ನನ್ಗೆ ಒಂಥರಾ ಆಗ್ತಿದೆ ನಿನಗೂ ಹಾಗೇ ಆಗ್ತಿದೆಯಾ?
Team Udayavani, Jul 24, 2018, 6:00 AM IST
ನಿನ್ನನ್ನು ನೋಡಿದ ಮೇಲೆ ನಾನು ನಾನಾಗಿ ಉಳಿದಿಲ್ಲ. ಅಸಲಿಗೆ, ಒಂದು ಕ್ಷಣವೂ ನನ್ನದು ಅನಿಸುತ್ತಿಲ್ಲ. ಒಂದೊಂದ್ಸಲ ನಾನು ಏನು ಮಾಡ್ತಿದೀನಿ ಅನ್ನೋದೇ ಗೊತ್ತಾಗಲ್ಲ ನನಗೆ. ಯಾಕೆ ಹೀಗೆಲ್ಲಾ ಆಗುತ್ತೆ? ನಿನಗೂ ಇದೇ ಥರಾ ಆಗ್ತಿದೆಯೋ ಹೇಗೆ?
ಪ್ರೀತಿಯ ಗೆಳತಿ,
ಮಾತುಗಳನ್ನು ಎಲ್ಲಿಂದ ಆರಂಭಿಸಿ, ಎಲ್ಲಿಗೆ ನಿಲ್ಲಿಸಬೇಕೆಂದೇ ತಿಳಿಯುತ್ತಿಲ್ಲ. ಈ ಹಿಂದೆಲ್ಲಾ, ದಿನ ಕಳೆಯುವುದೇ ಕಷ್ಟವಾಗಿದೆ. ಏನು ಮಾಡೋದಪ್ಪಾ ಎಂದು ಯೋಚಿಸುತ್ತಿದ್ದ ನನಗೆ, ನಿನ್ನ ಕಂಡ ಮೇಲಂತೂ ದಿನದಲ್ಲಿ ಸಮಯವೇ ಸಾಕಾಗುತ್ತಿಲ್ಲ. ರಾತ್ರಿ ಮಲಗಿದಾಗ ಮುಂಜಾವು ಬೀರಲು ತಡವಾಗುತ್ತಿದೆಯೇನೋ ಎಂದೆನಿಸುತ್ತದೆ. ಆದರೆ, ಮುಂಜಾವಾದ ಮೇಲೆ, ಹಗಲು ಅದೆಷ್ಟು ಬೇಗ ಕಳೆಯುತ್ತದೆ ಎಂದೇ ಗೊತ್ತಾಗುತ್ತಿಲ್ಲ. ನಿನ್ನ ಜೊತೆಗಿರುವ ಪ್ರತಿ ಕ್ಷಣವನ್ನೂ ನಾನು ಬಹುವಾಗಿ ಅನುಭವಿಸುತ್ತಿದ್ದೇನೆ. ಇದೇನು ಅಂತ ತಿಳಿಯುತ್ತಿಲ್ಲ. ಮನಸಾರೆ ಕೇಳಿಕೊಳ್ಳುತ್ತಿದ್ದೇನೆ, ದಯಮಾಡಿ ಇದೇನೆಂದು ಅರ್ಥ ಮಾಡಿಸು.
ನನಗಿಂದು ಮಾತುಗಳು ಬೇಕಾಗಿಲ್ಲ, ಕಣ್ಣುಗಳೇ ಮಾತನಾಡುತ್ತಿವೆ. ನೀನಿಂದು ನನ್ನ ಜೊತೆಯಿದ್ದರೆ ಮನಸ್ಸಿಗೆ ನಿನ್ನೆಯ ನೆನಪೇ ಇರುವುದಿಲ್ಲ! ಅದಕೆ ನಾಳೆಯ ಚಿಂತೆಯೂ ಇಲ್ಲ. ಇಂದಿನ ಈ ಕ್ಷಣ ಮಾತ್ರ ಎಂದೆಂದಿಗೂ ಇರಲೆಂದು ಬಯಸುತ್ತಿದೆ. ನಿನ್ನ ನೋಟ, ಮಾತು, ನಗುವೆಲ್ಲಾ ಸೇರಿ ನನ್ನ ಮನದಂಗಳದಲ್ಲಿ ಚಿತ್ತಾರ ಮೂಡಿದೆ. ಹೃದಯದ ತುಂಬೆಲ್ಲಾ ನೀನೇ ತುಂಬಿರುವಾಗ, ನನ್ನನ್ನೇ ನಾನು ಕಳೆದುಕೊಂಡಿರುವೆನೇನೋ ಎಂದು ಭಾಸವಾಗುತ್ತಿದೆ. ಅದೇ ಕಾರಣಕ್ಕೆ ಭಯವಾಗುತ್ತಿದೆ. ಇದೇನೆಂದು ನಿನಗೆ ಅರಿವಾದರೆ, ದಯಮಾಡಿ ಅರ್ಥ ಮಾಡಿಸು.
ಯಾವುದೋ ಮೇಘವೊಂದು ನನ್ನ ಮನದ ಮನೆಯ ಬಳಿ ದಿನವೂ ಪ್ರೀತಿಯ ಮಳೆ ಸುರಿಸುತ್ತಿದೆ. ನಿನ್ನನ್ನು ಮೊದಲ ಬಾರಿಗೆ ಕಂಡಾಗ ನೀನು ಯಾರೆಂದೇ ಅರಿಯದೆ, ಹೆಸರೂ ಸಹ ತಿಳಿಯದೆ ನಿನ್ನೊಂದಿಗೆ ಒಂದು ಭಾವ ಬೆಸೆದುಕೊಂಡಿತ್ತು. ಏನೆಂದು ಸಹ ಕೇಳದೆ, ತಡೆದರೂ ನಿಲ್ಲದೇ ನೀ ಹೋದಲ್ಲೆಲ್ಲಾ ನನ್ನ ಮನಸ್ಸು ನಿನ್ನ ಹಿಂದೆ ಬೀಳಲು ಶುರು ಮಾಡಿದೆ. ಈ ಜನ್ಮ ಕೊನೆಯಾದರೂ ನಿನ್ನ ಜೊತೆಗಿನ ಪಯಣ ಮುಗಿಯಲಾರದರೇನೋ ಎಂದೆನಿಸುತ್ತಿದೆ. ಇದೆಲ್ಲ ಯಾಕೆಂದು ನನಗೆ ತಿಳಿಯುತ್ತಿಲ್ಲ. ಇಂದು ನನ್ನಲೇ ನಾನಿಲ್ಲ. ನನಗೇನಾಗುತ್ತಿದೆ ಅಂತ ನಿನಗೆ ಅರಿವಾದರೆ ದಯಮಾಡಿ ನನಗೂ ಅರ್ಥ ಮಾಡಿಸು.
ಇಂತಿ ನಿನಗಾಗಿ ಕಾಯುತ್ತಿರುವ
ಅಭಿಷೇಕ್ ಎಂ. ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.