ನಿಕಾ ಹಲಾಲಾ ನೆಪ: ಯುಪಿ ಮಹಿಳೆ ಮೇಲೆ ಪತಿ ಸಹಿತ ನಾಲ್ವರಿಂದ ರೇಪ್
Team Udayavani, Jul 25, 2018, 11:22 AM IST
ರಾಮಪುರ, ಉತ್ತರ ಪ್ರದೇಶ : ನಿಕಾ ಹಲಾಲಾ ನೆಪದಲ್ಲಿ ಗಂಡನ ಸಹಿತ ನಾಲ್ವರು ತನ್ನ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಮಹಿಳೆ ಆರೋಪಿಸಿದ್ದಾರೆ.
ಮಹಿಳೆಗೆ ಆಕೆಯ ಪತಿ ತ್ರಿವಳಿ ತಲಾಕ್ ನೀಡಿದ್ದ. ಅನಂತರ ಆಕೆ ಬೇರೊಬ್ಬ ವ್ಯಕ್ತಿಯನ್ನು ಮೂರು ತಿಂಗಳ ಮಟ್ಟಿಗೆ ಮದುವೆಯಾಗಿದ್ದಳು.
ಹೀಗೆ ಮೂರು ತಿಂಗಳ ಮಟ್ಟಿಗೆ ಮಹಿಳೆಯನ್ನು ಮದುವೆಯಾಗಿದ್ದ ವ್ಯಕ್ತಿಯು ಅನಂತರ ಬೇರೊಬ್ಟಾಕೆಯನ್ನು ಮದುವೆಯಾಗಿದ್ದ.
ಅನಂತರ ನಿಕಾ ಹಲಾಲಾ ನೆಪದಲ್ಲಿ ಮಹಿಳೆಯ ಪತಿ ಸಹಿತಿ ನಾಲ್ವರು ಪುರುಷರು ಆಕೆಯ ಮೇಲೆ ಅತ್ಯಾಚಾರ ಎಸಗಿದರು.
ಇದೀಗ ಮಹಿಳೆಯು ತನ್ನ ಪತಿ ಮತ್ತು ಇತರ ಎಂಟು ಮಂದಿಯನ್ನು ಹೆಸರಿಸಿ, ತನ್ನ ಮೇಲೆ ನಡೆದಿರುವ ಸಾಮೂಹಿಕ ಲೈಂಗಿಕ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ರಾಮಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮುಸ್ಲಿಂ ಪುರುಷರು ಶರಿಯಾ ಕಾನೂನಿನ ಪ್ರಕಾರ ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಅನಂತರ ಆಕೆಯನ್ನು ನಿಕಾ ಹಲಾಲಾ ನೆಪದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುವ ಹಲವಾರು ಪ್ರಕರಣಗಳು ನಡೆದಿದ್ದು ಇದೀಗ ಇದು ತಾಜಾ ಪ್ರಕರಣವಾಗಿದೆ. ಅಂತೆಯೇ ಅನೇಕ ಮುಸ್ಲಿಂ ಮಹಿಳಾ ಹಕ್ಕು ಸಂಘಟನೆಗಳು ತ್ರಿವಳಿ ತಲಾಖ್ ನಿಷೇಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕಾನೂನನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪುರುಷರಿಗೆ ಹೊಸ ಕಾನೂನಿನಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಹೆಸರಿನ 2017ರ ಮಸೂದೆಯನ್ನು ಸಂಸತ್ತು 2017ರ ಡಿಸೆಂಬರ್ 28ರಂದು ಪಾಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.