಧಾನಿ ಕುರ್ಚಿಯ ಮೇಲೆ ಮಾತ್ರವೇ ಕಣ್ಣು ಎಂದಿದ್ದಾರೆ. ನಾನೇನಾದರೂ ತಪ್ಪು ಮಾಡಿದ್ದೇನೆಯೇ? ದೇಶಕ್ಕಾಗಿ ಹಾಗೂ ಬಡವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನಾನು ಮಾಡಿದ ಅಪರಾಧ ಎಂದು ಅವರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸರಕಾರವು ಕಬ್ಬಿನ ತ್ಯಾಜ್ಯ ಹಾಗೂ ರಸದಿಂದ ಎಥನಾಲ್‌ ನಿರ್ಮಾಣ ಮಾಡಲು ಮಿಲ್‌ಗ‌ಳಿಗೆ ಅವಕಾಶ ನೀಡುತ್ತಿದೆ. ಇದು ಡಿಸೆಂಬರ್‌ 1 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. 

ಭಾರತೀಯರ ವರ್ಚಸ್ಸು ಕುಂದಿಸಿದ ರಾಹುಲ್‌
ರಫೇಲ್‌ ಡೀಲ್‌ ವಿಚಾರದಲ್ಲಿ ಸುಳ್ಳು ಆರೋಪ ಮಾಡಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಹೆಸರು ಉಲ್ಲೇಖೀಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಭಾರತದ ರಾಜಕಾರಣಿಗಳ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಾಸಿಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. ಶುಕ್ರವಾರ ಸದನದಲ್ಲಿ ರಾಹುಲ್‌, ರಫೇಲ್‌ ಡೀಲ್‌ನಲ್ಲಿ ಬೆಲೆ ಮಾಹಿತಿ ಗೌಪ್ಯವಾಗಿರಿಸುವ ಷರತ್ತುಗಳಿಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷರೇ ನನಗೆ ಹೇಳಿದ್ದಾರೆ ಎಂದು ಹೇಳಿದ್ದರು. ಶನಿವಾರ ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಜೇಟ್ಲಿ, ರಾಹುಲ್‌ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುವ ಜೊತೆಗೆ ಭಾರತೀಯ ರಾಜಕಾರಣಿಗಳ ಗೌರವಕ್ಕೂ ಗಂಭೀರ ಧಕ್ಕೆ ಉಂಟು ಮಾಡಿದ್ದಾರೆ. ಪ್ರಧಾನಿಯಾಗುವ ನಿರೀಕ್ಷೆಯಿದ್ದವರು ಅಜ್ಞಾನ, ಸುಳ್ಳು ಹಾಗೂ ಸರ್ಕಸ್‌ನ ಮೊರೆ ಹೋಗಬಾರದು. ಅವಿಶ್ವಾಸ ಗೊತ್ತುವಳಿ ಎಂಬುದು ಗಂಭೀರ ಸಂಗತಿ.  ಸರಕಾರ, ದೇಶದ ಮುಖ್ಯಸ್ಥರ ಜೊತೆಗೆ ಆಡಿದ ಮಾತನ್ನು ತಪ್ಪಾಗಿ ಉಲ್ಲೇಖೀಸಿದರೆ, ಮುಂದೆ ನಿಮ್ಮೊಂದಿಗೆ ಮಾತನಾಡಲು ಯಾವುದೇ ಮುಖಂಡರು ಹಿಂಜರಿಯುತ್ತಾರೆ. ಅವಿಶ್ವಾಸ ಗೊತ್ತುವಳಿ ವೇಳೆ ನಿಮ್ಮ ಮಾತೇ ಪಕ್ಷದ ಅಧಿಕೃತ ಚರ್ಚೆಯ ವಿಷಯವಾಗಿದ್ದರೆ, ನಿಮ್ಮ ಪಕ್ಷವನ್ನು ದೇವರೇ ರಕ್ಷಿಸಬೇಕು ಎಂದಿದ್ದಾರೆ.. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಸ್ಪಂದನ, “ಜೇಟ್ಲಿ ಅವರಿಗೂ ಅಪ್ಪುಗೆಯ ಅಗತ್ಯವಿದೆ’ ಎಂದಿದ್ದಾರೆ.

ಪ್ರಧಾನಿ ಅವರ ಭಾಷಣ ದ್ವೇಷ, ಭಯ ಹಾಗೂ ಕೋಪದಿಂದ ಕೂಡಿತ್ತು. ಆದರೆ ಕಾಂಗ್ರೆಸ್‌ ಪ್ರೀತಿ, ಸಹಾನುಭೂತಿ ಯಿಂದ ದೇಶದ ಜನರ ಮನಗೆದ್ದಿದೆ. ಇದರಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ. ಪ್ರಜೆಗಳ ಹೃದಯ ಗೆಲ್ಲಲೂ ಸಾಧ್ಯ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ವಿಷದ ಸೂಜಿ ಚುಚ್ಚಲು ರಷ್ಯನ್ನರು, ಉ.ಕೊರಿಯಾ ದವರು ಅಪ್ಪುಗೆ ತಂತ್ರ ಬಳಸುತ್ತಾರೆ. ಸುನಂದಾ ಪುಷ್ಕರ್‌ ಕೈಯಲ್ಲಿ ಇದ್ದಂತೆ ಮೈಕ್ರೋಸ್ಕೋಪಿಕ್‌ ಚುಚ್ಚುವಿಕೆ ಗುರುತು ಇದೆಯೇ ಎಂದು ಪರಿಶೀ ಲಿಸಲು ಮೋದಿ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು.
ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ

ಮೋದಿ ನಮ್ಮ ರಾಜ್ಯದ ಜನರ ಭಾವನೆಗಳನ್ನು ಅರ್ಥಮಾಡಿ ಕೊಳ್ಳ ಲಿಲ್ಲ. 2019ರಲ್ಲಿ ಮತ್ತೆ ಎನ್‌ಡಿಎ ತೆಕ್ಕೆಗೆ ಟಿಡಿಪಿ ಹೋಗುವುದಿಲ್ಲ. 
ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸಿಎಂ

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.