ಒಲಿಂಪಿಯನ್ ಈಜು ತಾರೆ ರ್ಯಾನ್ ಲೋರ್ಟಾ ಅಮಾನತು
Team Udayavani, Jul 25, 2018, 6:00 AM IST
ನ್ಯೂಯಾರ್ಕ್: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅಮೆರಿಕದ ಆರು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಅಮೆರಿಕದ ರ್ಯಾನ್ ಲೋರ್ಟಾ ಅವರನ್ನು 14 ತಿಂಗಳು ಅಮಾನತು ಮಾಡಲಾಗಿದೆ. ಯುಎಸ್ ಉದ್ದೀಪನ ನಿಗ್ರಹ ತನಿಖಾ ತಂಡ (ಯುಎಸ್ಎಡಿಎ) ಸೋಮವಾರ ಈ ಕ್ರಮ ತೆಗೆದುಕೊಂಡಿದೆ.
“ರ್ಯಾನ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ಚುಚ್ಚುಮದ್ದು ನೀಡಲಾಗಿದೆ. ಜತೆಗೆ ಚಿಕಿತ್ಸೆಯ ಸಮಯದಲ್ಲಿ 12 ಗಂಟೆಯೊಳಗೆ ಪದೇ ಪದೆ ಚುಚ್ಚು ಮದ್ದು ಹಾಕಿಸಿ ಕೊಂಡಿದ್ದಾರೆ. ಯುಎಸ್ಎಡಿಎಗೆ ಸೂಕ್ತ ಮಾಹಿತಿ ಯನ್ನೂ ನೀಡಿರಲಿಲ್ಲ. ಎಲ್ಲ ನಿಯಮವನ್ನು ರ್ಯಾನ್ ಗಾಳಿಗೆ ತೂರಿದ್ದಾರೆ. ಅವರು ಸೇವಿಸಿರುವುದು ಉದ್ದೀಪನ ಮದ್ದು ಅಲ್ಲದಿದ್ದರೂ ಮದ್ದಿನ ಅಂಶಗಳು ದೇಹದೊಳಕ್ಕೆ ಹೋಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರು ಚಿಕಿತ್ಸೆ ದೃಷ್ಟಿಯಿಂದ ಅರಿವಿಲ್ಲದೆ ಸೇವಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಪ್ಪು ಎಸಗದಿರುವ ಕಾರಣಕ್ಕೆ 33 ವರ್ಷದ ರ್ಯಾನ್ಗೆ 14 ತಿಂಗಳ ನಿಷೇಧ ಶಿಕ್ಷೆಯನ್ನು ನೀಡಿದ್ದೇವೆ’ ಎಂದು ಯುಎಸ್ಎಡಿಎ ತಿಳಿಸಿದೆ.
ಒಲಿಂಪಿಕ್ಸ್ನಲ್ಲಿ ರ್ಯಾನ್ ಲೋರ್ಟಾ 2 ಚಿನ್ನ, 2 ಕಂಚಿನ ಪದಕ ಜಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.