ರಗಡ್‌… ಶುದ್ಧ ಒರಟ!


Team Udayavani, Jul 24, 2018, 6:00 AM IST

15.jpg

ಅದು ರಗಡ್‌ ಲುಕ್ಕು. ಗಡ್ಡ ಕಂಪಲ್ಸರಿ. ಗಡ್ಡದ ಕೆತ್ತನೆಗಳು ಚಾಲುಕ್ಯರ ಕಾಲಕ್ಕಿಂತಲೂ ಭಿನ್ನ. ಕಿವಿ ಪಕ್ಕದಿಂದ ಹೊರಟ ಗೆರೆ ತಲೆಯನ್ನು ಒಂದು ಸುತ್ತು ಬಳಸಿಕೊಂಡು ಮುಂದೆಲೆಗೆ ತಂದು ನಿಲ್ಲಿಸೋದರಲ್ಲಿ ಏನೋ ಮಜಾ. ಪ್ಯಾಂಟುಗಳು ಕಡ್ಡಾಯವಾಗಿ ಅಲ್ಲಲ್ಲಿ ಹರಿದಿರಬೇಕು. ಭಯಂಕರ ಟ್ಯಾಟೂ, ವಿಚಿತ್ರರೂಪದ ಶೂ, ಬಟನ್‌ ತೆರೆದುಕೊಂಡ ಷರ್ಟು… ಇವೆಲ್ಲವೂ ಈಗಿನ ಹುಡುಗರ ಅವತಾರ. ಶಾಸ್ತ್ರೀಯವಾಗಿ ಹೇಳ್ಳೋದಾದ್ರೆ, ರಗಡ್‌ ಅಂದ್ರೆ ಶುದ್ಧ ಒರಟು ಒರಟಾಗಿರೋದು ಅಂತ! 

ಪಕ್ಕಾ ಮರ ಸುತ್ತುವ ಪ್ರೇಮಕತೆಯ ಚಿತ್ರ ಮೂರು ದಿನ ಕೂಡ ಓಡೋದಿಲ್ಲ. ಸಿನಿಮಾದಲ್ಲಿ ಎಲ್ಲಾ ಇದೆ. ಆದ್ರೂ ಇನ್ನೇನೋ ಸ್ವಲ್ಪ ಇರಬೇಕಿತ್ತು ಅಂತಾರೆ. ಬಟ್ಟೆ ಅಂಗಡಿಯವ, ತಂದಿಟ್ಟುಕೊಂಡ ಫಾರ್ಮಲ್‌ ಪ್ಯಾಂಟ್ಸ್‌ ಖರ್ಚಾಗಿಲ್ಲ ಅಂತ ವ್ಯಥೆ ಪಡ್ತಾನೆ; ಈ ಹುಡುಗರು ದಿನಕ್ಕೊಂದು ನಮೂನೆಯ ಬಟ್ಟೆ ಕೇಳ್ತಾರೆ. ಕಳೆದ ತಿಂಗಳಷ್ಟೇ ಭರ್ಜರಿ ಮಾರಾಟವಾಗಿದ್ದ ಫ್ಯಾನ್ಸ್‌ ಐಟಮ್‌ ಅನ್ನು ಈಗ ಯಾರೂ ಕೇಳುತ್ತಿಲ್ಲ. ಹೆಸರೇ ಗೊತ್ತಿಲ್ಲದ ಹೊಸ ವಸ್ತುಗಳಿಗೆ ಭಾರೀ ಬೇಡಿಕೆ ಇದೆ. ಹೌದು, ಯುವಕರು ಅದೇನೋ ಭಿನ್ನವಾದದ್ದನ್ನು ಬಯಸುತ್ತಿದ್ದಾರೆ. ಈ ಯುವಕರಾದರೂ ಎಷ್ಟಿದ್ದಾರೆ ಗೊತ್ತೇ? ಇಪ್ಪತ್ತೈದು ವರ್ಷದ ಒಳಗಿನವರ ಸಂಖ್ಯೆ ಶೇ.50 ದಾಟಿದೆ. ನಾಗಾಲೋಟದ ಬದಲಾವಣೆಗೆ ತುಡಿಯುತ್ತಿರುವುದು ಇದೇ ವರ್ಗ. ಅವರ ಬೇಡಿಕೆ ಪೂರೈಸಲಾಗದಷ್ಟು!

  ಈ ವರ್ಗ ಈಗ “ರಗಡ್‌’ನ ಬೆನ್ನೇರಿದೆ. ರಗಡ್‌ ಅಂದ್ರೆ ಮತ್ತೇನೂ ಅಲ್ಲ ಒರಟಾಗಿರುವುದು. ಶುದ್ಧ ಒರಟ! ಸದ್ಯಕ್ಕೆ ಅದೇ ಯೂತ್‌ನ ಟ್ರೆಂಡ್‌. ಸಾಧ್ಯವಾದಷ್ಟು ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಬಯಕೆ ಅವರದು. ಅದರಲ್ಲಿ ಮಜಾ ಇದೆ ಅವರಿಗೆ. ಹೀಗೆ ಒರಟಾಗಿ ಕಾಣಿಸಿಕೊಳ್ಳುವುದರಲ್ಲೇ ಅವರು ಲೈಫ್ನ ಚಿಲ್‌ ಹುಡುಕಿಕೊಳ್ಳುತ್ತಾರೆ.

ಏನೇನೆಲ್ಲಾ ಆಗಿದೆ!? 
ರಗಡ್‌ ಲುಕ್‌ನ ಹೆಸರಿನಲ್ಲಿ ಏನೇನಾಗಿದೆ ಎಂದು ಪಟ್ಟಿ ಮಾಡಲು ಸಾಧ್ಯವಾ? ಕೂದಲನ್ನು ಕತ್ತರಿಸಿಕೊಳ್ಳುವ ಶೈಲಿಯಲ್ಲಿಯೇ ನೂರಾರು ರೂಪ. ಕಿವಿ ಪಕ್ಕದಿಂದ ಹೊರಟ ಗೆರೆ ತಲೆಯನ್ನು ಒಂದು ಸುತ್ತು ಬಳಸಿಕೊಂಡು ಮುಂದೆಲೆಗೆ ಬಂದು ನಿಲ್ಲುತ್ತದೆ. ಗಡ್ಡ ಕಂಪಲ್ಸರಿ. ಮತ್ತೆ ಅದರ ಕೆತ್ತನೆಗಳು ಹಲವು. ಪ್ಯಾಂಟ್‌ಗಳು ಅಲ್ಲಲ್ಲಿ ಕಡ್ಡಾಯವಾಗಿ ಹರಿದಿರಬೇಕು. ಭಯಂಕರ ಟ್ಯಾಟೂಗಳು. ವಿಚಿತ್ರರೂಪದ ಶೂಗಳು. ಷರ್ಟ್‌ ಬಟನ್‌ನ ಮೊದಲೆರಡು ಗುಂಡಿ ಸದಾ ತೆರೆದಿರಬೇಕು. ಸೈಡಿಗೆ ಜೋತು ಬೀಳುವ ಬ್ಯಾಗು ಅವರಿಗಿಂತ ಖರಾಬ್‌ ಆಗಿರಬೇಕು. ಅಪ್ಪಿತಪ್ಪಿ ಎಲ್ಲಿಯೂ ಡೀಸೆಂಟ್‌ ಅನ್ನಿಸಬಾರದು. ಬಳಸುವ ವಾಹನವನ್ನು ಅದರ ಮೂಲರೂಪಕ್ಕೆ ಗುಡ್‌ ಬೈ ಹೇಳಿಸಿ, ಅದಕ್ಕೆ ತಮ್ಮದೇ ಶೈಲಿಯ ಟಚ್‌ಅಪ್‌ ಇರಬೇಕು. ಸೆಲೆಬ್ರಿಟಿಗಳ ಸ್ಟೈಲ್‌ ಅನ್ನು ಇಂಚೂ ಬಿಡದೆ ಅನುಕರಿಸುವ ಒಂದು ಹುಚ್ಚಿರುತ್ತದೆ. ಮಾತುಗಳನ್ನು ಮೀರುವುದು, ನಿಯಮಗಳನ್ನು ಉಲ್ಲಂ ಸುವುದರಲ್ಲಿ ಅವರಿಗೇನೊ ಖುಷಿ.

  ಇವರು ಬಯಸುವುದೇನಿದ್ದರೂ ಬ್ರಾಂಡ್‌ಐಟಂ. ರೀಬಾಕ್‌, ಫಾಸ್ಟ್‌ಟ್ರಾಕ್‌, ಲೇಸ್‌, ನೈಕ್‌… ಹೀಗೆ ಅವರ ಬಳಿ ಒಂದು ಲಿಸ್ಟೇ ಇದೆ. ಹಳೆಯ ಟೈಟಾನ್‌, ಬಾಟಾ ಇತ್ಯಾದಿಗಳ ಕಡೆ ಅವರು ತಿರುಗಿಯೂ ನೋಡುವುದಿಲ್ಲ. ಅವರ ಮುಖ ಹೊಸದರ ಕಡೆ ನೆಟ್ಟಿರುತ್ತದೆ. ಹೊಸ ಉತ್ಪನ್ನವೊಂದು ಮಾರುಕಟ್ಟೆಗೆ ಬಂದಿದ್ದೇ ತಡ, ಅದಕ್ಕೆ ಮುಗಿಬೀಳ್ತಾರೆ.

ಇವರ ಮನಸ್ಸು ಒರಟಾ?
Not Sure! ಹಾಗೆಲ್ಲಾ ಹೇಳ್ಳೋಕೆ ಆಗೋಲ್ಲ. ಮನಸ್ಸಿನ ಗುಣವೇ ಹೊರಗಿನ ಅವರ ಲಕ್ಷಣದಲ್ಲಿರುತ್ತೆ ಅನ್ನುವ ಮಾತಿದೆ. ಆ ಲುಕ್‌, ಆ ವರ್ತನೆ ಒಳಗಿನ ಬೇಡಿಕೆ ಅನ್ನುವುದಕ್ಕಿಂತ ಈಗಿನ ಟ್ರೆಂಡ್‌ಗೆ ತನ್ನನ್ನು ತಾನು ಕೂರಿಸಿಕೊಳ್ಳುವ ಪ್ರಯತ್ನವಷ್ಟೇ! ಕೆಲವೊಮ್ಮೆ ಆತ ತನಗೆ ಇಷ್ಟವಿಲ್ಲದಿದ್ದರೂ ಇದಕ್ಕೆ ಒಗ್ಗಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಗಲೀಜಾದ ಬಟ್ಟೆ ತೊಟ್ಟವನ ಮನಸ್ಸು ಕೆಟ್ಟದ್ದು ಅಂತಲ್ಲ. ಸಾಮಾನ್ಯವಾಗಿ 18-25ರ ವರೆಗಿನ ವಯಸ್ಸು ಬಿರುಗಾಳಿಯಂಥದ್ದು. ಒಂದು ಕ್ರೇಜ್‌ ಬಯಸುವಂಥದ್ದು. ತುಂಬಾ ಅನುಕರಿಸಲು ಬಯಸುವಂಥದ್ದು. ಹೊಸದು ಇಷ್ಟವಾದರೆ ಮುಗೀತು, ಅದನ್ನು ಆ ಕ್ಷಣಕ್ಕೆ ಅಪ್ಪಿಕೊಂಡು ಬಿಡುವ ಮನೋಭಾವ ಇವರದು. ಅವರಿಗೆ ಆ ಕ್ಷಣದ ಥ್ರಿಲ್‌ ಮತ್ತು ಖುಷಿ ಮುಖ್ಯ.

  ಅವರ ಭಿನ್ನ ಉಡುಗೆ- ತೊಡುಗೆಗೂ ಮನಸ್ಸಿಗೂ ತುಂಬಾ ಲಿಂಕೇನೂ ಆಗುವುದಿಲ್ಲ. ಅಷ್ಟಕ್ಕೂ ಸಂಶೋಧನೆಯೊಂದು, “ರಗಡ್‌ ಲುಕ್ಕಿನ ವ್ಯಕ್ತಿಗಳಲ್ಲಿ ಒಂದು ಸ್ವಸ್ಥ ಮನಸ್ಸಿರುತ್ತದೆ’ ಅಂತ ಹೇಳುತ್ತದೆ. ಅವರು ಹೆಚ್ಚು ಕ್ರಿಯೇಟಿವ್‌. ಬೇಕು ಅಂತಲೇ ರಿಸ್ಕ್ ತಗೆದುಕೊಳ್ಳುವವರು. ಸವಾಲು ಸ್ವೀಕರಿಸಲು ಸದಾ ಮುಂದು. ಇವರ ಬಳಿ ಒಂದು ಪಕ್ಕಾ ಗೋಲ್‌ ಇರುತ್ತೆ. ರಗಡ್‌ ಲುಕ್‌ಗೆ ಹಂಬಲಿಸ್ತಾರಲ್ಲ; ಅವರು ಶ್ರಮಜೀವಿಗಳು. ನುಗ್ಗಿ ಸಾಗುವುದು ಅವರಿಗೆ ರಕ್ತಗತ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಸಾಹಸಿಗಳು. ಸಾಹಸದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೂ ಮಾಡದ್ದನ್ನು ತಾನು ಮಾಡಬೇಕೆಂಬ ಹಂಬಲ ಹೊಂದಿರುತ್ತಾರೆ. ಕ್ರೀಡೆ ಇವರ ಹಾಟ್‌ ಫೇವರಿಟ್‌. ತರಲೆ, ಒರಟು ಮಾತು, ಅಡ್ಡದಾರಿಯ ಸವಾರಿಯೂ ಕೆಲವರಲ್ಲಿ ಮನೆ ಮಾಡುತ್ತದೆ. 

ಸರಿ ತಪ್ಪುಗಳ ಪ್ರಶ್ನೆ
ನೀಟಾಗಿ ಕ್ರಾಫ್ ಬಾಚಿಕೊಂಡು, ಒಂದು ದೊಗಳೆ ಪ್ಯಾಂಟ್‌ ಹಾಕಿಕೊಂಡು ಯೌವ್ವನ ಕಳೆದ ನಮ್ಮ ಹಿರಿಕರಿಗೆ ಇವರನ್ನು ಕಂಡು ರೇಜಿಗೆ ಹುಟ್ಟಬಹುದು. “ಎತ್ತ ಸಾಗುತ್ತಿದ್ದಾರೆ ನಮ್ಮ ಯುವಕರು?’ ಎಂಬ ದುಗುಡವೂ ಕಾಡಬಹುದು. ಆದರೆ, ಕಾಲಕ್ಕೆ ತಕ್ಕಂತೆ ನಿಲ್ಲಬೇಕಾಗಿರುವುದು ಜೀವಿಯ ಲಕ್ಷಣ. ಯುವಕರ ರಗಡ್‌ ಲುಕ್ಕಿನಂತೆ ಮನಸ್ಸು ರಗಡ್‌ ಆದಾಗ ನಾವು ಸೀರಿಯಸ್‌ ಆಗಿ ಯೋಚಿಸಬೇಕಾದ್ದೇ! ಒರಟು ಒರಟಾಗಿ ಬಟ್ಟೆ ಮುಂತಾದವನ್ನು ಧರಿಸಿದ ಮಾತ್ರಕ್ಕೆ ಅವರೇ ಸಮಾಜಕಂಟಕರೆಂದು ಭಾವಿಸಬೇಕಿಲ್ಲ. ಒಂದಿಷ್ಟು ಅಡ್ಡ ವರ್ತನೆಗಳಿಂದ ಸಮಾಜದ ಮಧ್ಯೆ ಒಂದು ಅಶಿಸ್ತು ಕಾಣಿಸುವ ಭಯವೂ ಇದೆ. ಅಂತಹ ಯುವಕರಿಗೆ ನಿಜಕ್ಕೂ ತಿಳಿವಳಿಕೆ ಕೊಡಬೇಕಾಗಿದೆ. ನಾಳಿನ ಸಮಾಜ ಅವರ ಕೈಯಲ್ಲಿರುವುದರಿಂದ ಇಂತಹ ಒಂದು ಕೇರ್‌ ಅವಶ್ಯಕ! 

ಇವರೇ ಟಾರ್ಗೆಟ್‌
ಬಹುತೇಕ ಕಂಪನಿಗಳಿಗೆ ಇವರೇ ಮಾರ್ಕೆಟ್‌. ಈ ವಯಸ್ಸಿನವರ ಮೆಂಟಾಲಿಟಿ ಅರಿತ ಅವರು ದಿನಕ್ಕೊಂದರಂತೆ ಹೊಸ ಉತ್ಪನ್ನ ಬಿಡುಗಡೆಗೊಳಿಸಿ ಕ್ರೇಜ್‌ ಹೆಚ್ಚಿಸುತ್ತಾರೆ. ಆ ಕಂಪನಿಗಳ ಪ್ರಚಾರತಂತ್ರವೂ ಹಾಗೆಯೇ ಇರುತ್ತದೆ. ನೈಕ್‌ ಕಂಪನಿ “ಜಸ್ಟ್‌ ಡು ಇಟ್‌’ ಅನ್ನುತ್ತೆ, ಆ್ಯಪಲ್‌ನದು “ಥಿಂಕ್‌ ಡಿಫ‌ರೆಂಟ್‌’. ಆದರೆ, “ಏವಿಸ್‌’ ಸಂಸ್ಥೆ ಹೇಳ್ಳೋದು, “ವಿ ಟ್ರೈ ಹಾರ್ಡರ್‌’ ಅಂತ. ಹೀಗೆ ವಿಶಿಷ್ಟ ಕ್ಯಾಪ್ಷನ್‌ ಕೊಟ್ಟು, ಇಂಥ ಯುವಕರನ್ನು ಇವು ಬುಟ್ಟಿಗೆ ಹಾಕಿಕೊಳ್ಳುತ್ತವೆ.

ಒಂದು ವ್ಯಾಲಿಡಿಟಿ ಇದೆ…
ಇವರು ಇಷ್ಟಪಡುವಂಥದ್ದು ಇವರಿಗೆ ನಾಳೆಯೇ ಬೋರಾಗಿ ಬಿಡುತ್ತದೆ. ನಾಳೆ ಇನ್ಯಾವುದೋ ಇವರಿಗೆ ಕಾದಿರುತ್ತದೆ. ತಿಂಗಳಿಗೊಂದು ಟ್ರೆಂಡ್‌ ಸ್ಟೈಲಾಗುತ್ತದೆ. ಇವರು ಯಾವುದೇ ಶೈಲಿಯನ್ನೂ ತುಂಬಾ ದಿನ ಉಳಿಸಿಕೊಳ್ಳುವುದಿಲ್ಲ. ಹೊಸ ಹೊಸದು ಹುಟ್ಟಿಕೊಳ್ಳುತ್ತದೆ. ಒಂದು ಕಾಲದಲ್ಲಿ ಗಜನಿ ಹೇರ್‌ಸ್ಟೈಲ್‌ ಮಾಡಿಸಿಕೊಂಡವರು ನಂತರ “ರೋಬೊ’ ಸಿನಿಮಾದ ಸ್ಪೈಕ್ ಸ್ಟೈಲ್‌ಗೆ ಮೊರೆ ಹೋಗಲಿಲ್ಲವೇ?

ಹುಡುಗಿಯರಿಗೆ ಇವರೇ ಇಷ್ಟ… 
ಹುಡುಗಿಯರಿಗೆ ಇಂಥ ಹುಡುಗರೇ ಇಷ್ಟವಂತೆ. ಶಾರೂಕ್‌ಗಿಂತ ರಫ್ ಅನ್ನಿಸುವ ಜಾನ್‌ಅಬ್ರಾಹಂ, ಸಲ್ಮಾನ್‌ಖಾನ್‌ ಇಷ್ಟ ಅಂತಾರೆ ಹುಡುಗಿಯರು. ತೆಂಡೂಲ್ಕರ್‌ಗಿಂತ ಕೊಹ್ಲಿ ಮೇಲೆ ಹೆಚ್ಚು ಆಕರ್ಷಣೆ ಎನ್ನುವ ಸುಂದರಿಯರೂ ಸಾಕಷ್ಟಿದ್ದಾರೆ. ಅವರ ಒರಟುತನವೇ ಅವಳಿಗೊಂದು ಆಕರ್ಷಣೆ. ಪ್ರತಿ ಹುಡುಗಿಯೂ ಅವನಲ್ಲಿ ಒಂದು ಮೆಚೂರ್‌ ವ್ಯಕ್ತಿತ್ವ ಕಾಣುತ್ತಾಳೆ. ತನ್ನ ಹುಡುಗನಲ್ಲಿ ಮಗುವಿನಂಥ ಎಳಸುತನವಿರುವುದು ಅವಳಿಗೆ ಇಷ್ಟವಾಗುವುದಿಲ್ಲ. ಗಡ್ಡದ ಕಚಗುಳಿ ಅವರಿಗೆ ಹೆಚ್ಚು ಕಾಡುತ್ತಂತೆ! 

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.