ಶಿಕ್ಷಕರ ಸಮಸ್ಯೆಗೆ ಸಿಎಂ ಸಭೆ: ಭೋಜೇಗೌಡ


Team Udayavani, Jul 23, 2018, 10:40 AM IST

shikshakara-samasye.png

ಮಂಗಳೂರು: ಶಿಕ್ಷಕ ವರ್ಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. 15 ದಿನ ಗಳೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ಮಂತ್ರಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡು ಕೊಳ್ಳ ಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಹೇಳಿದರು.

ಮಂಗಳೂರು ವಿ.ವಿ. ಕಾಲೇಜು ಅಧ್ಯಾಪಕರ ಸಂಘ “ಅಮುಕ್‌¤’ ನಗರದ ಕೆನರಾ ಪ.ಪೂ. ಕಾಲೇಜಿನಲ್ಲಿ ರವಿವಾರ ಆಯೋಜಿಸಿದ್ದ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಸರಕಾರದ ನಡೆ ನೋಡಿದರೆ ಬೇಸರವಾಗುತ್ತದೆ ಎಂದರು.

ಹೊಸ ಪಿಂಚಣಿ ಯೋಜನೆಯು ಮರಣ ಶಾಸನ ವಾಗಿದೆ. ಇದನ್ನು ರೂಪಿಸುವ ಮೊದಲು ಚರ್ಚೆ ನಡೆಸಿಲ್ಲ. ನಿವೃತ್ತಿ ಹೊಂದಿದವರು ಸಂತೋಷದಿಂದ ಜೀವನ ಕಳೆಯಬೇಕು. ಆದರೆ ಈ ಹೊಸ ಯೋಜನೆ ಯಿಂದ ಇದು ಸಾಧ್ಯವಾಗುತ್ತಿಲ್ಲ. ಎನ್‌ಪಿಎಸ್‌ ಯೋಜನೆಯನ್ನು ಸಾಮಾನ್ಯ ನೌಕರರಿಗೆ ಜಾರಿ ಗೊಳಿಸುವ ಮೊದಲು ಜನಪ್ರತಿನಿಧಿಗಳಿಗೆ ಪ್ರಾಯೋಗಿಕವಾಗಿ ಅಳವಡಿಸಲಿ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾಯಿದೆ ಜಾರಿಗೆ ತರುವ ಮೊದಲು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಆದರೆ ಇತ್ತೀಚಿನ ದಿನ ಗಳಲ್ಲಿ ಸುತ್ತೋಲೆ ಗಳೇ ಕಾನೂನುಗಳಾಗಿ ಪರಿವರ್ತನೆ ಯಾಗುತ್ತಿವೆ. ಇದರಿಂದ ಶಿಕ್ಷಕರು, ಉಪನ್ಯಾಸಕರು ಗೊಂದಲಕ್ಕೀಡಾಗಿದ್ದಾರೆ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ| ಮಹೇಶ್‌ ರಾವ್‌ ಮಾತನಾಡಿ, ಅಮುಕ್‌¤ ಉತ್ತಮ ಸಂಘಟನೆಯಾಗಿದ್ದು, ಅಧ್ಯಾಪಕರಿಗೆ ಸಮಸ್ಯೆ ಎದುರಾದಾಗ ಪರಿಹರಿಸಲು ಶ್ರಮಿಸುತ್ತದೆ ಎಂದರು. ನಿವೃತ್ತಿ ಹೊಂದಿದ, ಪಿಎಚ್‌ಡಿ ಮತ್ತು ವಿಶೇಷ ಸಾಧನೆ ಗೈದ ಉಪನ್ಯಾಸಕರನ್ನು ಸಮ್ಮಾನಿಸಲಾಯಿತು. 

ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಗೌರವ ಕಾರ್ಯ ದರ್ಶಿ ಎಂ. ರಂಗನಾಥ್‌ ಭಟ್‌, ಕಾಲೇಜಿನ ಪ್ರಾಂಶುಪಾಲೆ ಡಾ| ಮಾಲಿನಿ ಕೆ.ವಿ., ಅಮುಕ್‌¤ ಅಧ್ಯಕ್ಷ ಡಾ| ಉಮ್ಮಪ್ಪ ಪೂಜಾರಿ ಪಿ., ಪ್ರಧಾನ ಕಾರ್ಯ ದರ್ಶಿ ಡಾ| ಬಿ.ಎ. ಕುಮಾರ್‌ ಹೆಗ್ಡೆ, ಖಜಾಂಚಿ ದೇಜಮ್ಮ, ಉಪನ್ಯಾಸಕರು ಉಪಸ್ಥಿತರಿದ್ದರು.

ನಿರ್ಣಯ ಅಂಗೀಕಾರ
ಅಮುಕ್‌¤ ಸಭೆಯಲ್ಲಿ ನಿರ್ಣಯಗಳನ್ನು ಅಂಗೀ ಕರಿಸಲಾಯಿತು. ಮುಖ್ಯವಾಗಿ, ಅನುದಾನಿತ ಕಾಲೇಜು ನೌಕರರಿಗೆ ವೇತನ ವಿಳಂಬ ಮಾಡ ಬಾರದು, ಅನುದಾನ ರಹಿತ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿಪಡಿಸಲು ಯುಜಿಸಿಗೆ ಮತ್ತು ಸರಕಾರವನ್ನು ಆಗ್ರಹಿಸುವುದು, ಶಿಕ್ಷಕರು-ಶಿಕ್ಷಕೇತರ ನೌಕರ ಖಾಲಿ ಹುದ್ದೆಗಳ ಭರ್ತಿ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ನೇಮಕಾತಿ ವೇಳೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪರಿಗಣನೆ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ನೇಮಕ, ಅನುದಾನಿತ ಕೋರ್ಸ್‌ಗಳ ಪ್ರವೇಶ ಸ್ಥಗಿತಕ್ಕೆ ವಿರೋಧ, 2006ರಲ್ಲಿ ಜಾರಿಗೊಳಿಸಿದ 6ನೇ ವೇತನ ಶ್ರೇಣಿಯಲ್ಲಿ ಇರುವ ತಾರತಮ್ಯ ನಿವಾರಣೆ, 7ನೇ ಯುಜಿಸಿ ವೇತನ ಪರಿಶೀಲನ ಸಮಿತಿಯ ವರದಿ ಕೂಡಲೇ ಜಾರಿಗೆ ರಾಜ್ಯ ಸರಕಾರಕ್ಕೆ ಆಗ್ರಹ, ಪರೀಕ್ಷೆಗೆ ಸಂಬಂಧಿಸಿದ ಸಂಭಾವನೆ ಮತ್ತು ತುಟ್ಟಿಭತ್ತೆ ಸಹಿತ ಇತರ ಪಾವತಿಗಳ ಪರಿಷ್ಕರಣೆ.

ಬದುಕು ಬದಲಿಸಿದ್ದು ವಿವೇಕಾನಂದ ವಿದ್ಯಾಸಂಸ್ಥೆ
ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ ವೇಳೆ ಕೆಲವು ಕಾರಣಕ್ಕಾಗಿ ವರ್ಗಾ ವಣೆ ಪತ್ರ ನೀಡಿದರು. ಇದರಿಂದ ನನ್ನ ಉನ್ನತ ಕಲಿಕೆಗೆ ತೊಡಕಾಯಿತು. ಈ ವೇಳೆಯಲ್ಲಿ ಮಂಗಳೂರಿಗೆ ಬಂದು ಕೆಲವು ಕಾಲೇಜುಗಳಲ್ಲಿ ಪ್ರವೇಶ ಬಯಸಿದರೂ ಯಾರೂ ನೀಡಲಿಲ್ಲ. ಆಗ ಪುತ್ತೂರಿನಲ್ಲಿ ಮಾಜಿ ಶಾಸಕ ರಾಮ ಭಟ್‌ ಅವರ ಬಳಿ ತೆರಳಿದೆ. ಅವರೇ ಕಾಲೇಜಿನ ಶುಲ್ಕ ಕಟ್ಟಿ, ಕಾಲೇಜಿಗೆ ಸೇರಿಸಿದರು. ಬಳಿಕ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಪೂರ್ಣ ಗೊಳಿಸಿದೆ. ಅದು ನನಗೆ ಪುನರ್ಜನ್ಮ ನೀಡಿದ ಕಾಲೇಜು ಎಂದು ಎಸ್‌.ಎಲ್‌. ಭೋಜೇ ಗೌಡ ಹೇಳಿದರು.

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.