ಪಂಢರಾಪುರದಲ್ಲಿಂದು ಆಷಾಢ ಏಕಾದಶಿ

Team Udayavani, Jul 23, 2018, 6:00 AM IST

maharashtra-pandharpur-vitthal-rukmani-temple.jpg

ಸೊಲ್ಲಾಪುರ: ವಿಠ್ಠಲ, ವಿಠೊಬಾ, ಪಾಂಡುರಂಗ ಎಂದು ಖ್ಯಾತಿ ಹೊಂದಿದ ಪಂಢರಾಪುರ ವಿಠ್ಠಲ ಎಲ್ಲರಿಗೂ ಆರಾಧ್ಯ ದೈವ. ವಿಠ್ಠಲನನ್ನು ಸಾಮಾನ್ಯವಾಗಿ ವಿಷ್ಣು ಮತ್ತು ಕೃಷ್ಣ ಅವತಾರವೆಂದೇ ಹೇಳಲಾಗುತ್ತದೆ.ವಿಠ್ಠಲನು ಮಹಾರಾಷ್ಟ್ರದ ಏಕದೇವತಾವಾದಿ ಬ್ರಾಹ್ಮಣೇತರ ವಾರಕರಿ ಪಂಥ ಮತ್ತು ಕರ್ನಾಟಕದ ಹರಿದಾಸ ಪಂಥಗಳ ಕೇಂದ್ರ ಬಿಂದು. ವಿಠ್ಠಲನ ಮುಖ್ಯ ದೇವಸ್ಥಾನ ಕರ್ನಾಟಕದ ಗಡಿಗೆ ಹತ್ತಿರವಿರುವ ಮಹಾರಾಷ್ಟ್ರದ ಪಂಢರಾಪುರದಲ್ಲಿದೆ.

ವಿಠ್ಠಲನ ಪ್ರಮುಖ ಉತ್ಸವಗಳು ಹಿಂದೂ ಚಾಂದ್ರಮಾನ ಮಾಸದ ಏಕಾದಶಿಯಂದು ನಡೆಯುತ್ತವೆ. ಆಷಾಢ ಮಾಸದಲ್ಲಿ ಶಯನೀ ಏಕಾದಶಿ ಮತ್ತು ಕಾರ್ತಿಕ ಮಾಸದಲ್ಲಿ ಪ್ರಬೋ ನಿಧಿ ಏಕಾದಶಿಯ ಆಚರಣೆ ನಡೆಯುತ್ತದೆ. ಇವೆರಡು ಏಕಾದಶಿಯಲ್ಲಿ
ಪಂಢರಾಪುರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ವಿಠ್ಠಲ , ಪಾಂಡುರಂಗ, ಪಂಢರಿನಾಥ,ಹರಿ, ನಾರಾಯಣ ಸಹಿತ ವಿಠ್ಠಲನು ಹಲವಾರು ಹೆಸರುಗಳಿಂದ ಪರಿಚಿತನಾಗಿದ್ದಾನೆ. ಈ ಹೆಸರುಗಳ ಉಗಮಗಳು ಮತ್ತು ಅರ್ಥಗಳ ಬಗ್ಗೆ ಹಲವು ಸಿದ್ಧಾಂತಗಳಿವೆ. ವಿಠ್ಠಲವೆಂಬ ಹೆಸರು ಸಂಸ್ಕೃತ-ಮರಾಠಿ ಶಬ್ದ ಕೂಡಿ ಆಗಿದೆಯೆಂದು ವಾರಕರಿ ಸಂಪ್ರದಾಯ ಸೂಚಿಸುತ್ತದೆ. ವಿಟ್‌ ಅಂದರೆ ಇಟ್ಟಿಗೆ, ಥಲ್‌ ಶಬ್ದ ಸಂಸ್ಕೃತದ ಸ್ಥಳ (ಅಂದರೆ ನಿಂತಿರುವ) ಶಬ್ದದಿಂದ ಉತ್ಪತ್ತಿಯಾಗಿರಬಹುದು. ಈ ರೀತಿ ವಿಠuಲ ಎಂದರೆ ಒಂದು ಇಟ್ಟಿಗೆಯ ಮೇಲೆ ನಿಂತಿರುವವ ಎಂದಾಗುತ್ತದೆ.

ಆರಾಧನೆ: ಮಹಾರಾಷ್ಟ್ರವಲ್ಲದೆ, ಕರ್ನಾಟಕ ಮತ್ತು ತೆಲಂಗಾಣ ಪ್ರಾಂತಗಳಿಂದ ಲಕ್ಷಾಂತರ ಭಕ್ತರು ಪಂಢರಾಪುರ ವಿಠ್ಠಲನ ದರ್ಶನಕ್ಕೆ ಜ್ಞಾನೇಶ್ವರನ ಕಾಲದಿಂದಲೂ ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಿಠ್ಠಲನ ಆರಾಧನೆ ಮೇಲೆ ಎರಡು ವಿಶಿಷ್ಟ ಸಂಪ್ರದಾಯಗಳು ಕೇಂದ್ರೀಕರಿಸುತ್ತವೆ. ಬಡ್ವಾ ವಂಶದ ಬ್ರಾಹ್ಮಣ ಆರ್ಚಕರಿಂದ ದೇವಸ್ಥಾನದ ಒಳಗೆ ವಿ ಧಿವತ್ತಾದ ಪೂಜೆ ಮತ್ತು ವಾರಕರಿಯವರಿಂದ ಅಮೂರ್ತ ಆರಾಧನೆ ನಡೆಯಲಿದ್ದು,ವಿಧಿವತ್ತಾದ ಪೂಜೆಯು ಐದು ದಿನನಿತ್ಯದ ವಿಧಿಗಳನ್ನು ಒಳಗೊಳ್ಳುತ್ತದೆ. ಮೊದಲಿಗೆ ಬೆಳಗ್ಗೆ 3 ಗಂಟೆಗೆ ದೇವರನ್ನು ಎಬ್ಬಿಸುವ ಆರತಿ, ಕಾಕಡಾರತಿಯೆಂದು ಕರೆಯಲ್ಪಡುತ್ತದೆ.ಆ ಮೇಲೆ ಪಂಚಾಮೃತ ಪೂಜೆ, ಆ ಮೇಲೆ ಪ್ರಾತಃಕಾಲದ ನಿವೇದನೆಗಳನ್ನು ಸ್ವೀಕರಿಸಲು ವಿಗ್ರಹಕ್ಕೆ ಉಡುಪು ತೊಡಿಸಲಾಗುತ್ತದೆ.

ಮೂರನೆ ವಿಧಿಯಾಗಿ ಮತ್ತೂಮ್ಮೆ ಉಡುಪು ತೊಡಿಸುವ ಮತ್ತು ಮಧ್ಯಾಹ್ನದ ಭೋಜನ ಒಳಗೊಳ್ಳುವ ಇನ್ನೊಂದು ಪೂಜೆ ನಡೆಯುತ್ತದೆ. ಅಪರಾಹ್ನದ ನಿವೇದನೆಗಳ ನಂತರ ಸೂರ್ಯಾಸ್ತಕ್ಕೆ ಸಂಜೆಯ ಭೋಜನಕ್ಕಾಗಿ ಅಪರಾಹ್ನ ಪೂಜೆ ಎಂದು ತಿಳಿಯಲಾಗುವ ನಾಲ್ಕನೇ ವಿಧಿಯು ನಡೆಯುತ್ತದೆ. ಕೊನೆಯ ವಿಧಿಯಾದ ಶೇರಾರತಿಯು, ದೇವರನ್ನುಶಯನಕ್ಕೆ ಆಹ್ವಾನಿಸುವ ಆರತಿಯಾಗಿದೆ. ಪಂಢರಾಪುರದ ಮುಖ್ಯ ದೇವಸ್ಥಾನದಲ್ಲಿನ ವಿಧಿಗಳ ಜೊತೆಗೆ ವಿಠ್ಠಲನಿಗೆ ಸಮರ್ಪಿತವಾದ ಹರಿದಾಸ ಸಂಪ್ರದಾಯಗಳು ಕರ್ನಾಟಕದಲ್ಲಿ ಪ್ರವರ್ಧಮಾನವಾಗಿವೆ.

ವಾರಕರಿ ಪಂಥ: ವಾರಕರಿ ಪಂಥ ಅಥವಾ ವಾರಕರಿ ಸಂಪ್ರದಾಯವು ಭಾರತದಲ್ಲಿ ಅತ್ಯಂತ ಪ್ರತಿಷ್ಠಿತ ಪಂಥ.ಇದು ವಿಠ್ಠಲನ ಆರಾಧನೆ ಮೇಲೆ ಕೇಂದ್ರೀಕರಿಸಿದ ಮತ್ತು ಸಾಂಪ್ರದಾಯಿಕ ಭಾಗವತ ಧರ್ಮ ಆಧರಿಸಿದ ಒಂದು ಏಕದೇವತಾವಾದಿ ಭಕ್ತಿ ಪಂಥ. ವಿಠ್ಠಲನನ್ನು ತನ್ನ ಮಾಯಾ-ಬಾಪ್‌(ತಾಯಿ-ತಂದೆ) ಎಂದು ಮತ್ತು ಪಂಢರಪುರವನ್ನು ತನ್ನ ಮಾಹೇರ್‌(ತವರು) ಎಂದು ಪರಿಗಣಿಸುವ ಪ್ರತಿಯೊಬ್ಬನನ್ನು ಜಾತಿಯ ಪ್ರತಿಬಂಧಗಳನ್ನು ಲೆಕ್ಕಿಸದೆ ವಿವಿಧ ಪಂಥದಿಂದ ಒಬ್ಬ ವಾರಕರಿಯೆಂದು ಒಪ್ಪಿಕೊಳ್ಳಲಾಗುತ್ತದೆ. ವಾರಕರಿಯರು ಹಲವು ವೇಳೆ ವಿಠuಲ ನಾಮಸ್ಮರಣೆ ಮಾಡುತ್ತ ಪ್ರತಿ ಏಕಾದಶಿಯಂದು ಉಪವಾಸ ಆಚರಿಸುತ್ತಾರೆ.

ಹರಿದಾಸ ಪಂಥ: ಹರಿದಾಸ ಹರಿಯ ದಾಸವೆಂಬ ಅರ್ಥ ಸೂಚಿಸುತ್ತದೆ. ಹರಿದಾಸ ಸಂಪ್ರದಾಯ ಪ್ರಕಾರ ಹರಿದಾಸ-ಕೂಟ ಎಂದು ಪರಿಚಿತವಾಗಿರುವ ಅವರ ಸಂಪ್ರದಾಯವು ಅಚಲಾನಂದ ವಿಠ್ಠಲರಿಂದ ಪ್ರಾರಂಭಿಸಲಾಯಿತು. ವಾರಕರಿಯರನ್ನು ಸಾಮಾನ್ಯವಾಗಿ ಮಹಾರಾಷ್ಟ್ರದೊಂದಿಗೆ ಹರಿದಾಸರನ್ನು ಕರ್ನಾಟಕ ದೊಂದಿಗೆ ಸಂಬಂಧಿಸಲಾಗುತ್ತದೆ. ವಿಠ್ಠಲನ ಆರಾಧನೆಯು ಮೊದಲು ಕರ್ನಾಟಕದಲ್ಲಿ ಕಾಣಿಸಿಕೊಂಡಿತ್ತು. ನಂತರವಷ್ಟೇ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಯಿತೆಂದು ಹೇಳಲಾಗುತ್ತದೆ. ಹರಿದಾಸರು ಪಂಢರಾಪುರದ ದೇವಸ್ಥಾನ ಮತ್ತು ಹಂಪಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ವಿಠ್ಠಲನನ್ನು ಕೃಷ್ಣನ ಸ್ವರೂಪಗಳೊಂದಿಗೆ ಆರಾಧಿಸುತ್ತಾರೆ.

ಉತ್ಸವಗಳು
ವಿಠ್ಠಲನಿಗೆ ಸಂಬಂಧಿ ಸಿರುವ ಉತ್ಸವಗಳು ಮುಖ್ಯವಾಗಿ ವಾರಕರಿಯರ ಅರ್ಧ ವಾರ್ಷಿಕ ಯಾತ್ರೆಗಳಿಗೆ ಸರಿ ಹೊಂದುತ್ತವೆ. ಅನುಕ್ರಮವಾಗಿ ಕವಿ-ಸಂತ ಜ್ಞಾನೇಶ್ವರ ಮತ್ತು ತುಕಾರಾಮರಿಗೆ ನಿಕಟವಾಗಿ ಸಂಬಂಧಿಸಿರುವ ಪಟ್ಟಣಗಳಾದ ಆಳಂದಿ ಮತ್ತು ದೇಹೂದಿಂದ ಪಂಢರಾಪುರ ದೇವಸ್ಥಾನಕ್ಕೆ ಯಾತ್ರಿಕರು ಪ್ರಯಾಣ ಮಾಡುತ್ತಾರೆ. ದಾರಿಯುದ್ದಕ್ಕೂ ಕವಿ-ಸಂತರ ಪಲ್ಲಕ್ಕಿಯನ್ನು ಒಯ್ಯುತ್ತಲೇ ಅವರು ವಿಠ್ಠಲನಿಗೆ ಸಮರ್ಪಿಸಿದ ಅಭಂಗಗಳನ್ನು ಹಾಡುತ್ತಾರೆ. ವಿಠ್ಠಲನ ನಾಮಸ್ಮರಣೆಯಲ್ಲಿ ಮಗ್ನರಾಗಿರುತ್ತಾರೆ. ಆಷಾಢ ಏಕಾದಶಿ ಯಾತ್ರೆಗೆ ವಾರಕರಿಗಳು ದೊಡ್ಡ ಸಂಖ್ಯೆಗಳಲ್ಲಿ ಪಾಲ್ಗೊಳ್ಳುತ್ತಾರೆ.

– ಸೋಮಶೇಖರ ಜಮಶೆಟ್ಟ

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.