ಲಂಕೆಗೆ 199 ರನ್ ಜಯ; ಆಫ್ರಿಕಾಕ್ಕೆ ವೈಟ್‌ವಾಶ್
Team Udayavani, Jul 24, 2018, 12:40 PM IST
ಕೊಲಂಬೊ: ದಕ್ಷಿಣ ಆಫ್ರಿಕಾವನ್ನು ದ್ವಿತೀಯ ಟೆಸ್ಟ್‌ನಲ್ಲಿ 199 ರನ್ನುಗಳಿಂದ ಕೆಡವಿದ ಶ್ರೀಲಂಕಾ, 2 ಪಂದ್ಯ ಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.ಗೆಲುವಿಗೆ 490 ರನ್ನುಗಳ ಕಠಿನ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ, ಪಂದ್ಯದ 4ನೇ ದಿನವಾದ ಸೋಮವಾರ 290 ರನ್ನುಗಳಿಗೆ ಆಲೌಟ್ ಆಯಿತು. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಹಾಗೂ 278 ರನ್ನುಗಳ ಭರ್ಜರಿ ಗೆಲುವು ಸಾಧಿಸಿತ್ತು.
ರವಿವಾರದ ಆಟದ ಅಂತ್ಯಕ್ಕೆ ಕೇವಲ 5 ವಿಕೆಟಿಗೆ 139 ರನ್ ಮಾಡಿದ್ದ ದಕ್ಷಿಣ ಆಫ್ರಿಕಾ ಸರಣಿ ಸೋಲಿನತ್ತ ಮುಖ ಮಾಡಿತ್ತು. ವನ್‌ಡೌನ್ ಬ್ಯಾಟ್ಸ್‌ಮನ್ ಥಿಯುನಿಸ್ ಡಿ ಬ್ರುಯಿನ್ ಚೊಚ್ಚಲ ಟೆಸ್ಟ್ ಶತಕ ಬಾರಿಸಿದರೂ ಉಳಿದವರು ಲಂಕಾ ದಾಳಿಯನ್ನು ನಿಭಾಯಿಸಲಾಗದೆ ಲಗುಬಗನೆ ಪೆವಿಲಿಯನ್ ಸೇರಿಕೊಂಡರು. 85ನೇ ಓವರ್ ತನಕ ಹೋರಾಟ ನಡೆಸಿದ ಡಿ ಬ್ರುಯಿನ್ 232 ಎಸೆತಗಳನ್ನೆದುರಿಸಿ 101 ರನ್ ಬಾರಿಸಿದರು (12 ಬೌಂಡರಿ). ಇವರೊಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಟೆಂಬ ಬವುಮ 63 ರನ್ ಹೊಡೆದರು. ಡಿ ಬ್ರುಯಿನ್-ಬವುಮ ಜೋಡಿಯಿಂದ 6ನೇ ವಿಕೆಟಿಗೆ 123 ರನ್ ಒಟ್ಟುಗೂಡಿತು. ಲಂಕಾ ಸ್ಪಿನ್ನರ್ ರಂಗನ ಹೆರಾತ್ 6 ವಿಕೆಟ್ ಉರುಳಿಸಿದರು.
ಶ್ರೀಲಂಕಾದ 338 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 124 ರನ್ನಿಗೆ ಸರ್ವಪತನ ಕಂಡಿತ್ತು. ಅಖೀಲ ಧನಂಜಯ 5 ವಿಕೆಟ್ ಹಾಗೂ ದಿಲುವಾನ್ ಪೆರೆರ 4 ವಿಕೆಟ್ ಹಾರಿಸಿ ಹರಿಣಗಳನ್ನು ಬೇಟೆಯಾಡಿದ್ದರು. ದ್ವಿತೀಯ ಸರದಿಯಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ 5ಕ್ಕೆ 275 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.