ಉಡುಪಿ: ಕೊನೆಗೂ ಇನ್ನಂಜೆ ರೈಲು ನಿಲ್ದಾಣ ಮೇಲ್ದರ್ಜೆಗೆ


Team Udayavani, Jul 23, 2018, 6:00 AM IST

040718astro08.jpg

ಉಡುಪಿ: ಬಹುನಿರೀಕ್ಷಿತ ಶಂಕರಪುರ ಸನಿಹದ ಇನ್ನಂಜೆ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆದಿದ್ದು ಡಿಸೆಂಬರ್‌ಗೆ ಪೂರ್ಣವಾಗುವ ನಿರೀಕ್ಷೆ ಇದೆ. 

ತ್ವರಿತ ಕಾಮಗಾರಿ 
ನಿಲ್ದಾಣಕ್ಕೆ ಸಂಬಂಧಿಸಿ ಶೇ.60ರಷ್ಟು ಕೆಲಸವಾಗಿದೆ.  ಹಳಿ  ಜೋಡಣೆಗೆ ನೆಲ ಸಮತಟ್ಟುಗೊಳಿಸಲಾಗುತ್ತಿದೆ. ಸದ್ಯ ಮಳೆಯಿಂದ ಈ ಕಾಮಗಾರಿ ನಿಂತಿದೆ. ಉಳಿದಂತೆ ಕಟ್ಟಡ ಕೆಲಸಗಳು ಮುಂದುವರಿದಿವೆ. 
 
ಸೌಲಭ್ಯಗಳು ಏನೆಲ್ಲ? 
600 ಮೀ. ಉದ್ದದ ಫ್ಲಾಟ್‌ಫಾರಂ, 1.2 ಕಿ.ಮೀ. ಉದ್ದದ ಲೂಪ್‌ಲೈನ್‌, ಕಟ್ಟಡದಲ್ಲಿ ವೈಟಿಂಗ್‌ ಹಾಲ್‌, ಶೌಚಾಲಯಗಳು, ಟಿಕೆಟ್‌ ಕೌಂಟರ್‌, ಸ್ಟೇಷನ್‌ ಮಾಸ್ಟರ್‌ ಕಚೇರಿ, ಕುಡಿಯುವ ನೀರಿನ ವ್ಯವಸ್ಥೆ, ಸಿಎಸ್‌ಆರ್‌ ಕೊಠಡಿ ಇರುತ್ತದೆ. ಫ್ಲಾಟ್‌ಫಾರಂಗೆ ಇಳಿಯಲು ವಿಶಾಲವಾದ ಮೆಟ್ಟಿಲುಗಳನ್ನು ಮತ್ತು ರ್‍ಯಾಂಪ್‌ಗ್ಳನ್ನು ಹಾಕಲಾಗುತ್ತದೆ. ಪಕ್ಕದಲ್ಲೇ ಸಿಬಂದಿ ವಸತಿ ಗೃಹ ನಿರ್ಮಾಣ ಹಂತದಲ್ಲಿದೆ. ನಿಲ್ದಾಣ ಪಕ್ಕ ರಸ್ತೆ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 11.33 ಕೋಟಿ ರೂ. ವೆಚ್ಚದಲ್ಲಿ ಪುಣೆಯ ಐಎಸ್‌ಸಿ ಸಂಸ್ಥೆ ಕಾಮಗಾರಿ ನಡೆಸುತ್ತಿದೆ.
 
ಯಾವೆಲ್ಲ ರೈಲುಗಳಿಗೆ ನಿಲುಗಡೆ?
ಪ್ರಸ್ತುತ ಇಲ್ಲಿ ಮಂಗಳೂರು- ಮಡ್ಗಾಂವ್‌ ಪ್ಯಾಸೆಂಜರ್‌ ರೈಲು (ಬೆಳಗ್ಗೆ 7.40), ಮಡ್ಗಾಂವ್‌ – ಮಂಗಳೂರು ಪ್ಯಾಸೆಂಜರ್‌ (ಸಂಜೆ 7.52), ಮಂಗಳೂರು-ಮಡ್ಗಾಂವ್‌ ಡೆಮೂ(ಸಂಜೆ 4.29), ಮಡ್ಗಾಂವ್‌- ಮಂಗಳೂರು ಡೆಮೂ (ಬೆಳಗ್ಗೆ 10.20) ರೈಲುಗಳ ನಿಲುಗಡೆಯಾಗುತ್ತಿದೆ. ರೈಲು ಬರುವ ಕೆಲಹೊತ್ತಿನ ಮೊದಲು ಟಿಕೆಟ್‌ ನೀಡಲಾಗುತ್ತದೆ. ಉಳಿದಂತೆ ಬೇರೆ ಯಾವುದೇ ವ್ಯವಸ್ಥೆಗಳಿಲ್ಲ.
 
ಮೇಲ್ದರ್ಜೆಗೇರಿಕೆಗೆ ಒತ್ತಾಯ 
ಈ ನಿಲ್ದಾಣ ಮೇಲ್ದರ್ಜೆಗೇರಬೇಕೆನ್ನುವ ಒತ್ತಾಯ ಬಹಳ ಹಿಂದಿನದು. 1993ರ ಮಾರ್ಚ್‌ನಿಂದ ಇಲ್ಲಿ ರೈಲು ನಿಲುಗಡೆ ಆರಂಭಗೊಂಡಿತ್ತು. ಆದರೆ ಒಂದೇ ವರ್ಷದಲ್ಲಿ ಅದು ರದ್ದಾಯಿತು. ಮುಖ್ಯ ಲೇನ್‌ಗೆ ಹೊಂದಿಕೊಂಡಿದ್ದ ಪ್ಲಾಟ್‌ಫಾರಂ ಕೂಡ ಕೆಡವಲಾಗಿತ್ತು. ಬಳಿಕ ಹೋರಾಟದ ಫ‌ಲವಾಗಿ ನಿಲುಗಡೆ ಪುನರಾರಂಭವಾಗಿದೆ. ಮೇಲ್ದರ್ಜೆಗೇರಿದ ಬಳಿಕ ರೈಲುಗಳ ಸಂಖ್ಯೆ ಹೆಚ್ಚಾಗಬಹುದೇ ಎಂಬ ಬಗ್ಗೆ ಮಾಹಿತಿ ಅಧಿಕಾರಿಗಳಿಂದ ಸಿಕ್ಕಿಲ್ಲ. ಇಲ್ಲಿನ ಅವ್ಯವಸ್ಥೆ ಬಗ್ಗೆ “ಉದಯವಾಣಿ’ ಹಲವು ಬಾರಿ ರೈಲ್ವೆ ಇಲಾಖೆಯ ಗಮನ ಸೆಳೆದಿತ್ತು.
  
ಇನ್ನು ಕ್ರಾಸಿಂಗ್‌ ಸ್ಟೇಷನ್‌ 
ಇದು ಪ್ರಸ್ತುತ ಹಾಲ್ಟ್ ಸ್ಟೇಷನ್‌ ಮಾತ್ರ ಆಗಿತ್ತು. ಇನ್ನೊಂದು ರೈಲು ಸಂಚರಿಸಲು ಅವಕಾಶ ಇರಲಿಲ್ಲ. ಈಗ ಮೇಲ್ದರ್ಜೆಗೇರಿ ಕ್ರಾಸಿಂಗ್‌ ಸ್ಟೇಷನ್‌ ಆಗುವುದರಿಂದ ಎಲ್ಲ ವ್ಯವಸ್ಥೆಗಳು ಇರುತ್ತವೆ. ರೈಲ್ವೆ ಅಧಿಕಾರಿಗಳು, ಸಿಬಂದಿ 24 ಗಂಟೆಗಳ ಕಾಲ ಕಾರ್ಯನಿರತರಾಗಿರುತ್ತಾರೆ. 

ಯಾವ ಕಾಮಗಾರಿ ಎಷ್ಟು ಪ್ರಗತಿ?
ಪ್ಲ್ರಾಟ್‌ ಫಾರಂ – ಶೇ.30 ರಷ್ಟು ಕಾಮಗಾರಿ

580-600 ಮೀಟರ್‌ ಉದ್ದದ ಪ್ಲ್ರಾಟ್‌ಫಾರಂ ನಿರ್ಮಾಣಗೊಳ್ಳಬೇಕಾಗಿದ್ದು ಮಣ್ಣು ಸಮತಟ್ಟು ಗೊಳಿಸುವ ಕೆಲಸ ಮಾತ್ರ ನಡೆದಿದೆ. ಕಾಂಕ್ರೀಟ್‌ ಹಾಕಿ ಸ್ಲಾéಬ್‌ ನಿರ್ಮಾಣ ವಾಗಬೇಕಿದೆ. ಇದು ಮುಖ್ಯ ಕೆಲಸ ಗಳಲ್ಲೊಂದು. ಮಳೆ ಮುಗಿದ ಅನಂತರ ಕನಿಷ್ಠ 2 ತಿಂಗಳು ಬೇಕಾಗಬಹುದು.

ಲೂಪ್‌ ಲೈನ್‌: ಶೇ.30
1.2 ಕಿ.ಮೀ ಉದ್ದಕ್ಕೆ ಲೂಪ್‌ಲೈನ್‌ ಹಾಕಬೇಕಾಗಿದೆ. ಈಗ ಆಗಿರುವುದು ಶೇ.30ರಷ್ಟು ಕೆಲಸ. ಮಳೆಯಿಂದಾಗಿ ಟ್ರ್ಯಾಕ್‌ನಲ್ಲಿ ನೀರಿನ ಒರತೆ ಹೆಚ್ಚಿದೆ ಇಲ್ಲಿ ಚರಂಡಿ ನಿರ್ಮಾಣವಾಗಿ ಅನಂತರ ಲೂಪ್‌ಲೈನ್‌ ಅಳವಡಿಸಬೇಕಾಗಿದೆ.

ಸ್ಲೀಪರ್ 
ಟ್ರ್ಯಾಕ್‌ಗಳನ್ನು ತಂದಿಡಲಾಗಿದೆಯಾದರೂ ಮಳೆಗಾಲ ಮುಗಿದ ಅನಂತರ ಮತ್ತೆ ಕೆಲಸ ಶುರುವಾಗಬೇಕು.ವೈಟಿಂಗ್‌ ಹಾಲ್‌, ಸಿಎಸ್‌ಆರ್‌ ಕೊಠಡಿ ಪ್ರಯಾಣಿಕರ ವೈಟಿಂಗ್‌ ಹಾಲ್‌ ಮತ್ತು ಸಿಎಸ್‌ಆರ್‌ ಕೊಠಡಿಯನ್ನೊಳಗೊಂಡ ಕಟ್ಟಡದ ನಿರ್ಮಾಣ ಮಾತ್ರ ಆಗುತ್ತಿದೆ. ಕಟ್ಟಡದ ನಿರ್ಮಾಣ ಶೇ.40ರಷ್ಟಾಗಿದೆ. ನಿರ್ಮಾಣ ಕಾಮಗಾರಿ ಮಳೆಗೂ ಮುಂದುವರೆದಿದೆ. ಆದರೆ ಇದು ಪೂರ್ಣಗೊಂಡು ಅನಂತರ ಅಲ್ಲಿ ಅಗತ್ಯ ಸೌಲಭ್ಯ, ಸಲಕರಣೆಗಳ ಅಳವಡಿಕೆಗೆ ತಿಂಗಳುಗಳೇ ಬೇಕು.

ಟಿಕೆಟ್‌ ಕೌಂಟರ್‌
ಟಿಕೆಟ್‌ ಕೌಂಟರ್‌ನ ಕೆಲಸ ಶೇ.30ರಷ್ಟು ಮಾತ್ರ ಆಗಿದೆ. ಇದು ಪೂರ್ಣಗೊಂಡು ಟಿಕೆಟ್‌ ಕೌಂಟರ್‌ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಬೇಕಾದರೆ ಈಗಿನ ವೇಗ ಸಾಲದು.
 
ಸಂಪರ್ಕ ರಸ್ತೆ 
ಸಂಪರ್ಕ ರಸ್ತೆಗೆ ನೆಲ ಸಮತಟ್ಟಾಗಿದೆಯಾದರೂ ಉಳಿದ ಕಾಮಗಾರಿಗಳು ಆರಂಭಗೊಂಡಿಲ್ಲ. ಸಂಪರ್ಕ ರಸ್ತೆಯ ಜತೆಗೆ ಪಾರ್ಕಿಂಗ್‌ ವ್ಯವಸ್ಥೆಯೂ ಯೋಜನೆಯಲ್ಲಿ ಸೇರಿದೆ. ಪಾರ್ಕಿಂಗ್‌ ವ್ಯವಸ್ಥೆಯ ಕೆಲಸ ಆರಂಭ ಆಗಿಲ್ಲ.

ಮೆಟ್ಟಿಲು ಮತ್ತು ರ್‍ಯಾಂಪ್‌: ಶೇ. 0
ಈಗ ಇರುವ ಮೆಟ್ಟಿಲುಗಳನ್ನು ತೆಗೆದು ಅದನ್ನು ದಕ್ಷಿಣ ಭಾಗದಲ್ಲಿ ಪುನಃನಿರ್ಮಿಸಬೇಕು. ಜತೆಗೆ ರ್‍ಯಾಂಪ್‌ ನಿರ್ಮಿಸ ಬೇಕಾಗಿದೆ. ಈ ಕಾಮಗಾರಿ ಆರಂಭವನ್ನೇ ಕಂಡಿಲ್ಲ. ಕಟ್ಟಡದ ಕಾಮಗಾರಿ ಮುಗಿದ ಅನಂತರ ಮೆಟ್ಟಿಲು ಕಾಮಗಾರಿ ನಡೆಸುವ ಸಿದ್ಧತೆಯಲ್ಲಿ ಗುತ್ತಿಗೆದಾರರಿದ್ದಾರೆ. ಇದರ ಪೂರ್ಣ ಕೆಲಸ ಬಾಕಿ ಇದೆ.

ವಸತಿ ಗೃಹ : ಶೇ.50
ಸಿಬಂದಿಗಳ ವಸತಿಗೃಹದ ನಿರ್ಮಾಣ ಕಾಮಗಾರಿ ಶೇ.50ರಷ್ಟು ಪ್ರಗತಿ ಸಾಧಿಸಿದೆ. ಗೋಡೆ, ಛಾವಣಿ ಪೂರ್ಣ ಗೊಂಡಿದೆ. ಉಳಿದ ಕೆಲಸಗಳು, ಅಗತ್ಯ ಸೌಕರ್ಯಗಳ ಅಳವಡಿಕೆಯಾಗಬೇಕಿದೆ.

ನಿರೀಕ್ಷೆ
–  ಒಟ್ಟಾರೆ ಶೇ.60ರಷ್ಟುಕಾಮಗಾರಿ ಪೂರ್ಣ
-  ಮಳೆಯಿಂದಾಗಿ ರೈಲ್ವೆ ಹಳಿ ಅಳವಡಿಕೆಗೆ ಹಿನ್ನಡೆ
-  ಪ್ರಯಾಣಿಕರಿಗೆ ಎಲ್ಲ ಮೂಲ ಸೌಕರ್ಯ ಲಭ್ಯ
-  ಮತ್ತಷ್ಟು ರೈಲುಗಳ ನಿಲುಗಡೆ ನಿರೀಕ್ಷೆ
-  ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಗಳ ಶೀಘ್ರ ಅಭಿವೃದ್ಧಿಗೆ ಒತ್ತಾಯ

 ಮತ್ಸéಗಂಧಾಕ್ಕೆ ನಿಲುಗಡೆ ಬೇಕು
ನಿಲ್ದಾಣ ಮೇಲ್ದರ್ಜೆಗೇರುತ್ತಿರುವುದು ಸಂತಸ ತಂದಿದೆ. ಕಾರವಾರ ಮತ್ತು ಮಂಗಳೂರು ಕಡೆಗೆ ಹೋಗುವವರು ಹೆಚ್ಚಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಮತ್ಸéಗಂಧಾ ರೈಲಿಗೆ ನಿಲುಗಡೆ ನೀಡಬೇಕು ಎನ್ನುವುದು ಬಹುಕಾಲದ ಬೇಡಿಕೆ.   
– ಸಂಜಿತ್‌,ಸ್ಥಳೀಯರು  

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Udupi: ‘ಕಲ್ಜಿಗ’ ಸಿನೆಮಾ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

udupiUdupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ

Udupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ

Udupi: ಬೆಡ್‌ ಶೀಟ್‌ ಮಾರುವ ನೆಪದಲ್ಲಿ ಅಂಬಲಪಾಡಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ

Udupi: ಬೆಡ್‌ ಶೀಟ್‌ ಮಾರುವ ನೆಪದಲ್ಲಿ ಅಂಬಲಪಾಡಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.