ವಾಣಿಜ್ಯ ವಾಹನ ಮಾಲೀಕ-ಚಾಲಕರ ಪ್ರತಿಭಟನೆ
Team Udayavani, Jul 24, 2018, 3:39 PM IST
ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಶುಕ್ರವಾರದಿಂದ (ಜು. 20) ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ವಾಣಿಜ್ಯ ವಾಹನಗಳ ಮಾಲೀಕರು, ಚಾಲಕರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್, ಪೆಟ್ರೋಲ್ ಸೇರ್ಪಡೆ, ದರ ಇಳಿಕೆ, ಏಕರೂಪ ದರ ನಿಗದಿ, ಥರ್ಡ್ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕಡಿತ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊàರ್ಟ್ ಏಜೆಂಟರ ಸಂಘದ ನೇತೃತ್ವದಲ್ಲಿ ಬಸ್, ಮಿನಿಗೂಡ್ಸ್, 3 ಮತ್ತು 4 ಚಕ್ರಗಳ ವಾಹನ, ಟ್ಯಾಕ್ಸಿ ಮಾಲೀಕರು, ಚಾಲಕರು ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿ ದಿನ ಡೀಸೆಲ್ ಬೆಲೆಯಲ್ಲಿ ಏರಿಳಿತದ ಪರಿಣಾಮ ಬಾಡಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಿಎಸ್‌ಟಿಯಡಿ ಡೀಸೆಲ್, ಪೆಟ್ರೋಲ್ ಸೇರಿಸಿ, ಪ್ರತಿ 3 ತಿಂಗಳಿಗೊಮ್ಮೆ ದರ ಪರಿಶೀಲನಾ ಪದ್ಧತಿ ಜಾರಿಗೊಳಿಸಬೇಕು. ಬಾಡಿಗೆ ಇಲ್ಲದೆ ತೀವ್ರ ಸಮಸ್ಯೆ ಅನುಭವಿಸುತ್ತಿರುವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇಶದ 427 ಟೋಲ್‌ಗಳಲ್ಲಿ 67 ಖಾಸಗಿ ಕಂಪನಿಗಳ, 360 ಸರ್ಕಾರದ ಅಧೀನದಲ್ಲಿವೆ. ವರ್ಷಕ್ಕೆ 427 ಟೋಲ್‌ಗಳಿಂದ 17 ಸಾವಿರ ಕೋಟಿ ಶುಲ್ಕ ವಸೂಲಾಗುತ್ತದೆ. ಲಾರಿ ಲಿಕರ ಮತ್ತು ಟ್ರಾನ್ಸ್‌ಪೊರ್ಟ್ ಏಜೆಂಟರ ಸಂಘದ ಮೂಲಕವೇ
ವರ್ಷಕ್ಕೆ 20 ಸಾವಿರ ಕೋಟಿ ಟೋಲ್ ಶುಲ್ಕ ಪಾವತಿ ಮಾಡಲಾಗುತ್ತಿದೆ. ಬಸ್, ಲಾರಿ, ಕಾರು ಎಲ್ಲಾ ವಾಹನಗಳಿಂದ ಟೋಲ್ ಸಂಗ್ರಹ ನಿಲ್ಲಿಸುವ ಮೂಲಕ ಟೋಲ್‌ವುುಕ್ತ ಭಾರತ ಮಾಡಬೇಕು ಎಂದು ಒತ್ತಾಯಿಸಿದರು.
ಥರ್ಡ್ ಪಾರ್ಟಿ ವಿಮಾ ಪಾಲಿಸಿ ಅತಿ ಹೆಚ್ಚಾಗಿದೆ. ವಿಮಾ ಮೊತ್ತದ ಹೆಚ್ಚಳಕ್ಕೆ ಕಾರಣ ಕೇಳಿದರೆ ನಷ್ಟದ ಬಗ್ಗೆ ಹೇಳುತ್ತಾರೆ. ವಿಮಾ ಕ್ಷೇತ್ರವೇ ನಷ್ಟದಲ್ಲಿರುವಾಗ ಹೊಸ ಕಂಪನಿಗಳು ಬರುವುದು ನೋಡಿದರೆ ವಿಮಾ ಕಂಪನಿಗಳ ಲಾಬಿ ಗೊತ್ತಾಗುತ್ತದೆ. ಥರ್ಡ್ ಪಾರ್ಟಿ ವಿಮಾ ಪಾಲಿಸಿ ಕಡಿಮೆ ಮಾಡಬೇಕು. ಲಾರಿಗಳ ಮಾದರಿಯಲ್ಲೇ ಪ್ರವಾಸಿ ಬಸ್‌ಗಳಿಗೂ ರಾಷ್ಟ್ರೀಯ ಪರವಾನಿಗೆ ನೀಡಬೇಕು. ಟಿಡಿಎಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪೂರ್ವಭಾವಿ ಆದಾಯ (ಆದಾಯ ತೆರಿಗೆ ನಿಯಮ-44) ಕಾಯ್ದೆ ಪರಿವರ್ತನೆ, ಈ-ವೇ ಬಿಲ್ ಸಮಸ್ಯೆ ನಿವಾರಣೆ, ಮುಂಬೈನ ಜವಾಹರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್ ಡೆಲಿವಿರಿ ಪದ್ಧತಿ ರದ್ದು ಮತ್ತು ಬಂದರುಗಳಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊರ್ಟ್ ಏಜೆಂಟರ ಸಂಘದ ಗೌರವ ಅಧ್ಯಕ್ಷ ಜಿ. ನಾಗೋಜಿರಾವ್, ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ, ಖಜಾಂಚಿ ಮಲ್ಲಿಕಾರ್ಜುನ್, ಖಜಾಂಚಿ ಭೀಮಪ್ಪ, ಸೋಗಿ ಮಹಾಂತೇಶ್, ಇಮಾಂ, ಸ್ವಾಮಿ, ಸಿದ್ದೇಶ್, ಮಹಾಂತೇಶ್, ಜಯಣ್ಣ, 3 ಮತ್ತು 4 ಚಕ್ರಗಳ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಪಳನಿಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.