ವಾಟ್ಸಾಪ್ ಕಂಪೆನಿ ಹೇಗೆ ಕಾಸು ಮಾಡುತ್ತೆ ಗೊತ್ತಾ?
Team Udayavani, Jul 23, 2018, 12:52 PM IST
ಒಂದು ಸುದ್ದಿಯನ್ನು ತುಂಬ ವೇಗವಾಗಿ ನೆರೆಯ ಊರು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ತಲುಪಿಸುವ ಮಾಧ್ಯಮವೇ ವಾಟ್ಸಾಪ್. ಸಂದೇಶ, ಆಸ್ಪತ್ರೆಯ ಬಿಲ್ ರೆಕಾರ್ಡ್, ಫೋಟೊ… ಇದೆಲ್ಲವನ್ನೂ ವಾಟ್ಸಾಪ್‌ನಲ್ಲಿ ನಾವೆಲ್ಲ ಕಳುಹಿಸುತ್ತಿದ್ದೇವೆ. ಆದರೆ, ಇದಕ್ಕಾಗಿ ವಾಟ್ಸಾಪ್ ಕಂಪನಿಗೆ ಯಾರೊಬ್ಬರೂ ನಯಾಪೈಸೆ ಕೊಡುತ್ತಿಲ್ಲ. ವಾಟ್ಸಾಪ್ ಕಂಪನಿ ಕೂಡ, ಈ ಸೇವೆಗೆ ಹಣ ಪಾವತಿಸಿ ಎನ್ನುತ್ತಿಲ್ಲ ! ಎಲ್ಲವನ್ನೂ ಉಚಿತವಾಗಿ ಕೊಟ್ಟರೂ ವಾಟ್ಸಾಪ್ ಕಂಪನಿ ಲಾಭದಲ್ಲಿಯೇ ಇದೆ. ಹೇಗೆಂದು ತಿಳಿಯಲು ಈ ಲೇಖನ ಓದಿ…
ಕಳೆದ ವಾರ, ಫೇಸ್‌ಬುಕ್ ಹಾಗೂ ಟ್ವಿಟರ್‌ನಂಥ ಸೋಷಿಯಲ್ ಮೀಡಿಯಾಗಳು ನಮಗೆ ಉಚಿತ ಸೇವೆಯನ್ನು ಕೊಟ್ಟರೂ ಹೇಗೆ ಹಣ ಮಾಡುತ್ತಿವೆ ಎಂದು ವಿವರಿಸಲಾಗಿತ್ತು. ಆದರೆ ಈ ವಿವರಣೆಯ ಕೊನೆಗೆ ಉಳಿದುಕೊಂಡ ಪ್ರಶ್ನೆ ವಾಟ್ಸಾಪ್ ಹೇಗೆ ಕಾಸು ಮಾಡುತ್ತದೆ?ಎಂಬುದು. ಏಕೆಂದರೆ, ವಾಟ್ಸಾಪ್ ಯಾವುದೇ ಜಾಹೀರಾತನ್ನು ಪ್ರದರ್ಶಿಸುವುದಿಲ್ಲ. ಇದರಲ್ಲಿ ಯಾವ ಜಾಹೀರಾತುಗಳನ್ನೂ ನಾವು ನೋಡುವುದಿಲ್ಲ. ಆರಂಭದಲ್ಲಿ ವಾರ್ಷಿಕ ಶುಲ್ಕ ಪಾವತಿ ವಿಧಾನವಿತ್ತಾದರೂ ಅದನ್ನು ಫೇಸುºಕ್ ಖರೀದಿಸಿದ ನಂತರ ವಾಟ್ಸ್‌ಪ್ ಕಂಪೆನಿಯನ್ನು ನಿಲ್ಲಿಸಿ, ಸಂಪೂರ್ಣ ಉಚಿತವಾಗಿ ವಾಟ್ಸಾಪ್ ಸೇವೆ ದೊರೆಯುತ್ತಿದೆ.
ಅಷ್ಟಕ್ಕೂ ವಾಟ್ಸಾಪನ್ನು ಫೇಸುºಕ್ ಖರೀದಿ ಮಾಡಿದ್ದು ಎಷ್ಟು ಮೊತ್ತಕ್ಕೆ ಗೊತ್ತೇ? 1.23 ಸಾವಿರ ಕೋಟಿ ರೂ.ಗೆ! ಅಂದರೆ, ಅಷ್ಟೆಲ್ಲ ಕಾಸು ಈ ವಾಟ್ಸಾಪ್‌ನಲ್ಲಿ ಇದೆ ಎಂದಾಯಿತಲ್ಲ? ವಾಟ್ಸಾಪ್ ಆಗ ಒಂದು ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಅಂದರೆ ಒಬ್ಬ ಬಳಕೆದಾರ ಒಮ್ಮೆ ವಾಟ್ಸಾಪ್‌ಗೆ ಲಾಗಿನ್ ಆದರೆ ಆತ ವಾಟ್ಸಾಪ್ ಕಂಪೆನಿಗೆ 123 ರೂಪಾಯಿಯನ್ನು ಗಳಿಸಿಕೊಡುತ್ತಾನೆ ಎಂದೇ ಅರ್ಥ !
ಇಷ್ಟೇ ಅಲ್ಲ, ಇತ್ತೀಚೆಗೆ ಸೀಕ್ವಿಯಾ ಕ್ಯಾಪಿಟಲ್ 100 ಕೋಟಿ ರೂ.ಗಳನ್ನು ವಾಟ್ಸಾಪ್‌ನಲ್ಲಿ ಹೂಡಿಕೆ ಮಾಡಿದೆ. ಇನ್ನೂ ಹಲವು ಕಂಪನಿಗಳು ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿವೆ. ಭಾರತದಲ್ಲಿ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಜೊತೆಗೆ ವಾಟ್ಸಾಪ್ ಒಪ್ಪಂದ ಮಾಡಿಕೊಂಡಿದೆ. ಅಂದರೆ ಇದು ಸೋಷಿಯಲ… ಮಾರುಕಟ್ಟೆಯಲ್ಲಿ ಒಂದು ಹಾಟ್ ಕೇಕ್ ಎಂಬುದು ಸ್ಪಷ್ಟ.
ಈ ವಾಟ್ಸಾಪ್ ಫೇಸ್‌ಬುಕ್ ಖಾತೆಗಿಂತ ಹೆಚ್ಚು ಗಳಿಕೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ವಾಟ್ಸಾಪ್ ಹಣಗಳಿಕೆ ವಿಧಾನ ಸಂಪೂರ್ಣ ಡಿಫರೆಂಟ್. ಅಲ್ಲಿ ನಮಗೆ ವಾಟ್ಸಾಪ್ ಕಂಪನಿ ನೇರವಾಗಿ ಏನನ್ನೂ ಮಾರುವುದಿಲ್ಲ. ಜಾಹೀರಾತು ತೋರುವುದಿಲ್ಲ. ಆದರೆ ನಮ್ಮ ದತ್ತಾಂಶವೇ ಅಲ್ಲಿ ಬಂಡವಾಳ. ನಾವು ನಮ್ಮ ಮನೆಯÇÉೇ ಕುಳಿತು ಮನೆಯವರಿಗೇ ಕಳುಹಿಸಿದ ಒಂದೊಂದು ಸಂದೇಶ, ಒಂದು ಫುಲ್‌ಸ್ಟಾಪ್ ಕೂಡ ಅಮೆರಿಕದಲ್ಲಿರುವ ವಾಟ್ಸಾಪ್ ಸರ್ವರ್‌ಗೆ ಹೋಗಿ ಅಲ್ಲಿಂದ ರವಾನೆಯಾಗುತ್ತದೆ. ನಾವು ಕಳುಹಿಸಿದ ಎಲ್ಲ ಸಂದೇಶಗಳೂ ಸರ್ವರ್‌ನಲ್ಲಿ ಸಂಗ್ರಹವಾಗುತ್ತವೆ. ಇದನ್ನು ಸರ್ವರ್ ಡಿಕೋಡ್ ಮಾಡಿ ನೋಡುತ್ತದೆ. ಹೀಗೆ ವಾಟ್ಸಾಪ್ ಸರ್ವರ್‌ನಲ್ಲಿ ನಿಮಿಷ ನಿಮಿಷಕ್ಕೂ ಡೇಟಾದ ಮೌಂಟ್ ಎವರೆಸ್ಟ್ ಎತ್ತರದ ಡೇಟಾ ಬಂದು ಬೀಳುತ್ತದೆ. ಈ ಡೇಟಾ ಈಗ ಇ-ಕಾಮರ್ಸ್ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಚಿನ್ನದ ಗಣಿ. ಜನರ ಮೂಡ್ ಯಾವ ರೀತಿ ಇದೆ ಎಂದು ತಿಳಿದುಕೊಳ್ಳುವುದಕ್ಕೆ ಈ ಡೇಟಾ ನೆರವಾಗುತ್ತದೆ.
ಹೇಗೆ ಗೊತ್ತಾ? ಬೆಂಗಳೂರಿನಲ್ಲಿ ಕುಳಿತ ಒಬ್ಬ ವ್ಯಕ್ತಿ ಮಳೆಯ ಬಗ್ಗೆ ಮಾತನಾಡಿ¨ªಾನೆ ಎಂದಾದರೆ ಬೆಂಗಳೂರಿನಲ್ಲಿ ಮಳೆ ಬಂದಿದೆ ಎಂದರ್ಥ. ಹಾಗಾದರೆ ಆತನಿಗೆ ಮಳೆಗೆ ಸಂಬಂಧಿಸಿದ ಸಾಮಗ್ರಿಗಳ ಜಾಹೀರಾತು ತೋರಿಸಿದರೆ ಅವನು ಖರೀದಿ ಮಾಡುವಂತೆ ಟೆಂಪ್ಟ್ ಮಾಡಬಹುದು. ಇದು ಅತ್ಯಂತ ಸರಳ ಲೆಕ್ಕಾಚಾರ. ಇಂಥ ಸಾವಿರಾರು ಸಿದ್ಧಾಂತಗಳು ವಾಟ್ಸಾಪ್ ಡಾಟಾ ವಿಶ್ಲೇಷಣೆ ಮಾಡುವಲ್ಲಿ ಕೆಲಸ ಮಾಡುತ್ತದೆ. ಈ ಡಾಟಾಗಳನ್ನು ಪರಿಷ್ಕರಿಸಿ ಸಂಬಂಧಪಟ್ಟ ಸಂಸ್ಥೆಗಳಿಗೆ ವಾಟ್ಸಾಪ್ ಮಾರುತ್ತದೆ.
ವಾಟ್ಸಾಪ್ ನಿಂದಾಗಿ ಫೇಸ್‌ಬುಕ್ ಕೂಡ ಅನುಕೂಲವಾಗಿದೆ. ಈ ಡೇಟಾವನ್ನು ಬಳಸಿಕೊಂಡು ಫೇಸ್‌ಬುಕ್ ತನ್ನ ಜಾಹೀರಾತುಗಳನ್ನು ಇನ್ನಷ್ಟು ಸರಿಯಾಗಿ ಟಾರ್ಗೆಟ್ ಮಾಡುತ್ತಿದೆ. ವಾಟ್ಸಾಪ್ ಇತ್ತೀಚೆಗೆ ಇನ್ನೂ ಒಂದು ವಿಧಾನದ ಮಾನಟೈಸ್ ಮಾಡೆಲ… ಹುಡುಕಿಕೊಂಡಿದೆ. ಸಾಮಾನ್ಯವಾಗಿ, ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಕ್ಕಾಗಿ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಎಸ್‌ಎಂಎಸ್ ಕಳುಹಿಸುತ್ತಿರುತ್ತವೆ. ಇದಕ್ಕೆ ಟೆಲಿಕಾಂ ಕಂಪನಿಗಳು ದರ ನಿಗದಿ ಮಾಡಿರುತ್ತವೆ.
ಟೆಲಿಕಾಂ ಕಂಪನಿಗಳ ಬದಲಿಗೆ ವಾಟ್ಸಾಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಇಂಥ ಕಂಪನಿಗಳನ್ನು ವಾಟ್ಸಾಪ್ ಅಪ್ರೂವ್ ಮಾಡುತ್ತಿದೆ. ಉದಾಹರಣೆಗೆ, ನೀವು ವಿಮಾನ ಟಿಕೆಟ್ ಬುಕ್ ಮಾಡಲು ಹೋಗುತ್ತೀರಿ. ನೀವು ಟಿಕೆಟ್ ಬುಕ್ ಮಾಡಿದ ಏರ್ ಲೈನ್ಸ್ ನಿಮಗೆ ಟಿಕೆಟ್ ವಿವರಗಳನ್ನು ಎಸ್‌ಎಂಎಸ್ ಮಾಡುತ್ತದೆ. ಆದರೆ ವಾಟ್ಸಾಪ್ ಜೊತೆಗೆ ಒಪ್ಪಂದ ಮಾಡಿಕೊಂಡ ಕಂಪನಿಯು ನಿಮಗೆ ಎಸ್‌ಎಂಎಸ್ ಕಳುಹಿಸುವುದರ ಬದಲಿಗೆ ವಾಟ್ಸಾಪ್‌ನಲ್ಲಿ ವಿವರ ಕಳುಹಿಸುತ್ತದೆ. ಅÇÉೇ ನಿಮಗೆ ಟಿಕೆಟ್ ಪಿಡಿಎಫ್ ಸಿಗುತ್ತದೆ. ಟಿಕೆಟ್ ವಿವರ ಸಂದೇಶದ ರೂಪದಲ್ಲೂ ಸಿಗುತ್ತದೆ. ಆದರೆ ಈ ಆದಾಯದ ವಿಧಾನ ವಾಟ್ಸಾಪ್ ಅತ್ಯಂತ ಕನಿಷ್ಠ ಮಟ್ಟದ್ದು.
ಡಾಟಾ ಜಗತ್ತು!
ಸಂಪೂರ್ಣ ವಾಟ್ಸಾಪ್‌ನ ಮೌಲ್ಯ ಇರುವುದೇ ಡಾಟಾದಲ್ಲಿ! ಸದ್ಯ ಇಡೀ ಜಗತ್ತು ಡಾಟಾದ ಮೇಲೆ ನಿಂತಿದೆ. ಇ-ಕಾಮರ್ಸ್ ಕಂಪನಿಗಳೂ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಈಗ ಡಾಟಾಬೇಕು. ಒಂದು ವಸ್ತುವನ್ನು ಯಾರಿಗೆ ತಲುಪಿಸಬೇಕು, ಹೇಗೆ ತಲುಪಿಸಬೇಕು ಮತ್ತು ಜನರ ಆಸಕ್ತಿ ಯಾವುದರ ಮೇಲಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಡಾಟಾ ಬೇಕು. ಡೇಟಾ ಇಲ್ಲದಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗುತ್ತದೆ. ಸಂತೆಯಲ್ಲಿ ನಿಂತು ಕಡಲೆಕಾಯಿ ಮಾರಿದಂತಿರುತ್ತದೆ.
ದನದ ದೊಡ್ಡಿಯಲ್ಲಿ ನಿಂತು ಯಾವ ಜಾನುವಾರಿಗೆ ಈಗ ಏನು ಬೇಕಿದೆ ಎಂಬುದನ್ನು ಕಂಡುಕೊಂಡ ಹಾಗೆಯೇ ಜನರ ಮಾರುಕಟ್ಟೆಯೂ. ಅಲ್ಲಿ ಜನ ತಮಗೆ ಏನು ಬೇಕೆಂದು ಕಂಪನಿಗಳಿಗೆ ಹೇಳುವುದಿಲ್ಲ, ಹೇಳಲಾಗದು. ಇದಕ್ಕಾಗಿ ಮಾರುಕಟ್ಟೆ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ ಇವೆಲ್ಲವೂ ನೈಜ ಸನ್ನಿವೇಶವನ್ನು ಕಟ್ಟಿಕೊಡಲಾರವು. ಆದರೆ ವಾಟ್ಸಾಪ್ ಹಾಗಲ್ಲ. ನಾವು ಯಾರದೋ ಮರ್ಜಿಗೆ ಬಿದ್ದು ಇಲ್ಲಿ ಮಾತನಾಡುವುದಿಲ್ಲ. ಇಲ್ಲಿನ ಎಲ್ಲ ಸಂವಹನಗಳೂ ನೈಜ. ಹೀಗಾಗಿ ಇದರಿಂದ ತೆಗೆದ ಎಲ್ಲ ಮಾಹಿತಿಯೂ ನೈಜ. ಇದರ ದತ್ತಾಂಶವನ್ನೇ ಇಟ್ಟುಕೊಂಡು ಜನರ ಆಸಕ್ತಿ, ಇಷ್ಟಾನಿಷ್ಟಗಳನ್ನು ಅಳೆಯಲಾಗುತ್ತದೆ.
ಆದಾಯವಿದೆ, ಆದರೂ ನಷ್ಟ!
ಹಾಗಂತ ವಾಟ್ಸಾಪ್ ಇವತ್ತಿಗೂ ಲಾಭದಲ್ಲಿದೆ ಎಂದೇನೂ ಹೇಳಲಾಗದು. 2014ರಲ್ಲಿ ವಾಟ್ಸಾಪ್‌ನ ಲಾಭ 1.5 ಕೋಟಿ ಡಾಲರ್. ಆದರೆ ನಷ್ಟ 23 ಕೋಟಿ ಡಾಲರ್. 2017ರ ಹೊತ್ತಿಗೆ ಈ ನಷ್ಟದ ಮೊತ್ತ 40 ಕೋಟಿಗೆ ತಲುಪಿದೆ. ಆದರೆ ವಾಟ್ಸಾಪ್ ಖರೀದಿಸಿದ ನಂತರ ಫೇಸ್‌ಬುಕ್‌ನ ಲಾಭದಲ್ಲಿ ಹೆಚ್ಚಳವಾಗಿದೆ. ಇದರರ್ಥ ಇಷ್ಟೇ. ವಾಟ್ಸಾಪ್‌ನ ಡೇಟಾ ಬಳಸಿಕೊಂಡು ಫೇಸ್‌ಬುಕ್ ಲಾಭ ಮಾಡಿಕೊಳ್ಳುತ್ತಿದೆ.
1 ಡಾಲರ್ ಸಬ್‌ಸ್ಕ್ರಿಪ್ಷನ್
ಅಮೆರಿಕ ಹಾಗೂ ಐರೋಪ್ಯ ದೇಶಗಳಲ್ಲಿ ವಾಟ್ಸಾಪ್‌ಗೆ ವಾರ್ಷಿಕ 1 ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಒಮ್ಮೆ 1 ಡಾಲರ್ ಪಾವತಿ ಮಾಡಿ ಸಬ್‌ಸೆð„ಬ್ ಮಾಡಿದರೆ ಪ್ರತಿ ವರ್ಷ ಇದು ಅಟೊಮ್ಯಾಟಿಕ್ ಆಗಿ ರಿನೀವಲ್ ಆಗುತ್ತದೆ. ಆದರೆ ಭಾರತದಲ್ಲಿ ಈ ಶುಲ್ಕವೂ ಇಲ್ಲ. ಅಷ್ಟೇ ಅಲ್ಲ, ಭಾರತವೇ ವಾಟ್ಸಾಪ್‌ಗೆ ದೊಡ್ಡ ಮಾರುಕಟ್ಟೆಯೂ ಹೌದು.
ಉದ್ದೇಶ ಲಾಭವಲ್ಲ, ಡೇಟಾ!
ವಾಟ್ಸಾಪ್ ಸಿಇಒ ಜಾನ್ ಕೊವುಮ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಕಂಪನಿಯ ಉದ್ದೇಶ ಲಾಭ ಗಳಿಸುವುದಲ್ಲ. ಬದಲಿಗೆ ವಾಟ್ಸಾಪ್ ಬಳಕೆಯನ್ನು ವಿಸ್ತರಿಸುವುದು ಎಂದಿದ್ದರು. ಅಂದರೆ ಹೆಚ್ಚು ಹೆಚ್ಚು ಜನರು ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದೇ ಕಂಪನಿಯ ಉದ್ದೇಶ. ಅಷ್ಟೇ ಅಲ್ಲ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಕೂಡ ಇದೊಂದು ಕೂಲ್ ಆಪ್ ಆಗಿರಲಿ ಅಂತ ಬಯಸಿದ್ದಾರೆ. ಹೀಗಾಗಿ ಇಂದಿಗೂ ಆದಾಯದ ಮೇಲೆ ವಾಟ್ಸಾಪ್ ಗಮನ ಹರಿಸಿಲ್ಲ.
ಮುಂದೊಂದು ದಿನ ವಾಟ್ಸಾಪ್ ತನ್ನ ಆ್ಯಪ್‌ನೊಳಗೆಯೇ ಜಾಹೀರಾತು ತೋರಿಸಿದರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಸದ್ಯದ ಮಟ್ಟಿಗಂತೂ ಫೇಸ್‌ಬುಕ್‌ಗಿಂತಲೂ ವಾಟ್ಸಾಪ್‌ನಲ್ಲಿ ಜಾಹೀರಾತು ಇನ್ನಷ್ಟು ಹೆಚ್ಚು ಜನರಿಗೆ ತಲುಪುತ್ತದೆ.
ನಾವು ಅನಾಮಿಕರು!
ಇಲ್ಲಿ ನಮ್ಮ ಗೌಪ್ಯತೆಯ ಕಥೆಯೇನು ಎಂದು ನೀವು ಕೇಳಬಹುದು. ನಿಜ. ನಾವು ಕಳುಹಿಸುವ ಸಂದೇಶ ಸರ್ವರ್‌ಗೆ ಹೋಗುವ ಮುನ್ನ ನಮ್ಮ ಮೊಬೈಲಿನಿಂದಲೇ ಈ ಸಂದೇಶ ಕಳುಹಿಸಿದ್ದು ಎಂಬ ಅಂಶವನ್ನು ಸರ್ವರ್ ಡಿಕೋಡ್ ಮಾಡುವುದಿಲ್ಲ. ಬದಲಿಗೆ ಸಂದೇಶವನ್ನಷ್ಟೇ ಡಿಕೋಡ್ ಮಾಡುತ್ತವೆ. ಉದಾಹರಣೆಗೆ, ಬೆಂಗಳೂರಿನಲ್ಲಿರುವ ರಮೇಶ್ ಎಂಬುವವ ಮಂಗಳೂರಿನಲ್ಲಿರುವ ಸುರೇಶನಿಗೆ ಹೆಲೋ ಎಂದು ಕಳಿಸಿ¨ªಾನೆ ಎಂದಿಟ್ಟುಕೊಳ್ಳಿ. ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ವ್ಯಕ್ತಿಗಳ ಮಧ್ಯೆ ಹೆಲೋ ಎಂಬ ಸಂದೇಶ ರವಾನೆಯಾಗಿದೆ ಎಂಬುದನ್ನು ಮಾತ್ರ ಸರ್ವರ್ ಡಿಕೋಡ್ ಮಾಡುತ್ತದೆ. ಆದರೆ ಇಲ್ಲಿ ಸುರೇಶನಿಗೆ ರಮೇಶ್ ಈ ಸಂದೇಶ ಕಳುಹಿಸಿ¨ªಾನೆ ಎಂಬುದು ಮಾತ್ರ ತಿಳಿಯುವುದಿಲ್ಲ. ಹೀಗಾಗಿ ವ್ಯಕ್ತಿಯ ಪ್ರೈವೆಸಿಗೆ ಧಕ್ಕೆಯಿಲ್ಲ.
ವಾಟ್ಸ್‌ಪ್ ಹೀಗೀಗೆ
– ಪ್ರತಿನಿತ್ಯ 55 ಸಾವಿರ ಕೋಟಿ ಸಂದೇಶ ರವಾನೆ
– ಪ್ರತಿನಿತ್ಯ 450 ಕೋಟಿ ಫೋಟೋ ರವಾನೆ
– ವಿಶ್ವದಾದ್ಯಂತ 60 ಭಾಷೆಗಳ ಬೆಂಬಲ
– ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.