ಶೀರೂರು ಶ್ರೀ ಸಾವು: ತನಿಖೆ ಚುರುಕು : ಕೇವಿಯೆಟ್‌ ಅನೂರ್ಜಿತ


Team Udayavani, Jul 23, 2018, 10:47 AM IST

lakshmeevara.png

ಉಡುಪಿ: ಶೀರೂರು ಶ್ರೀಗಳ ಅಸಹಜ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಪೊಲೀಸರು ಹೇಳುತ್ತಿದ್ದರೂ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ. ಮೂಲಗಳ ಪ್ರಕಾರ ಶೀರೂರು ಶ್ರೀಗಳ ಆಪ್ತ, ವಾಹನ ಚಾಲಕನನ್ನು ತನಿಖೆಗೆ ಒಳಪಡಿಸಿದ್ದು, ಶ್ರೀಗಳ ಆಪೆ¤ ಎನ್ನಲಾದ ಮಹಿಳೆಯ ಕಿನ್ನಿಮೂಲ್ಕಿಯ ಫ್ಲಾಟ್‌ಗೆ ಕರೆದೊಯ್ದಿದ್ದಾರೆ. 

ಶೀರೂರು ಮಠದ ಸುತ್ತಮುತ್ತಲ ಮನೆಗಳಿಗೆ ಪೊಲೀಸರು ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಮಠ ಮತ್ತು ಸುತ್ತಲಿನ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುವುದಕ್ಕಾಗಿ ತನಿಖೆಗೊಳಪಡಿಸಿ ಹೇಳಿಕೆಗಳನ್ನು ಪಡೆಯಲಾಗುತ್ತಿದೆ.  

ಕೇಮಾರು ಶ್ರೀಗಳು ಶನಿವಾರ ಮುಂಬಯಿ ಮೂಲದ ಉದ್ಯಮಿಗಳಿಂದ 10 ಕೋಟಿ ರೂ. ಹಣ ಬರಬೇಕಾಗಿತ್ತು ಎಂದಿದ್ದರು. ಕನಕ ಮಾಲ್‌ ನಿರ್ಮಾಣಕ್ಕೆಂದು ಶ್ರೀಗಳು ಬ್ಯಾಂಕ್‌ ಸಾಲ ಪಡೆದಿದ್ದರು. ಕೆಲವು ಕಾರಣಗಳಿಂದ ಅದು ಶ್ರೀಗಳು ಕಟ್ಟಬೇಕಾಗಿ ಬಂತು. 

ಇತ್ತೀಚೆಗೆ ಅದನ್ನು ಮಾರುವ ಯೋಚನೆ ಮಾಡಿದ್ದ ಶ್ರೀಗಳು ಮುಂಬಯಿ ಮೂಲದ ಉದ್ಯಮಿಗೆ ಮಾರಾಟ ಪ್ರಕ್ರಿಯೆ ನಡೆಸಿದ್ದರು. 15 ಕೋ.ರೂ. ವ್ಯವಹಾರ ನಡೆದು 10 ಕೋ.ರೂ.ವನ್ನು ಶ್ರೀಗಳಿಗೆ ಮತ್ತು ಇನ್ನುಳಿದ ಹಣವನ್ನು ಬ್ಯಾಂಕ್‌ಗೆ ಕಟ್ಟಬೇಕೆಂದು ಕರಾರು ನಡೆದಿತ್ತು ಎಂದು ತಿಳಿದು ಬಂದಿದೆ. ತನಿಖೆ ಗೋಪ್ಯತೆ ಕಾಪಾಡಲು ಎಸ್‌ಪಿ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.

ಕೇವಿಯೆಟ್‌ ಅನೂರ್ಜಿತ
ಉಡುಪಿ
:  ಪಟ್ಟದ ದೇವರನ್ನು ವಾಪಸ್‌ ಕೊಡುವ ವಿಚಾರದಲ್ಲಿ ಪುತ್ತಿಗೆ ಶ್ರೀಗಳನ್ನು ಹೊರತು ಪಡಿಸಿ, ಉಳಿದ ಪೀಠಾಧಿಪತಿಗಳ ಮೇಲೆ ಶೀರೂರು ಲಕ್ಷ್ಮೀವರತೀರ್ಥ ಶ್ರೀಪಾದರ ಕೇವಿಯೆಟ್‌ ಅನೂರ್ಜಿತಗೊಂಡಿದೆ. 

ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಹಜವಾಗಿಯೇ ಕೇವಿಯೆಟ್‌ ಅನೂರ್ಜಿತಗೊಂಡಿದೆ. ಕೇವಿಯೆಟ್‌ಗೆ 90 ದಿನಗಳ ಸಮಯವಿದ್ದು, ಈ ವೇಳೆ ಶೀರೂರು ಶ್ರೀ, ಅವರ ಮಠದ ವಿರುದ್ಧ ಯಾರೂ ಮಾತನಾಡಬಾರದು ಮತ್ತು ಶಿಷ್ಯ ಸ್ವೀಕಾರ ಕುರಿತಾಗಿ ಒತ್ತಾಯಿಸಬಾರದು ಎಂದು ಹೇಳಲಾಗಿತ್ತು.

ಪಟ್ಟದ ದೇವರನ್ನು ಕೊಡದಿದ್ದರೆ ಮಠಾಧೀಶರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಶೀರೂರು ಶ್ರೀಗಳು ತಿಳಿಸಿದ್ದರು. ವಿಗ್ರಹ ಕೃಷ್ಣಮಠದಲ್ಲಿ ಇದ್ದು,  ಪರ್ಯಾಯ ಪಲಿಮಾರು ಮಠಾಧೀಶರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಬುಧವಾರ ಬರುವಂತೆ ನ್ಯಾಯವಾದಿ ರವಿಕಿರಣ ಮುಡೇìಶ್ವರ ಅವರನ್ನು ಶ್ರೀಗಳು ಹೇಳಿದ್ದರು.

ಆದರೆ, ಅಂದೇ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ವಿಧಿವಶರಾಗಿದ್ದರು.

ಎರಡು ದಿನಗಳಲ್ಲಿ ತಾತ್ಕಾಲಿಕ ವರದಿ
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಒಂದು ತಾತ್ಕಾಲಿಕ ವರದಿ, ಇನ್ನೊಂದು ಅಂತಿಮ ವರದಿ ಬರುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರತ್ಯೇಕ ಸಿಗುತ್ತದೆ. ವೈದ್ಯರು ಮರಣೋತ್ತರ ಪರೀಕ್ಷಾ ವರದಿ ತಯಾರಿಸುತ್ತಿದ್ದಾರೆ. ಇದರ ತಾತ್ಕಾಲಿಕ ವರದಿ ಇನ್ನೆರಡು ದಿನಗಳಲ್ಲಿ ಸಿಗುವ ಸಾಧ್ಯತೆ ಇದೆ. ಅಂತಿಮ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ವರದಿಗೆ 2 ವಾರ ಬೇಕಾಗಬಹುದು. ಏತನ್ಮಧ್ಯೆ ಶ್ರೀಗಳ ಪರ ವಕೀಲರಾದ ರವಿಕಿರಣ ಮುಡೇìಶ್ವರ ಅವರು ತನಿಖೆಗಾಗಿ ಎಸ್‌ಪಿ ಅವರಿಗೆ ದೂರು ನೀಡಲು ಬಂದಿರಲಿಲ್ಲ. ಮರಣೋತ್ತರ ಪರೀಕ್ಷಾ ವರದಿ ಲಭ್ಯವಾದ ಬಳಿಕ ಅದರ ಆಧಾರದಲ್ಲಿ  ದೂರು ನೀಡಬಹುದು ಎಂದಿದ್ದರಿಂದ, ದೂರು ನೀಡಿಲ್ಲ ಎಂದು ವಕೀಲರು “ಉದಯವಾಣಿ’ಗೆ ತಿಳಿಸಿದ್ದಾರೆ.

ಆರೋಗ್ಯವರ್ಧಕ ಪೇಯ ವಶಕ್ಕೆ?
ರವಿವಾರ ಶೀರೂರು ಮಠದಲ್ಲಿ ಪತ್ತೆಯಾದ ಆರೋಗ್ಯವರ್ಧಕ ಪೇಯದ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪೇಯವನ್ನು ಸ್ವಲ್ಪ ಬಳಸಲಾಗಿದೆ. ಈ ಪೇಯವನ್ನು ಶ್ರೀಗಳು ನಿರಂತರ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. 

ವಿಚಾರಣೆಗೆ ಒಳಪಡಿಸಲಾದ ಮಹಿಳೆ ಚಾಲಕನ ಮೂಲಕ ಪರಿಚಯವಾಗಿದ್ದು, ಕೆಲವೇ ಸಮಯದಲ್ಲಿ ಸ್ವಾಮೀಜಿಗೆ ಆಹಾರ ತಂದು ಕೊಡುವಷ್ಟು ಹತ್ತಿರವಾಗಿದ್ದರು, ಮಠದ ವ್ಯವಹಾರ ನೋಡಿ ಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.  

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

6

Kaup ತಾಲೂಕಿನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬೆಳೆ ಕಟಾವು

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.