ಸ್ವಾಮೀಜಿ ನೀಡಿದ ಉಡುಗೊರೆ ದನ ಮರಳಿಸಿದ ಸಂಸದೆ, ಆಜಂ ಖಾನ್ ಪತ್ನಿ
Team Udayavani, Jul 25, 2018, 3:47 PM IST
ರಾಮಪುರ, ಉತ್ತರ ಪ್ರದೇಶ : ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ತನ್ಜಿಮ್ ಫಾತಿಮಾ ಅವರು ತಮಗೆ ಕೆಲ ಸಮಯದ ಹಿಂದೆ ಗೋವರ್ಧನ ಪೀಠದ ಶ್ರೀ ಅಧೋಕ್ಷಜಾನಂದ ಮಹಾರಾಜ್ ಸ್ವಾಮೀಜಿ ಕೊಡುಗೆಯಾಗಿ ನೀಡಿದ್ದ ದನವನ್ನು ಅವರಿಗೇ ಮರಳಿಸಿದ್ದಾರೆ.
ರಾಜಸ್ಥಾನದ ಅಳವಾರ್ ನಲ್ಲಿ ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಉದ್ರಿಕ್ತರ ಗುಂಪು ಚಚ್ಚಿಕೊಂದ ಗುಂಪು ಹಿಂಸೆ ಘಟನೆಯ ಹಿನ್ನೆಲೆಯಲ್ಲಿ, ಇದೇ ಬಗೆಯ ಹಿಂಸೆ ತನ್ನ ವಿರುದ್ಧವೂ ನಡೆದೀತೆಂಬ ಭಯದಲ್ಲಿ ಉಡುಗೊರೆಯಾಗಿ ಪಡೆದಿದ್ದ ಗೋವನ್ನು ಸ್ವಾಮೀಜಿಯವರಿಗೇ ತಾನು ಮರಳಿಸಿರುವುದಾಗಿ ಫಾತಿಮಾ ಹೇಳಿದ್ದಾರೆ. ತಾನು ಅನಿವಾರ್ಯವಾಗಿ ಹೀಗೆ ಮಾಡುತ್ತಿರುವುದು ತನ್ನ ಕುಟುಂಬಕ್ಕೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದಾಕೆ ಮಾಧ್ಯಮಕ್ಕೆ ಹೇಳಿದ್ದಾರೆ.
ಬಿಜೆಪಿ ಆಡಳಿತೆಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾಕ ಸಮುದಾಯದವರು ಜೀವಭಯದಿಂದ ಬದುಕುತ್ತಿದ್ದಾರೆ ಎಂದು ಫಾತಿಮಾ ಹೇಳಿದರು.
ಕೆಲ ಸಮಯದ ಹಿಂದೆ ಫಾತಿಮಾ ಅವರು ಗೋ ರಕ್ಷಣೆ, ಗಂಗಾ ಮಾಲಿನ್ಯ ಮತ್ತು ಭಗವದ್ಗೀತೆಯೇ ಮೊದಲಾದ ವಿಷಯಗಳಿಗೆ ಮಹತ್ವ ನೀಡುವಂತೆ ಜನರನ್ನು ಒತ್ತಾಯಿಸಿದ್ದರು. ಮಥುರಾ ಜಿಲ್ಲೆಯ ಗೋವರ್ಧನದಲ್ಲಿನ ಗೋಶಾಲೆಗೆ ತಾನು 25 ಲಕ್ಷ ರೂ. ವಂತಿಗೆ ನೀಡುವುದಾಗಿಯೂ ಹೇಳಿದ್ದರು.
ಈಗ ಅದೇ ಫಾತಿಮಾ ಅವರು ತಾನು ಇನ್ನೆಂದೂ ಗೋವರ್ಧನದ ಗೋಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಆಕೆಯ ಪತಿ, ಉರಿ ನಾಲಗೆಯ ವಿವಾದಾತ್ಮಕ ಎಸ್ಪಿ ನಾಯಕ ಆಜಂ ಖಾನ್ ಅವರು, “ಮುಸ್ಲಿಮ್ ಸಮುದಾಯದವರು ತಮ್ಮ ಮುಂದಿನ ತಲೆಮಾರಿನವರ ಸುರಕ್ಷೆಗಾಗಿ ಗೋ ಸಂಬಂಧಿ ಉದ್ಯಮದಲ್ಲಿ ತೊಡಗಿಕೊಳ್ಳಬಾರದು; ಹೈನು ಕೃಷಿಯನ್ನೂ ನಡೆಸಬಾರದು’ ಎಂದು ಕರೆ ನೀಡಿದ್ದಾರೆ.
ಈ ನಡುವೆ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2014ರಿಂದ ಈ ವರ್ಷ ಮಾರ್ಚ್ 3ರ ವರೆಗಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ 40 ವಿಭಿನ್ನ ಗುಂಪು ಹಿಂಸೆ ಪ್ರಕರಣಗಳಲ್ಲಿ ಕನಿಷ್ಠ 45 ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್
Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ
ಆಸೀಸ್ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್ ಮಾಡಿಲ್ಲ: ಐಟಿ ಕಾರ್ಯದರ್ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.