ಕೆಂಚನಗುಡ್ಡದಲ್ಲಿ ಧುಮ್ಮಿಕ್ಕುತ್ತಿದೆ ಜಲಧಾರ
Team Udayavani, Jul 23, 2018, 3:55 PM IST
ಸಿರುಗುಪ್ಪ: ತಾಲೂಕಿನ ಕೆಂಚನಗುಡ್ಡದ ಹತ್ತಿರ ತುಂಗಭದ್ರಾ ನದಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ನೀರು ಹರಿಸಲು ನಿರ್ಮಿಸಲಾಗಿರುವ ಸಂಗ್ರಹ ಕಟ್ಟೆಗಳ ಮೇಲೆ ಈಗ ನೀರು ಜಲಪಾತದಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಒಂದೂವರೆ ಕಿ.ಮೀ. ಉದ್ದದ ಗಂಗಮ್ಮನ ಕಟ್ಟೆ, ದೇಶನೂರು ಕಟ್ಟೆ, ಬೆಳ್ಳಕ್ಕಿ ಕಟ್ಟೆ ಮತ್ತು ವಿದ್ಯತ್ ಘಟಕಕ್ಕೆ ನೀರು ಹರಿಸಲು ಕಟ್ಟಿರುವ ಕಾಲುವೆ ಮೇಲೆ ನೀರು. ಎಲ್ಲೆಂದರಲ್ಲಿ ಜಲಪಾತಗಳಂತೆ ಜಲಧಾರೆ ಹರಿಯುತ್ತಿದೆ. ಹಾಲಿನ ನೊರೆ ಸುರಿದಂತೆ ಬೀಳುತ್ತಿರುವ ದೃಶ್ಯಗಳು ಕಣ್ಮನ ಸೆಳೆಯುತ್ತವೆ.
ಪವರ್ ಪ್ಲಾಂಟ್‌ಗೆ ನೀರು ಹರಿಸಲು ಕಟ್ಟಲಾಗಿರುವ ಕಾಲುವೆ ಕಟ್ಟಡದ ಎಡಭಾಗದಲ್ಲಿ ಹಾಲು ಸುರಿದಂತೆ ನೀರು ಹರಿಯುತ್ತಿರುವುದನ್ನು ದೂರದಿಂದ ನಯನ ಮನೋಹರವಾಗ ಕಾಣುತ್ತವೆ.
ದೇಶನೂರು ಕಟ್ಟೆಯಲ್ಲ ಗೋಕಾಕ್ ಜಲಪಾತದ ಮಾದರಿಯಲ್ಲಿ ನೀರು ರಭಸದಿಂದ ಧುಮ್ಮಿಕ್ಕುತ್ತಿರುವ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಇಲ್ಲಿರುವ ಪ್ರಾಕೃತಿಕ ಬಂಡೆಗಳಲ್ಲಿ ಸಹಜವಾಗಿ ನಿರ್ಮಾಣವಾಗಿರುವ ಜಲಪಾತಗಳ ಸೌಂದರ್ಯ ಸವಿಯಲು ಮಳೆಗಾಲ ಉತ್ತಮ ಕಾಲ. ನದಿ ತೀರದಲ್ಲಿ ಮಂತ್ರಾಲಯದ ಶ್ರೀ ವಸುದೇಂಧ್ರ ತೀರ್ಥರ ಬೃಂದಾವನ ಇಲ್ಲಿ ನಿತ್ಯವೂ ಸ್ವಾಮಿಗೆ ಪೂಜೆಗಳು ನೆರವೇರುತ್ತಿವೆ.
ರಭಸದ ನೀರಿನಲ್ಲಿ ಈಜುವುದು ಅಪಾಯ: ನದಿಯಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಈಜುವುದು ಅಪಾಯ. ಆದರೆ, ಈ ಬಗ್ಗೆ ಎಚ್ಚರಿಸು ಯಾವುದೇ ನಾಮಫಲಕಗಳಿಲ್ಲ. ಇಲ್ಲಿ ಯಾವುದೇ ಸುಸಜ್ಜಿತ ಹೋಟೆಲ್, ರಾತ್ರಿ ವಾಸ್ತವ್ಯಕ್ಕ ಅನುಕೂಲಗಳಿಲ್ಲ.
ಸಾರಿಗೆ ವ್ಯವಸ್ಥೆ: ಸಿರುಗುಪ್ಪದಿಂದ 6ಕಿ.ಮೀ.ದೂರದಲ್ಲಿರುವ ಕೆಂಚನಗುಡ್ಡಕ್ಕೆ ಆಟೋ, ಬಸ್ ವ್ಯವಸ್ಥೆ ಇದೆ. ಸುಮಾರು 2 ಕಿ.ಮೀ. ನಡೆದುಕೊಂಡು ಹೋಗಬೇಕು. ನದಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ. ವಾಹನ ಸೌಲಭ್ಯ ಇರುವವರು ನದಿ ಸಮೀಪಕ್ಕೆ ಹೋಗಬಹುದು.
ಮೊಸಳೆಗಳ ಹಾವಳಿ: ಈ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಕಳೆದ 2-3 ದಿನಗಳಿಂದ ನದಿಯ ವಿವಿಧ ಕಡೆಗಳಲ್ಲಿ ಮೊಸಳೆ ಕಾಣಿಸಿಕೊಂಡಿವೆ. ನದಿಯಲ್ಲಿ ಇಳಿದು ಈಜಾಡುವುದು ಅಪಾಯಕಾರಿ. ಇಲ್ಲಿ ಮೊಸಳೆಗಳಿವೆ ಎನ್ನುವ ನಾಮಫಲಕವಿಲ್ಲ. ಆದ್ದರಿಂದ ಜನರು ಎಚ್ಚರದಿಂದರುವುದು ಒಳಿತು.
ಸೆಲ್ಫಿ ಅಪಾಯ-ಎಚ್ಚರವಹಿಸಿ: ಪವರ್‌ಪ್ಲಾಂಟ್‌ಗೆ ನೀರು ಹರಿಸಲು ಕಟ್ಟಲಾಗಿರುವ ಕಾಲುವೆಯ ಮೇಲೆ ಝುಳು ಝುಳು ಹರಿಯುವ ನೀರಿನ ಕಟ್ಟೆಗಳ ಮೇಲೆ ನಿಂತು ಮೊಬೈಲ್‌ನಿಂದ ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಇಲ್ಲಿ ನೀರಿನ ಆಳ ಹೆಚ್ಚಾಗಿದ್ದು, ಆಕಸ್ಮಿಕವಾಗಿ ಜಾರಿ ಬಿದ್ದರೆ ಅಪಾಯವಾಗುವ ಸಾಧ್ಯತೆ ಇದೆ. ಸಂಬಂಧಿಸಿದವರು ಸೂಕ್ತ ಕ್ರಮದ ಅಗತ್ಯವಿದೆ.
ಗಂಗಾ ಪೂಜೆ: ನದಿಗೆ ಆಗಮಿಸಿದ ಮಹಿಳೆಯರು ಗಂಗಾಮಾತೆ ಶಾಂತವಾಗಲಿ, ತುಂಗಾಮಾತೆಯು ರೈತರ ಬದುಕನ್ನು ಹಸನು ಮಾಡಲಿ ಎಂದು ಪೂಜೆ ಸಲ್ಲಿಸಿದ ದೃಶ್ಯಗಳು ಕಂಡುಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.