ಸುಜುಕಿ ಬರ್ಗ್ಮನ್ ಸ್ಟ್ರೀಟ್ 125 ಸಿಸಿ ಸ್ಕೂಟರ್ ಬಿಡುಗಡೆ
Team Udayavani, Jul 24, 2018, 11:53 AM IST
ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ., ಬಹು ನಿರೀಕ್ಷಿತ 125 ಸಿಸಿ ಸ್ಕೂಟರ್ “ಬರ್ಗ್ಮನ್ ಸ್ಟ್ರೀಟ್’ ಅನ್ನು ಪರಿಚಯಿಸಿದೆ. ನಗರದಲ್ಲಿ ಶನಿವಾರ ನೂತನ ಸ್ಕೂಟರ್ ಅನ್ನು ಸಂಸ್ಥೆಯ ಮಾರಾಟ ವಿಭಾಗದ (ದಕ್ಷಿಣ) ವಲಯ ವ್ಯವಸ್ಥಾಪಕ ಕೆಎನ್‌ವಿಎಸ್ ಸುರೇಶ್ ಅವರು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಸ್ಕೂಟರ್‌ಗಳಲ್ಲಿ 125ಸಿಸಿ ವರ್ಗವು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ನಮ್ಮ ಬರ್ಗ್ಮನ್ ಸ್ಟ್ರೀಟ್ ಸ್ಕೂಟರ್ ಸಾಕಷ್ಟು ನಿರೀಕ್ಷೆಯೊಂದಿಗೆ ಹೊರಬಂದಿದೆ. ಐರೋಪ್ಯ ಸ್ಕೂಟರ್ ವಿನ್ಯಾಸದಿಂದ ರೂಪುಗೊಂಡ ಆಧುನಿಕ ತಂತ್ರಜ್ಞಾನವುಳ್ಳ ಈ ವಾಹನ ಚಾಲನೆಯಲ್ಲಿ ತೃಪ್ತಿ ತರುವುದಂತೂ ಖಂಡಿತ. ಅಲ್ಲದೆ, ಗ್ರಾಹಕರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಎಲ್ಲ ರೀತಿ ಐಷಾರಾಮಿ ಸೌಲಭ್ಯಗಳುಳ್ಳ ಆಧುನಿಕ ಸ್ಕೂಟರ್ ಇದಾಗಿದೆ ಎಂದರು.
ಬರ್ಗ್ಮನ್ ವಿಶೇಷತೆಗಳು: ಏರ್‌ಕೂಲ್ಡ್, ಎಸ್‌ಒಎಚ್‌ಸಿ 2 ವಾಲ್Ì, ಸಿಂಗಲ್ ಸಿಲಿಂಡರ್, 125 ಸಿಸಿ-4 ಸ್ಟ್ರೋಕ್ ಶಕ್ತಿಶಾಲಿ ಎಂಜಿನ್ ಹೊಂದಿರುವ ನೂತನ ಸ್ಕೂಟರ್, ಕಾರ್ಯ ಸಾಮರ್ಥ್ಯದಲ್ಲಿ ಹಾಗೂ ಇಂಧನ ಉಳಿತಾಯದಲ್ಲಿ ಎತ್ತಿದ ಕೈ. ಇದರ ಎಸ್‌ಇಪಿ ತಂತ್ರಜ್ಞಾನ, ಸಿಬಿಎಸ್, ಲೆಫ್ಟ್ ಬ್ರೇಕ್ ಲಿವರ್‌ನಿಂದ ಎರಡೂ ಬ್ರೇಕ್‌ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ. ಮುಂಬದಿ ಹಾಗೂ ಹಿಂಬದಿ ಬ್ರೇಕ್ ಶಕ್ತಿಯ ನಡುವೆ ಉತ್ತಮ ಸಮತೋಲನ ಏರ್ಪಡುವುದಕ್ಕೆ ನೆರವಾಗುತ್ತದೆ.
ಬರ್ಗ್ಮನ್ ಸ್ಟ್ರೀಟ್ ಪ್ರೀಮಿಯಂ ಸ್ಟೈಲ್, ಎಲ್‌ಇಡಿ ಹೆಡ್‌ಲೈಟ್, ಪೊಸಿಷನ್ ಲ್ಯಾಂಪ್, ಟೇಲ್ ಲ್ಯಾಂಪ್ ಪ್ರಖರತೆ ಉತ್ತಮವಾಗಿದೆ. ಫ್ಲೆಕ್ಸಿಬಲ್ ಫುಟ್ ಪೊಸಿಶನ್, ಸಂಪೂರ್ಣ ಡಿಜಿಟಲ್ ಪರಿಕರ ಪ್ಯಾನಲ್, ಡಿಜಿಟಲ್ ಗಡಿಯಾರ, ಪ್ಯುಯೆಲ್ ಗಾಜ್, ಆಯಿಲ್ ಚೇಂಜ್ ಇಂಡಿಕೇಟರ್ ಮತ್ತು ಡ್ಯುಯಲ್ ಟ್ರಿಪ್ ಮೀಟರ್‌ನಿಂದ ಇದು ಸಜ್ಜಾಗಿದೆ.
ಡಿಸಿ ಸಾಕೆಟ್ ಹಾಗೂ ಯುಎಸ್‌ಬಿ ಚಾರ್ಜರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಸ್ಕೂಟರ್‌ನ ಇಂಧನ ಟ್ಯಾಂಕ್ 21.5 ಲೀಟರ್ ಸಾಮರ್ಥ್ಯ ಹೊಂದಿದೆ. ಮೆಟಾಲಿಕ್ ಮ್ಯಾಟ್ ಫೈಬ್ರಾಯ್ನ ಗ್ರೇ, ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಹಾಗೂ ಪರ್ಲ್ ಮಿರಾಜ್ ವೈಟ್ ಬಣ್ಣಗಳಲ್ಲಿ ಬರ್ಗ್ಮನ್ ಸ್ಟ್ರೀಟ್ ಲಭ್ಯವಿದೆ. ಸುಜುಕಿ ಬರ್ಗ್ಮನ್ ಸ್ಟ್ರೀಟ್ 125 ಸಿಸಿ ಸ್ಕೂಟರ್‌ನ ಬೆಂಗಳೂರು ಎಕ್ಸ್‌ಶೋರೂಮ್ ಬೆಲೆ 70,175 ರೂ. ಎಂದು ಕೆಎನ್‌ವಿಎಸ್ ಸುರೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.