ರಾಜ್ಯದಲ್ಲಿ ಲಾಟರಿ ಮುಖ್ಯಮಂತ್ರಿ
Team Udayavani, Jul 22, 2018, 11:48 AM IST
ಬೆಂಗಳೂರು: “ರಾಜ್ಯದಲ್ಲಿ ಲಾಟರಿ ಮುಖ್ಯಮಂತ್ರಿ ಅಧಿಕಾರದಲ್ಲಿದ್ದು ಮೂರನೇ ಸ್ಥಾನದಲ್ಲಿದ್ದರೂ ಪ್ರಥಮ ಬಹುಮಾನ ಪಡೆದಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರು ನಗರ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, “ಕೇಂದ್ರದಲ್ಲಿ ಪಪ್ಪು ನೀತಿಯುಳ್ಳ ವಿರೋಧ ಪಕ್ಷ ಇದೆ. ರಾಜ್ಯದಲ್ಲಿ ಅಳುಮುಂಜಿ ಸರ್ಕಾರ ಇದೆ. ಸಮಾರಂಭಗಳಲ್ಲಿ ಟವಲ್ ಹಿಡಿದುಕೊಂಡ ಕೂಡಲೇ ಮುಖ್ಯಮಂತ್ರಿ ಯವರಿಗೆ ಅಳು ಬರುತ್ತದೆ. ಕುಮಾರಸ್ವಾಮಿ ಏಕೆ ಕಣ್ಣೀರು ಹಾಕ್ತಾರೆ ಎಂಬ ಬಗ್ಗೆ ಈ ಹಿಂದೆ ಜಮೀರ್ ಅಹಮದ್ ಚೆನ್ನಾಗಿ ಹೇಳುತ್ತಿದ್ದರು,’ ಎಂದರು.
ಉಲ್ಟಾ ಹೊಡೆದ ಮನ್ನಾ: ಸಾಲಮನ್ನಾ ಮಾಡಿದರೆ ತಾನು ದೊಡ್ಡ ನಾಯಕ ಆಗಿಬಿಡುತ್ತೇನೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ, ಅದು ಅವರಿಗೆ ಉಲ್ಟಾ ಆಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಪರಸ್ಪರ ಬಡಿದಾಟದಲ್ಲಿ ತೊಡಗಿದ್ದು, ಸರ್ಕಾರಕ್ಕೆ ಭವಿಷ್ಯವಿಲ್ಲ. ಕಾಂಗ್ರೆಸ್‌ನವರು ಮುಖ್ಯಮಂತ್ರಿ ಮೇಲೆ ಟೀಕಾಸ್ತ್ರದ ಕ್ಷಿಪಣಿ ಬಿಡುತ್ತಿದ್ದಾರೆ. ಈಗಾಗಲೇ ಕಚ್ಚಾಟ ಆರಂಭವಾಗಿದ್ದು ಯಾವಾಗ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
ಒಬ್ಬ ಸಚಿವರು ಶಾಸಕರನ್ನು ಕರೆದುಕೊಂಡು ಅಜ್ಮಿರ್‌ಗೆ ಹೋಗುತ್ತಾರೆ. ಸಚಿವ ಸ್ಥಾನ ಸಿಗದ ಎಂ.ಬಿ.ಪಾಟೀಲ್ ಕುದಿಯುತ್ತಿದ್ದಾರೆ. ಎಚ್. ಕೆ.ಪಾಟೀಲ್ ಸರ್ಕಾರಕ್ಕೆ ಲವ್ ಲೆಟರ್ ಬರೆಯುತ್ತಾರೆ. ಎರಡೂ ಪಕ್ಷಗಳಲ್ಲಿ ಸಮನ್ವಯತೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಅಶೋಕ್ ತಿಳಿಸಿದರು.
ಮಾಫಿಯಾ ನಗರ: ಬಿಬಿಎಂಪಿ ವಿಭಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇಂತಹ ಕ್ರಮಕ್ಕೆ ಮುಂದಾದರೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಬೆಂಗಳೂರನ್ನು ಕಸದ ಮಾಫಿಯಾ, ಡ್ರಗ್ ಮಾಫಿಯಾ ನಗರವನ್ನಾಗಿ ಮಾಡಲಾಗಿದ್ದು ಎರಡೂ ಮಾಫಿಯಾ ನಿಯಂತ್ರಿಸುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.
ಶಾಸಕ ಡಾ. ಸಿ.ಎನ್.ಅಶ್ವಥ್‌ನಾರಾಯಣ, ನಗರ ಘಟಕ ಅಧ್ಯಕ್ಷ ಸದಾಶಿವ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಉಪಸ್ಥಿತರಿದ್ದರು. ಕಾರ್ಯಕಾರಿಣಿಗೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಗೈರು ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ಗೆ ಹೊಸದಾಗಿ ಆಯ್ಕೆಯಾದ ರವಿಕುಮಾರ್, ಕೆ.ಪಿ.ನಂಜುಂಡಿ, ಅ.ದೇವೇಗೌಡ ಅವರನ್ನು ಸನ್ಮಾನಿಸಲಾಯಿತು.
ರಾಹುಲ್ ಪಪ್ಪು ಅನ್ನೊದು ಸಾಬೀತು
“ಸಂಸತ್ತು ಗ್ರಾಮ ಪಂಚಾಯಿತಿ ಅಲ್ಲ. ಕಾರ್ಪೊರೇಷನ್ ಸಹ ಅಲ್ಲ. 120 ಕೋಟಿ ಜನರನ್ನು ಪ್ರತಿನಿಧಿಸುವ ಶ್ರೇಷ್ಠ ಸ್ಥಾನ. ಅಂತಹ ಜಾಗದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಸಂಸತ್‌ನಲ್ಲಿ ಕಣ್ಣು ಹೊಡೆಯುವ ಮೂಲಕ ರಾಹುಲ್, ಕಾಂಗ್ರೆಸ್ಸಿಗರಿಂದಲೇ ಟೀಕೆಗೆ ಗುರಿಯಾಗಿದ್ದಾರೆ.ನಿಜವಾಗಿಯೂ ತಾನೇ ಪಪ್ಪು ಎಂಬುದನ್ನು ರಾಹುಲ್‌ಗಾಂಧಿ ಶುಕ್ರವಾರ ಸಂಸತ್‌ನಲ್ಲಿ ಬೀತುಪಡಿಸಿದ್ದಾರೆ,’ ಎಂದು ಆರ್.ಅಶೋಕ್ ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.