ವನಿತಾ ವಿಶ್ವಕಪ್ ಹಾಕಿ: ಭಾರತಕ್ಕೆ ಅಯರ್‌ಲ್ಯಾಂಡ್ ಎದುರಾಳಿ
Team Udayavani, Jul 26, 2018, 6:00 AM IST
ಲಂಡನ್: ಆತಿ ಥೇಯ ಇಂಗ್ಲೆಂಡ್ ಎದುರಿನ ಆರಂಭಿಕ ಪಂದ್ಯದಲ್ಲಿ ಗೆಲುವಿನ ಸುವರ್ಣಾವಕಾಶವನ್ನು ಕಳೆದುಕೊಂಡ ಭಾರತ, ಗುರುವಾರ ವನಿತಾ ವಿಶ್ವಕಪ್ ಹಾಕಿ ಕೂಟದ 2ನೇ ಪಂದ್ಯದಲ್ಲಿ ಅಯರ್‌ಲ್ಯಾಂಡ್ ವಿರುದ್ಧ ಸೆಣಸಲಿದೆ. ನಾಕೌಟ್ ಪ್ರವೇಶಿಸಬೇಕಾದರೆ ರಾಣಿ ರಾಮ್‌ಪಾಲ್ ಪಡೆಗೆ ಗೆಲುವು ಅನಿವಾರ್ಯ.
ರ್‍ಯಾಂಕಿಂಗ್ ಲೆಕ್ಕಾಚಾರದಲ್ಲಿ ಅಯರ್‌ಲ್ಯಾಂಡ್ ಭಾರತಕ್ಕಿಂತ ಕೆಳ ಮಟ್ಟದ ತಂಡ. ಭಾರತ 10ನೇ ಸ್ಥಾನದಲ್ಲಿದ್ದರೆ, ಅಯರ್‌ಲ್ಯಾಂಡ್ 16ನೇ ಸ್ಥಾನದಲ್ಲಿದೆ. ಆದರೆ ಈ ಕಾರಣಕ್ಕಾಗಿ ಐರಿಶ್ ಪಡೆಯನ್ನು ಲಘುವಾಗಿ ಪರಿಗಣಿಸಿದರೆ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಅಯರ್‌ಲ್ಯಾಂಡ್ “ಬಿ’ ವಿಭಾಗದ 4 ತಂಡಗಳಲ್ಲಿ ಗೆಲುವು ಸಾಧಿಸಿದ ಏಕೈಕ ತಂಡವೂ ಹೌದು. ಅಮೆರಿಕವನ್ನು 3-1 ಗೋಲುಗಳಿಂದ ಮಣಿಸಿದ ಅಯರ್‌ಲ್ಯಾಂಡ್ 3 ಅಂಕಗಳೊಂದಿಗೆ ಅದು ಅಗ್ರಸ್ಥಾನ ಅಲಂಕರಿಸಿದೆ. ಅಕಸ್ಮಾತ್ ಭಾತವನ್ನೂ ಮಣಿಸಿದರೆ ಅದು ನಾಕೌಟ್ ಸ್ಥಾನ ವನ್ನು ಕಾದಿರಿಸಲಿದೆ. ಹೀಗಾಗಿ ಭಾರತಕ್ಕೆ ಇದು ಹೆಚ್ಚು ಒತ್ತಡದ ಪಂದ್ಯ.
ಕಳೆದ ವರ್ಷ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಎಚ್‌ಡಬ್ಲ್ಯುಎಲ್ ಕೂಟದ ಸೆಮಿಪೈನಲ್‌ನಲ್ಲಿ ಅಯರ್‌ಲ್ಯಾಂಡ್ ವಿರುದ್ಧ ಭಾರತ 1-2 ಅಂತರದಿಂದ ಎಡವಿತ್ತು. ಭಾರತದ ವನಿತೆಯರೀಗ ಈ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಅಯರ್‌ಲ್ಯಾಂಡ್ ವಿರುದ್ಧ ಜಯ ಸಾಧಿಸಿದರೆ ಭಾರತ “ಬಿ’ ವಿಭಾಗದ ಅಗ್ರಸ್ಥಾನಕ್ಕೆ ನೆಗೆಯಲಿದೆ. ಅಂತಿಮ ಲೀಗ್ ಪಂದ್ಯವನ್ನು ಯುಎಸ್‌ಎ ವಿರುದ್ಧ ಜು. 29ರಂದು ಆಡಲಿದೆ.
ಉತ್ತಮ ಗ್ರೌಂಡ್ ಪ್ಲೇ
ಇಂಗ್ಲೆಂಡ್ ವಿರುದ್ಧ ಭಾರತ “ಗ್ರೌಂಡ್ ಪ್ಲೇ’ಯಲ್ಲಿ ಉತ್ತಮ ಪ್ರದರ್ಶನವನ್ನೇನೋ ನೀಡಿತ್ತು, ಆದರೆ ಪೆನಾಲ್ಟಿ ಕಾರ್ನರ್ ಸಂಪಾದಿಸುವಲ್ಲಿ ವಿಫಲವಾಗಿತ್ತು. ಸವಿತಾ ಅವರ ಗೋಲ್ ಕೀಪಿಂಗ್ ಬಗ್ಗೆ ಎರಡು ಮಾತಿಲ್ಲ. 53ನೇ ನಿಮಿಷದ ತನಕ 1-0 ಮುನ್ನಡೆ ಕಾಯ್ದುಕೊಂಡಿದ್ದ ಭಾರತ, ಬಳಿಕ 1-1 ಡ್ರಾಗೆ ಸಮಾಧಾನ ಪಡಬೇಕಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.