ಕಿಷ್ಕಿಂದಾ ಅಂಜನಾದ್ರಿಬೆಟ್ಟದ ದೇಗುಲ ಸರ್ಕಾರದ ವಶ
Team Udayavani, Jul 24, 2018, 6:30 AM IST
ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಾಲಯ ಮತ್ತು ಇದಕ್ಕೆ ಸಂಬಂಧಿಸಿದ ಸ್ಥಿರ, ಚರಾಸ್ತಿಗಳನ್ನು ಸೋಮವಾರ ಹುಲಿಗೆಮ್ಮ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಗಂಗಾವತಿ, ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ ನೇತೃತ್ವದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಬೆಟ್ಟದ ಕೆಳಗೆ ಮತ್ತು ಮೇಲ್ಭಾಗದಲ್ಲಿ ಆಸ್ತಿಗಳನ್ನು ಸರ್ವೇ ಮಾಡಿ ಪ್ರತಿಯೊಂದನ್ನು ದಾಖಲಿಸಿಕೊಂಡು ಮಹಜರ್ ಮಾಡಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡರು. ಆಂಜನೇಯ ದೇವರ ಬೆಳ್ಳಿಯ ಗಧೆ, ಪೂಜಾ ಸಾಮಾಗ್ರಿ, ಅಡುಗೆ ಸಾಮಾನು ಹಾಗೂ ಸಂಸ್ಕೃತ ಪಾಠಶಾಲೆಯನ್ನು ವಶಕ್ಕೆ ಪಡೆದರು. ಪ್ರಸ್ತುತ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕ, ವ್ಯವಸ್ಥಾಪಕ ಸೇರಿ 17 ಜನರ ಹೆಸರು ನೋಂದಾಯಿಸಿಕೊಂಡು ತಾತ್ಕಾಲಿಕವಾಗಿ ಕೆಲಸ ಮಾಡುವಂತೆ ಸೂಚಿಸಲಾಯಿತು.
ಹನುಮ ಉದಯಿಸಿದ ನಾಡೆಂದು ಖ್ಯಾತಿ ಪಡೆದ ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಹಲವು ದಶಕಗಳಿಂದ ಬೆಟ್ಟದ ಮೇಲಿರುವ ಆಂಜನೇಯ ದೇವಾಲಯದಲ್ಲಿ ಸ್ಥಳೀಯರೇ ಪೂಜಾ ಕಾರ್ಯ ಮಾಡುತ್ತಿದ್ದರು. ಇತ್ತೀಚೆಗೆ ಉತ್ತರ ಭಾರತದಿಂದ ಹಾಗೂ ವಿದೇಶಿ ಭಕ್ತರು ಆಗಮಿಸುವುದು ಹೆಚ್ಚಾಗಿದ್ದರಿಂದ ಆದಾಯ ಹೆಚ್ಚಾಗಿತ್ತು. ಆನೆಗೊಂದಿ ರಾಜಮನೆತನದವರು ಟ್ರಸ್ಟ್ ರಚಿಸಿ ಉತ್ತರ ಭಾರತದಿಂದ ಆಗಮಿಸಿದ ಸಾಧುಗಳನ್ನು ಪೂಜಾ ಕಾರ್ಯಕ್ಕೆ ನಿಯುಕ್ತಿ ಮಾಡಿದರು. 10 ವರ್ಷದ ಹಿಂದೆ ಮಹಾಂತ ವಿದ್ಯಾದಾಸ ಬಾಬಾ ಎಂಬುವರನ್ನು ಅರ್ಚಕರನ್ನಾಗಿ ಮಾಡಲಾಯಿತು. ಇವರ ಅವಧಿಯಲ್ಲಿ ಸರ್ಕಾರ, ದಾನಿಗಳ ಸಹಾಯದಿಂದ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿದವು.
ಈ ನಡುವೆ ಟ್ರಸ್ಟ್ ಹಾಗೂ ಬಾಬಾ ನಡುವೆ ವೈಮನಸ್ಸು ಉಂಟಾಯಿತು. ಇದೇ ಸಂದರ್ಭದಲ್ಲಿ ಬಾಬಾ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರಿಂದಾಗಿ ಬಾಬಾ ಅವರನ್ನು ಅರ್ಚಕ ಸ್ಥಾನದಿಂದ ಪದಚ್ಯುತಿ ಮಾಡಲಾಯಿತು. ಟ್ರಸ್ಟ್ ಹಾಗೂ ಬಾಬಾ ಬೆಂಬಲಿಗರ ನಡುವೆ ಸಂಘರ್ಷ ಹಿನ್ನೆಲೆಯಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಗಳು ದೇವಾಲಯವನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರಿಂದ ಅಂಜನಾದ್ರಿ ಕ್ಷೇತ್ರ ಸರ್ಕಾರದ ವಶಕ್ಕೆ ಹೋಗಿದೆ.ಮಧುಗಿರಿ ಮೋದಿ ಎಂಬ ಹಿಂದೂ ಸಂಘಟನೆ ಕಾರ್ಯಕರ್ತ ಅಂಜನಾದ್ರಿ ಬೆಟ್ಟವನ್ನು ಸರ್ಕಾರದ ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಆದೇಶ ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿದರು.
ಟ್ರಸ್ಟ್‌ಗೆ ವಹಿಸುವಂತೆ ಮನವಿ
ಆನೆಗೊಂದಿ ರಾಜಮನೆತನದವರ ನೇತೃತ್ವದಲ್ಲಿರುವ ಅಂಜನಿ ಪರ್ವತ ಚಾರಿಟೇಬಲ್ ಮತ್ತು ರಿಲಿಜಿನಿಯನ್ ಟ್ರಸ್ಟ್‌ನ ಅಧ್ಯಕ್ಷ ರಾಜಾ ನರಸಿಂಹ ದೇವರಾಯಲು ಹಾಗೂ ಲಲಿತಾರಾಣಿ ಶ್ರೀರಂಗದೇವರಾಯಲು ಇತರೆ ಪದಾಧಿಕಾರಿಗಳು ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆದ ಆದೇಶವನ್ನು ಮರುಪರಿಶೀಲಿಸಿ ಪುನಃ ಟ್ರಸ್ಟ್‌ಗೆ ವಹಿಸುವಂತೆ ತಹಶೀಲ್ದಾರ್ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು.
ಅಂಜನಾದ್ರಿಯಲ್ಲಿ ಎಂದಿನಂತೆ ಪೂಜಾ, ಧಾರ್ಮಿಕ ಕಾರ್ಯ, ಅನ್ನಸಂತರ್ಪಣೆ ನಡೆಯಲಿದೆ. ಈಗಿರುವ ಸಿಬ್ಬಂದಿ, ಅರ್ಚಕರು ಇರಲಿದ್ದಾರೆ. ಮುಂದಿನ ವ್ಯವಸ್ಥೆ ಆಗುವ ತನಕ ಇವರನ್ನೇ ಮುಂದುವರಿಸಲಾಗುತ್ತದೆ. ಕ್ಷೇತ್ರದ ಆಚಾರ, ವಿಚಾರ ಪದ್ಧತಿಗಳು ನಿರಂತರವಾಗಿ ಜರುತ್ತವೆ. ಅಂಜನಾದ್ರಿ ಬೆಟ್ಟದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗುತ್ತದೆ. ಭಕ್ತರು ದೇಣಿಗೆಯನ್ನು ಬ್ಯಾಂಕ್ ಖಾತೆಗೆ ಹಾಕಬೇಕು. ಪ್ರತಿಯೊಂದಕ್ಕೂ ಲೆಕ್ಕಪತ್ರ ಇಡಲಾಗುತ್ತದೆ.
– ಚಂದ್ರಮೌಳಿ, ಅಂಜನಾದ್ರಿ ಬೆಟ್ಟ ದೇವಾಲಯದ ಆಡಳಿತಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.