ಬಂಟ್ವಾಳ: ಸ್ವಚ್ಛ  ಶನಿವಾರ ವೇಳಾಪಟ್ಟಿ ನಿಗದಿ


Team Udayavani, Jul 22, 2018, 12:07 PM IST

s-guruva-koraga-new.jpg

ಬಂಟ್ವಾಳ : ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸ್ವಚ್ಛ  ಶನಿವಾರ ಕಾರ್ಯಕ್ರಮಕ್ಕೆ ಕ್ಷೇತ್ರ ಸಂಪನ್ಮೂಲ ಕೇಂದ್ರ ವೇಳಾಪಟ್ಟಿ ರೂಪಿಸಿದೆ.

ಕಳೆದ ವರ್ಷ ಸ್ವಚ್ಛತೆ ಉದ್ದೇಶದ ಕೈತೊಳೆಯುವ 8 ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಎಲ್ಲ ಶಾಲೆಗಳಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿತ್ತು. ಅದರಿಂದ ಪ್ರೇರಿತರಾಗಿ ಕಳೆದ ವರ್ಷವೇ ಸ್ವಚ್ಛತಾ ಅರಿವು ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿತ್ತು. ಪ್ರಸ್ತುತ ವರ್ಷಕ್ಕೆ ಅದನ್ನು ಜೂನ್‌ ಮೊದಲ ವಾರದಿಂದ ಮತ್ತಷ್ಟು ಪರಿಷ್ಕರಿಸಿ ಸ್ವಚ್ಛತಾ ನೀತಿ ರಚನೆ, ಶಾಲಾ ಪರಿಸರದಲ್ಲಿ ಗಿಡ ನೆಡುವುದು, ಮಲಿನ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು, ಮಳೆಗಾಲದಲ್ಲಿ ಹರಡುವ ರೋಗ-ರುಜಿನಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ, ಸ್ವಚ್ಛತೆ ಬಗ್ಗೆ ಕವನ ರಚನೆಯಂತಹ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿವೆ.

ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಮಾರ್ಗದರ್ಶನದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್‌ ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯಕ್ಕೆ ವೇಳಾಪಟ್ಟಿ ನಿಗದಿ ಮಾಡಿದ್ದಾರೆ.  ವೇಳಾಪಟ್ಟಿಯಂತೆ ಮಳೆ ನೀರಿನ ಕೊಯ್ಲು ಶಿಕ್ಷಕರಿಂದ ಮಾಹಿತಿ, ಪ್ರಾತ್ಯಕ್ಷಿಕೆ, ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಕುರಿತ ಭಾಷಣ ಸ್ಪರ್ಧೆ, ಕಸ ದಿಂದ ರಸ ಕಾರ್ಯಾಗಾರ, ಆಹಾರ ಪೋಲು ಮಾಡದಂತೆ ಜಾಗೃತಿ, ಪ್ಲಾಸ್ಟಿಕ್‌ ಬಳಕೆ ನಿಷೇಧ ಬಗ್ಗೆ ಅರಿವು, ಸ್ವಚ್ಛ ಭಾರತ ನನ್ನ ಕೊಡುಗೆ ಪ್ರಬಂಧ ಸ್ಪರ್ಧೆ, ತ್ಯಾಜ್ಯ ಪುನರ್ಬಳಕೆ, ವಿಲೇ ವಾರಿ ತಿಳಿವಳಿಕೆ, ಶೌಚಾಲಯ ಬಳಕೆ, ಆರೋಗ್ಯ ಬಗ್ಗೆ ಚರ್ಚೆ, ಪರಿಸರ ಬಗ್ಗೆ ರಸಪ್ರಶ್ನೆ, ಆರೋಗ್ಯಾಧಿಕಾರಿಗಳೊಂದಿಗೆ ಸಂವಾದ, ಜಾಗೃತಿ ಜಾಥಾ, ಕೈತೊಳೆಯುವ ಅಭ್ಯಾಸ ಪ್ರಾತ್ಯಕ್ಷಿಕೆ, ಚುಟುಕು ರಚನೆ, ಕಸ ವಿಂಗಡಣೆ, ಅರಿವು, ಮನೆ ಮನೆ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ಲಾಸ್ಟಿಕ್‌ ಕುರಿತು ಜಾಗೃತಿ, ಕೃಷಿಕರ ತಂತ್ರಜ್ಞಾನದ ಮಾಹಿತಿ,ಸ್ವಚ್ಛತೆ ಅರಿವು ವಾರ್ಷಿಕ ಕ್ರಿಯಾ ಯೋಜನೆಯಲ್ಲಿದೆ.

ಪ್ರೇರಣೆ
ಸ್ವಚ್ಛ ಶನಿವಾರ ಕಲ್ಪನೆಯಂತೆ ಸ್ವಚ್ಛತೆ, ಅದಕ್ಕೆ ಸಂಬಂಧಿಸಿ ಜಾಗೃತಿ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲು ಇದೇ ಜೂನ್‌ನಿಂದ 2019ರ ಫೆಬ್ರವರಿ ತನಕ ವೇಳಾಪಟ್ಟಿ ನೀಡಲಾಗಿದೆ. ಪಟ್ಟಿಯಂತೆ ಯಾವುದಾದರೂ ಕಾರ್ಯಕ್ರಮ ನಡೆಸಬಹುದು. ವಿದ್ಯಾರ್ಥಿಗಳಿಗೆ ಇದರಿಂದ ಸ್ವಚ್ಛತೆ ಅರಿವು ಆಗುವುದು. ಇದೊಂದು ಸ್ವಚ್ಛತೆ ಬಗೆಗಿನ ಅಭಿಯಾನ ಆಗಬೇಕು. 
 - ಎನ್‌. ಶಿವಪ್ರಕಾಶ್‌
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

ಟಾಪ್ ನ್ಯೂಸ್

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

1-koragajja

C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

rajnath 2

PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ

siddaramaiah

Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ

1-yoon-sook

South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ

Kenchappa-Gowda

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ

delhi air

Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

1-koragajja

C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

1-cc

Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು

arrested

BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ

rajnath 2

PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.