ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ ಯಾದಿಯಲ್ಲಿ ಎಂಬಪೆ
Team Udayavani, Jul 26, 2018, 6:00 AM IST
ಪ್ಯಾರಿಸ್: ಫ್ರಾನ್ಸ್ ವಿಶ್ವಕಪ್ ಫುಟ್‌ಬಾಲ್ ಹೀರೋ ಕೈಲಿಯನ್ ಎಂಬಪೆ ಈ ಬಾರಿಯ “ಫಿಫಾ ವರ್ಷದ ಫುಟ್ಬಾಲಿಗ’ ಪ್ರಶಸ್ತಿ ಯಾದಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅನೇಕ ಮಂದಿ ಸ್ಟಾರ್ ಆಟಗಾರರ ಜತೆಗೆ 19ರ ಹರೆಯದ ಈ ಕಿರಿಯನೂ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ ಮಿಂಚುವ ಮುನ್ನ ಫ್ರಾನ್ಸ್‌ನ ದೇಶಿ ಪಂದ್ಯಾವಳಿಯಾದ “ಪ್ಯಾರಿಸ್ ಸೇಂಟ್ ಜರ್ಮೈನ್ ಟೂರ್ನಿ’ಯಲ್ಲೂ ಎಂಬಪೆ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಶಸ್ತಿ ಸ್ಪರ್ಧೆಯಲ್ಲಿರುವ ಆಟಗಾರರ ಯಾದಿಯನ್ನು ಹತ್ತಕ್ಕೆ ಇಳಿಸಲಾಗಿದ್ದು, ಫ್ರಾನ್ಸ್‌ನ ಮತ್ತಿಬ್ಬರು ಸ್ಟಾರ್ ಆಟಗಾರರಾದ ಅಂಟೋನಿ ಗ್ರೀಝಮನ್ ಮತ್ತು ರಫೆಲ್ ವರೇನ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷದ ಕೋಚ್ ಯಾದಿಯಲ್ಲಿರುವ ಪ್ರಮುಖರೆಂದರೆ ಫ್ರಾನ್ಸ್‌ನ ಡಿಡಿಯರ್ ಡಿಶಾಂಪ್ಸ್ ಮತ್ತು ಇಂಗ್ಲೆಂಡಿನ ಗ್ಯಾರೆತ್ ಸೌತ್‌ಗೆಟ್. 6 ಪುರುಷರು ಹಾಗೂ 4 ವನಿತೆಯರು ವರ್ಷದ ಕೋಚ್ ಸ್ಪರ್ಧೆಯಲ್ಲಿದ್ದಾರೆ.
ಫಿಫಾ ವರ್ಷದ ಫುಟ್ಬಾಲಿಗರ ಯಾದಿ
ಕ್ರಿಸ್ಟಿಯಾನೊ ರೊನಾಲ್ಡೊ, ಕೆವಿನ್ ಡಿ ಬ್ರುಯಿನ್, ಅಂಟೋನಿ ಗ್ರೀಝಮನ್, ಈಡನ್ ಹಜಾರ್ಡ್, ಹ್ಯಾರಿ ಕೇನ್, ಕೈಲಿಯನ್ ಎಂಬಪೆ, ಲಿಯೋನೆಲ್ ಮೆಸ್ಸಿ, ಲೂಕಾ ಮೊಡ್ರಿಕ್, ಮೊಹಮ್ಮದ್ ಸಲಾಹ್, ರಫೆಲ್ ವರೇನ್. ಸೆ. 24ರಂದು ಲಂಡನ್‌ನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.