ಮರ ಬಿದ್ದು ಗಾಯಗೊಂಡ ಮಹಿಳೆ ಇನ್ನೂ ಚಿಕಿತ್ಸೆಯಲ್ಲಿ
Team Udayavani, Jul 24, 2018, 12:39 PM IST
ಮಂಗಳೂರು: ಮಂಗಳಾ ದೇವಿಯಲ್ಲಿ ಗೊಂಡಿದ್ದ ಮಾರ್ನಮಿಕಟ್ಟೆಯ ಮಹಿಳೆ ಸುರೇಖಾ ಕೋಟ್ಯಾನ್ (53) ಇನ್ನೂ ಚೇತರಿಸಿಕೊಂಡಿಲ್ಲ. ಅವರು ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ.
ಜೂ. 8ರಂದು ಶ್ರೀ ಮಂಗಳಾದೇವಿ ದೇವಸ್ಥಾನದ ಎದುರಿನ ನಾಗನಕಟ್ಟೆಯ ಬೃಹತ್ ಅಶ್ವತ್ಥ ಮರದ ದೊಡ್ಡ ಗಾತ್ರದ ಗೆಲ್ಲೊಂದು ಬಿರುಗಾಳಿ ಮಳೆಗೆ ದಿಢೀರನೆ ಮುರಿದು ಬಿದ್ದು ನಂದಿಗುಡ್ಡೆಯ ಪ್ರವೀಣ್ ಸುವರ್ಣ(49), ಮಾರ್ನಮಿಕಟ್ಟೆಯ ಸುರೇಖಾ ಕೋಟ್ಯಾನ್ (53) ಮತ್ತು ತೇಜಸ್ವಿನಿ (20) ಹಾಗೂ ಜಪ್ಪು ಕುಡುಪಾಡಿಯ ರಿಕ್ಷಾ ಚಾಲಕ ನವೀನ್ ಮಡಿವಾಳ (45) ಗಾಯಗೊಂಡಿದ್ದರು. ದೇಗುಲದ ಎದುರಿನ ಛಾವಣಿ ಶೀಟ್ ಮತ್ತು ಎರಡು ದ್ವಿಚಕ್ರ ವಾಹನಗಳು ಹಾನಿಗೀಡಾಗಿದ್ದವು.
ಸುರೇಖಾ ಹೊರತುಪಡಿಸಿ ಉಳಿದವರು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಸುರೇಖಾ ಅವರ ತಲೆ, ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಅದು ಗುಣವಾಗಿದೆ. ತಲೆಯ ಗಾಯದಿಂದಲೂ ಗುಣಮುಖರಾಗಿದ್ದಾರೆ. ಆದರೆ ಕುತ್ತಿಗೆಗೆ ಆಗಿರುವ ಪೆಟ್ಟಿನಿಂದಾಗಿ ಇನ್ನೂ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಕುತ್ತಿಗೆಯ ಹಾನಿಯನ್ನು ಸರಿಪಡಿಸಲು ಟ್ರಾಕ್ಷನ್ ಅಳವಡಿಸಲಾಗಿದೆ.
ಟ್ರಾಕ್ಷನ್ ಹಾಕಿ ಮೂರು ವಾರ ಕಳೆದಿದ್ದು, ಅದನ್ನು ಇನ್ನೂ 3ವಾರಗಳಿಗೆ ವಿಸ್ತರಿಸಲಾಗಿದೆ. ಅಷ್ಟು ಸಮಯ ಆಸ್ಪತ್ರೆಯಲ್ಲಿರುವುದು ಅನಿವಾರ್ಯ.
ಕುತ್ತಿಗೆ ಸೂಕ್ಷ್ಮವಾದ ಅಂಗವಾಗಿದ್ದು, ಬೇಗ ಗುಣಮುಖರಾಗಲು ಆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡುವಂತಿಲ್ಲ. ಅವರಿಗೆ ವಯಸ್ಸೂ ಹೆಚ್ಚಾಗಿದೆ. ವೈದ್ಯರು ಕೂಡ ಔಷಧಧ ಮೂಲಕವೇ ಗುಣಪಡಿಸುವ ಇರಾದೆ ಹೊಂದಿದ್ದಾರೆ. ಕುತ್ತಿಗೆಗೆ ಅಳವಡಿಸಿರುವ ಟ್ರಾಕ್ಷನ್ ಅತ್ಯಾಧುನಿಕವಾಗಿದ್ದು, ಅದನ್ನು ಉತ್ತರ ಭಾರತದಿಂದ ತರಿಸಲಾಗಿದೆ. ಕಳೆದ ಮೂರು ವಾರಗಳಿಂದ ಚೇತರಿಕೆ ಕಂಡಿದ್ದು, ಮುಂದಿನ ಮೂರು ವಾರಗಳಲ್ಲಿ ಬಹುತೇಕ ಚೇತರಿಕೆ ಆಗ ಬಲ್ಲರು ಎಂದು ವೈದ್ಯರು ಹೇಳಿದ್ದಾರೆ.
ಸುರೇಖಾ ಅವರ ಪತಿ ರತ್ನಾಕರ ಕೋಟ್ಯಾನ್ ಮಾಜಿ ಸೈನಿಕರಾಗಿದ್ದು, ಅವರು ಮತ್ತು ಇಬ್ಬರು ಪುತ್ರರು ಸೇರಿ ಆರೈಕೆ ಮಾಡುತ್ತಿದ್ದಾರೆ. ಹಿರಿಯ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಉದ್ಯೋಗವನ್ನು ಬಿಟ್ಟು ಮಂಗಳೂರಿಗೆ ಬಂದು ತಾಯಿಯ ಆರೋಗ್ಯ ನೋಡಿ ಕೊಳ್ಳುತ್ತಿದ್ದಾರೆ.
ಚಿಕಿತ್ಸೆಯ ವೆಚ್ಚಕ್ಕಾಗಿ ರತ್ನಾಕರ ಕೋಟ್ಯಾನ್ ತಮ್ಮ ವಿಮಾ ಸೌಲಭ್ಯ ವನ್ನು ಬಳಸಿಕೊಂಡಿದ್ದರೂ ಅದು ಸಾಕಾಗದ ಕಾರಣ ಸರಕಾರದ ನೆರವು ಯಾಚಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಆಸ್ಪತ್ರೆಗೆ ಭೇಟಿ ನೀಡಿ ತನ್ನಿಂದಾಗುವ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.