ಭಾರತದ ಬ್ಯಾಟಿಂಗ್ ಅಭ್ಯಾಸ
Team Udayavani, Jul 26, 2018, 6:00 AM IST
ಚೇಮ್ಸ್ಫೋರ್ಡ್: ಎಸೆಕ್ಸ್ ಕೌಂಟಿ ವಿರುದ್ಧ ಬುಧವಾರ ಆರಂಭಗೊಂಡ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸಿದೆ. 6 ವಿಕೆಟಿಗೆ 310 ರನ್ ಗಳಿಸಿ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ. ಮುರಳಿ ವಿಜಯ್, ನಾಯಕ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಅರ್ಧ ಶತಕ ಬಾರಿಸಿ ಗಮನ ಸೆಳೆದರು. ಆದರೆ ಶಿಖರ್ ಧವನ್ (0) ಹಾಗೂ ಚೇತೇಶ್ವರ್ ಪೂಜಾರ (1) ನಿರಾಸೆ ಮೂಡಿಸಿದರು. ಅಜಿಂಕ್ಯ ರಹಾನೆ 17 ರನ್ ಮಾಡಿ ನಿರ್ಗಮಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ರನ್ ಮಾಡುವಷ್ಟರಲ್ಲಿ ಧವನ್ ಹಾವಗೂ ಪೂಜಾರ ವಿಕೆಟ್ ಕಳೆದುಕೊಂಡಿತು. 44 ರನ್ನಿಗೆ ರಹಾನೆ ವಿಕೆಟ್ ಬಿತ್ತು. ಮುರಳಿ ವಿಜಯ್-ವಿರಾಟ್ ಕೊಹ್ಲಿ 90 ರನ್ ಜತೆಯಾಟ ನಡೆಸಿ ಭಾರತದ ಕುಸಿತಕ್ಕೆ ತಡೆಯಾದರು. ವಿಜಯ್ 53, ಕೊಹ್ಲಿ 68 ರನ್ ಹೊಡೆದರು.
ಈ ಜೋಡಿ ಬೇರ್ಪಟ್ಟ ಬಳಿಕ ಕ್ರೀಸ್ ಇಳಿದ ಕೆ.ಎಲ್. ರಾಹುಲ್ 58 ರನ್ ಸಿಡಿಸಿದರು. ದಿನೇಶ್ ಕಾರ್ತಿಕ್ 81 ಹಾಗೂ ಹಾರ್ದಿಕ್ ಪಾಂಡ್ಯ 23 ರನ್ ಮಾಡಿ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.