ಟಿಟಿ ಟೀಮ್‌ ಬಿಟ್ಟು ಹಾರಿದ ಏರ್‌ ಇಂಡಿಯಾ!


Team Udayavani, Jul 24, 2018, 11:02 AM IST

air-india.jpg

*ಆಸ್ಟ್ರೇಲಿಯನ್‌ ಓಪನ್‌ ಟಿಟಿ ವಿಶ್ವ ಸರಣಿಗೆ ಹೊರಟಿದ್ದ ಭಾರತೀಯ ಸ್ಪರ್ಧಿಗಳು
*ಸ್ಪೋರ್ಟ್ಸ್ ಇಂಡಿಯಾ ಮಧ್ಯಪ್ರವೇಶ: ತಡರಾತ್ರಿ ಮತ್ತೂಂದು ವಿಮಾನದಲ್ಲಿ ಯಾನ

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೊರಟಿದ್ದ ಕಾಮನ್ವೆಲ್ತ್‌ ಚಿನ್ನ ವಿಜೇತರಾದ ಮಣಿಕಾ ಬಾತ್ರಾ ಸಹಿತ ರಾಷ್ಟ್ರೀಯ ಕ್ರೀಡಾಳುಗಳಿಗೇ ಏರ್‌ ಇಂಡಿಯಾ ವಿಮಾನ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.ಆಸ್ಟ್ರೇಲಿಯನ್‌ ಓಪನ್‌ ವಿಶ್ವ ಟೇಬಲ್‌ ಟೆನಿಸ್‌ ಸರಣಿಯಲ್ಲಿ ಪಾಲ್ಗೊಳ್ಳಲು, ಮೊದಲೇ ವಿಮಾನ ಟಿಕೆಟ್‌ ಬುಕ್‌ ಮಾಡಿಕೊಂಡು, ರವಿವಾರ ಭಾರತೀಯ ಸ್ಪರ್ಧಿಗಳ 17 ಜನರ ತಂಡ ಒಟ್ಟಾಗಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಆದರೆ ಏರ್‌ ಇಂಡಿಯಾ ಈ ಪೈಕಿ ಕೇವಲ 10 ಮಂದಿಗೆ ಮಾತ್ರ  ವಿಮಾನಕ್ಕೆ ಪ್ರವೇಶಾವಕಾಶ ನೀಡಿದೆ. ಇನ್ನುಳಿದ 7 ಮಂದಿ ತಡವಾಗಿ ಬಂದಿದ್ದಾರೆ ಎಂಬ ನೆಪವೊಡ್ಡಿ ಹೊರಕೂರಿಸಿತು. ಪರಿಣಾಮ ಸೋಮವಾರದಿಂದ ಶುರುವಾಗುವ ಕೂಟದ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಕ್ರೀಡಾಪಟುಗಳು ಕಂಗಾಲಾದರು.

ಏರ್‌ ಇಂಡಿಯಾ ಅವಾಂತರದಿಂದ ಮಣಿಕಾ ಬಾತ್ರಾ, ಮೌಮಾ ದಾಸ್‌, ಶರತ್‌ ಕಮಲ್‌, ಮಧುರಿಕಾ, ಹರ್ಮೀತ್‌, ಸುತೀರ್ಥ, ಸತ್ಯನ್‌ ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲೇ ದೂರ ಉಳಿಯಬೇಕಾಯಿತು. ಇದರಿಂದ ಆಕ್ರೋಶಿತರಾದ ಮಣಿಕಾ ಬಾತ್ರಾ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್‌ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ಎಚ್ಚೆತ್ತ ಸ್ಪೋರ್ಟ್ಸ್ ಇಂಡಿಯಾ
ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡ ಸ್ಪೋರ್ಟ್ಸ್ ಇಂಡಿಯಾ (ಭಾರತೀಯ ಕ್ರೀಡಾಪ್ರಾಧಿಕಾರದ ಹೊಸ ಹೆಸರು) ಪ್ರಧಾನ ಕಾರ್ಯದರ್ಶಿ ನೀಲಂ ಕಪೂರ್‌ ಮಧ್ಯಪ್ರವೇಶಿಸಿದರು. ಉಳಿದ 7 ಮಂದಿಗೆ ರವಿವಾರ ತಡರಾತ್ರಿಯೇ ಮತ್ತೂಂದು ವಿಮಾನದಲ್ಲಿ ಮೆಲ್ಬರ್ನ್ಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟರು. ಅದನ್ನು ಮಣಿಕಾ ಟ್ವೀಟ್‌ ಮೂಲಕ ದೃಢಪಡಿಸಿದ್ದಾರೆ.

ಕ್ರೀಡಾಪಟುಗಳು ಹೇಳುವುದೇನು?
ನಾವು ಏರ್‌ ಇಂಡಿಯಾ ಕೌಂಟರ್‌ ಬಳಿ ಹೋದಾಗ, ನಿಮ್ಮಲ್ಲಿ 10 ಮಂದಿಗೆ ಮಾತ್ರ ಪ್ರವೇಶ ಸಿಗುತ್ತದೆ. ಉಳಿದ 7 ಮಂದಿಗೆ ಸಾಧ್ಯವಿಲ್ಲ. ಎಲ್ಲ ಆಸನಗಳು ಭರ್ತಿಯಾಗಿವೆ ಎಂದರು. ವಿಷಯ ಕೇಳಿ ಆಘಾತವಾಯಿತು. ನಮ್ಮೆಲ್ಲ ಟಿಕೆಟ್‌ಗಳನ್ನು ಬಾಮರ್‌ ಲಾರಿ ಸಂಸ್ಥೆ ಬುಕ್‌ ಮಾಡಿತ್ತು ಎಂದು ಮಣಿಕಾ ಬಾತ್ರಾ ಟ್ವೀಟ್‌ ಮಾಡಿದ್ದಾರೆ.

ಏರ್‌ ಇಂಡಿಯಾ ಹೇಳುವುದೇನು?
ಕ್ರೀಡಾಪಟುಗಳ ಬಗ್ಗೆ ನಮಗೆ ಗೌರವವಿದೆ. ಆದರೆ ನಮಗೆ ಪದ್ಧತಿ ಪ್ರಕಾರ ತಂಡದ ಕುರಿತು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಜತೆಗೆ ಸ್ಪರ್ಧಿಗಳೂ ತಡವಾಗಿ ಬಂದರು. ಬುಕಿಂಗ್‌ ಮಾಡುವಾಗಲೂ ಬೇರೆ ಬೇರೆ ಪಿಎನ್‌ಆರ್‌ಗಳಿದ್ದವು. ಆದ್ದರಿಂದ ಅವರಿಗೆ ಆಸನ ನೀಡಲಾಗಲಿಲ್ಲ ಎಂದು ಏರ್‌ ಇಂಡಿಯಾ ಸ್ಪಷ್ಟೀಕರಣ ನೀಡಿದೆ.
ಸ್ಪೋರ್ಟ್ಸ್  ಇಂಡಿಯಾ ಕಾರ್ಯದರ್ಶಿ ನೀಲಂ ಕಪೂರ್‌ ಅಭಿಪ್ರಾಯಗಳೂ ಏರ್‌ ಇಂಡಿಯಾ ಹೇಳಿಕೆಗೆ ಪೂರಕವಾಗಿವೆ. “ತಂಡ 12.40ಕ್ಕೆ ಮೆಲ್ಬರ್ನ್ಗೆ ಹೊರಡಬೇಕಿತ್ತು. ನಿಯಮಗಳ ಪ್ರಕಾರ ಹೊರಡುವ ಸಮಯಕ್ಕಿಂತ 3 ಗಂಟೆ ಮುನ್ನವೇ ನಿಲ್ದಾಣದಲ್ಲಿರಬೇಕಿತ್ತು. ಆದರೆ ಸ್ಪರ್ಧಿಗಳು ಸ್ವಲ್ಪ ತಡವಾಗಿ ನಿಲ್ದಾಣ ತಲುಪಿದ್ದಾರೆ (2 ಗಂಟೆ 10 ನಿಮಿಷ ಬಾಕಿಯಿತ್ತು)’ ಎನ್ನುವುದು ನೀಲಂ ಅಭಿಪ್ರಾಯ.  ಆದರೆ ವಿಮಾನ ಟಿಕೆಟ್‌ ಬುಕ್‌ ಆದ ಮೇಲೂ ಸ್ವಲ್ಪ ತಡ ಎಂಬ ಕಾರಣಕ್ಕೆ ಆ ಟಿಕೆಟ್‌ಗಳನ್ನು ಬೇರೆಯವರಿಗೆ ಏರ್‌ ಇಂಡಿಯಾ ನೀಡಿದ್ದು ಹೇಗೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. 

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.