ಬಿಲ್ಲವರ ಅಸೋಸಿಯೇಶನ್ ಬೊರಿವಲಿ-ದಹಿಸರ್ : ಆಟಿಡೊಂಜಿ ಕೂಟ
Team Udayavani, Jul 25, 2018, 4:28 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಸಮಿತಿಯ ವಾರ್ಷಿಕ ಆಟಿಡೊಂಜಿ ಕೂಟ ಕಾರ್ಯಕ್ರಮವು ಗೋರೈ-1 ರಲ್ಲಿರುವ ಸ್ಥಳೀಯ ಸಮಿತಿಯ ಕಚೇರಿ ಗುರು ಸನ್ನಿಧಿಯಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಜು. 22 ರಂದು ಅಪರಾಹ್ನ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಇವರು ಗುರುಮೂರ್ತಿ ಸಾನಿಧ್ಯದಲ್ಲಿ ದೀಪ ಬೆಳಗಿಸಿ ಕಲಶದಲ್ಲಿ ಹಿಂಗಾರ ಅರಳಿಸಿ ತುಳುನಾಡ ಪರಂಪರೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಊರಿನ ಪರಂಪರೆಯನ್ನು ನವಿ ರುಗೊಳಿಸುವಂತ ಇಂತಹ ಕಾರ್ಯಕ್ರಮ ಉಪಯುಕ್ತವಾಗಿದೆ. ಇದರಿಂದ ಮುಂದಿನ ಜನಾಂಗವು ಫಲಕಾರಿಯಾಗಲಿದೆ. ನಾವು ನಮ್ಮ ಹಿತ್ತಲಿನ ಕೆಲವೊಂದು ಗಿಡಮೂಲಿಕೆಗಳ ಮಹತ್ವ, ಅದರ ಪ್ರಯೋಜನವನ್ನು ಕಂಡುಕೊಂಡಾಗ ಹಲವಾರು ರೋಗರುಜಿನಗಳು ಗುಣ ಮುಖವಾಗಲಿದ್ದು, ಕೆಲವೊಂದು ಎಲೆಯಲ್ಲಿ ಕೀಟನಾಶಕದ ಗುಣವು ಇದೆ. ಇಂದಿನ ಕಾರ್ಯಕ್ರಮದಲ್ಲಿ ಮಹಿಳೆಯರು ತಯಾರಿಸಿದ ಆಟಿ ತಿಂಗಳ ಅಗರಣೆಗಳೂ ಮುಂದಿನ ಜನಾಂಗಕ್ಕೆ ತಿಳುವಳಿಕೆ ನೀಡುವಂಥದ್ದಾಗಿದೆ. ಸ್ವಂತ ಯಜ್ಞಯಾಗಾದಿಗಳ ಮೂಲಕ ಸ್ವತಂತ್ರವಾಗಿ ದೇವರನ್ನು ಪೂಜಿಸಲು ಅನುವು ಮಾಡಿಕೊಟ್ಟಂತಹ ಶ್ರೀ ನಾರಾಯಣ ಗುರುಗಳ ತತ್ವವನ್ನು ಅಧರಣೀಯವಾಗಿ ಅನುಸರಿಸುತ್ತಿರುವ ಬಿಲ್ಲವರ ಅಸೋಸಿಯೇಶನ್ ಜಯ ಸಿ. ಸುವರ್ಣರ ಮುಂದಾಳತ್ವದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ಸಮಾಜದ ಜನರಿಗೆ ಹಾಗೂ ಇತರರಿಗೂ ನೀಡಿ ಸಹಕಾರಿ ಯಾಗಿದೆ. ಬೊರಿವಲಿ ಸಮಿತಿಯ ಈವೊಂದು ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.
ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಕೋಟ್ಯಾನ್ ಇವರು ಮಾತನಾಡಿ, ಸಂಸಾರದ ಶಿಲ್ಪಿಗಳಾದ ನಾರಿಯರ ಮೇಲೆ ಪ್ರೀತಿ, ಗೌರವ, ಪೂಜ್ಯನೀಯ ಭಾವನೆ ಹೊಂದಿರಬೇಕು. ಅದಕ್ಕೆ ದೇವರ ಅನುಗ್ರಹ ಇದೆ. ಸಂಸ್ಕಾರ ಯುತ ಬದುಕನ್ನು ಮಕ್ಕಳಲ್ಲಿ ಅಳವಡಿಸುವ ಮೂಲಕ ಅವರ ಬದುಕನ್ನು ಸಾರ್ಥಕಗೊಳಿಸಬೇಕು. ಜಾತಿ ಯಾವುದಾದರೇನು, ಒಳ್ಳೆಯ ಮನುಷ್ಯನಾಗು ಎಂಬ ಶ್ರೀ ನಾರಾಯಣ ಗುರುಗಳ ತತ್ವದ ಚಿಂತನೆಯಲ್ಲಿ ಜರಗಿದ ಬೊರಿವಲಿ ಸ್ಥಳೀಯ ಸಮಿತಿಯ ಇಂದಿನ ಕಾರ್ಯಕ್ರಮ ಜಾತ್ಯಾತೀತದ ಸಮೀಕರಣವಾಗಿ ಮೂಡಿಬಂದಿದೆ ಎಂದು ನುಡಿದರು.
ಅಕ್ಷಯದ ಉಪ ಸಂಪಾದಕ ಹರೀಶ್ ಜಿ. ಪೂಜಾರಿ ಇವರು ಮಾತನಾಡಿ, ಆಟಿಡೊಂಜಿ ಕೂಟ ಕಾರ್ಯಕ್ರಮ ಮಕ್ಕಳ ಸಂಸ್ಕೃತಿಯ ಉಳಿವಿಗಾಗಿ ಒಂದು ಉತ್ತಮ ಕಾರ್ಯಕ್ರಮ. ಹಿಂದಿನ ಆಟಿ ತಿಂಗಳ ಕಷ್ಟಕಾರ್ಪಣ್ಯದ ಬದುಕು ಇಂದು ಕಾಣಸಿಗದಿದ್ದರು, ಅದರ ಹಿನ್ನೆಲೆ ತಿಳಿಯುವುದು ಅವಶ್ಯಕ. ರೋಗರುಜಿನಗಳಿಗೆ ಬೇಕಾದ ವಿವಿಧ ದೇಶಿಯ ಔಷಧಿಗಳು, ಆಟಿಕಳಂಜದಂತಹ ಮೂಲಕ ಮನೆಯಲ್ಲಿನ ದಾರಿದ್ರÂ ಓಡಿಸು ವಂತಹ ತಿಳುವಳಿಕೆ ಸಂಸ್ಕೃತಿ ಇಂತಹ ಕಾರ್ಯಕ್ರಮವನ್ನು ಶಿಮಂತೂರು ಚಂದ್ರಹಾಸ ಸುವರ್ಣರು ಯಶಸ್ವಿಯಾಗಿ ಆಯೋ ಜಿಸುತ್ತಿರುವುದು ಅಭಿನಂದನೀಯ ಎಂದರು.
ಲೇಖಕ, ನಾಟಕಕಾರ, ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಟಿ, ಇಂದು ಬೊರಿವಲಿ ಸಮಿತಿಯ 11 ನೇ ವಾರ್ಷಿಕ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಆಚರಣೆಯಲ್ಲಿ ಸಾಹಿತಿ ಪಾಲ್ತಾಡಿ ರಾಮಕೃಷ್ಣರಿಂದ ಆಳವಾಗಿ ಚರ್ಚೆಗೊಳಗಾಗಿ ಶಾಸ್ತೊÅàಕ್ತವಾಗಿ ನಡೆಯುತ್ತಾ ಬಂದಿದೆ. ಆಟಿತಿಂಗಳಲ್ಲಿ ದೊರೆಯುವ ಗೆಡ್ಡೆಗೆಣಸು, ತರಕಾರಿ, ಹಣ್ಣುಗಳನ್ನು ಇಂದು ಉಪಯೋಗಿಸಲಾಗಿದ್ದು, ಕಾರ್ಯಕ್ರಮವನ್ನು ಹೊರನಾಡ ಕನ್ನಡಿಗರಿಗೆ ಪರಿಚಯಿಸಿದ ಹೆಮ್ಮೆ ಬೊರಿವಲಿ ಸಮಿತಿಗೆ ಲಭಿಸುತ್ತದೆ. ಈ ಕಾರ್ಯಕ್ರಮವು ಜಾತಿ, ಮತ, ಬೇಧವಿಲ್ಲದೆ ಗುರುತತ್ವದ ಬಂಧುತ್ವದಲ್ಲಿ ಜರಗುತ್ತಿದೆ ಎಂದು ನುಡಿದರು.
ವಿವಿಧ ರೀತಿಯ ವೈಶಿಷ್ಟÂಪೂರ್ಣ ಭಕ್ಷÂಗಳನ್ನು ತಯಾರಿಸಿ ಪ್ರದರ್ಶಿಸಿದ ಮಹಿಳೆಯರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಕಾರ್ಯಾಧ್ಯಕ್ಷ ಎಂ. ಸುಂದರ ಪೂಜಾರಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮಿತಿಯಲ್ಲಿ ಜರಗುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಮುಂದೆಯೂ ಕೂಡಾ ಸದಸ್ಯರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.
ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್ ಉಪಸ್ಥಿತರಿದ್ದರು. ಕೇಂದ್ರ ಕಚೇರಿಯ ಮಾಜಿ ಕಾರ್ಯ ದರ್ಶಿ ಧರ್ಮಪಾಲ ಜಿ. ಅಂಚನ್, ಪ್ರೇಮನಾಥ್ ಕೋಟ್ಯಾನ್ ಉಪ ಸ್ಥಿತರಿದ್ದರು. ವತ್ಸಲಾ ಪೂಜಾರಿ ಮತ್ತು ಬಳಗದವರು ಪ್ರಾರ್ಥನೆಗೈದರು. ಲಕ್ಷಿ¾à ದೇವಾಡಿಗ, ಮೋಹಿನಿ ಕೋಟ್ಯಾನ್, ವೇದಾ ಶೆಟ್ಟಿ ಪಾಡªನ, ಆಟಿಕಳಂಜ ಹಾಡನ್ನು ಹಾಡಿದರು. ಗೌರವ ಕಾರ್ಯದರ್ಶಿ ಮೋಹನ್ ಬಿ. ಅಮೀನ್ ಸ್ವಾಗತಿಸಿ, ವಂದಿಸಿದರು. ಉಪ ಕಾರ್ಯಾಧ್ಯಕ್ಷ ಕೃಷ್ಣರಾಜ್ ಸುವರ್ಣ ನಿರ್ವಹಿಸಿದರು.
ಗೌರವ ಕೋಶಾಧಿಕಾರಿ ಶ್ರೀಧರ ಬಂಗೇರ, ಜತೆ ಕಾರ್ಯದರ್ಶಿ ಅಶೋಕ್ ಸಾಲ್ಯಾನ್, ಜತೆ ಕೋಶಾಧಿಕಾರಿ ಸುರೇಶ್ ಸನಿಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ದಯಾನಂದ ಪೂಜಾರಿ, ಆರ್. ಎಸ್. ಪೂಜಾರಿ, ಪಿ. ಎ. ಪೂಜಾರಿ, ಭಾರತಿ ಅಮೀನ್, ರಾಘು ಅಮೀನ್, ರಾಘು ಪೂಜಾರಿ, ರತ್ನಾ ಪೂಜಾರಿ, ಚಂದ್ರಶೇಖರ ಬಿ. ಎಸ್., ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಆಮಂತ್ರಿತ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಲಾ ಸದಸ್ಯೆಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.