ಕೋಟೇಶ್ವರ: ಅಂಡರ್‌ಪಾಸ್ ಜಂಕ್ಷನ್ ಆ್ಯಕ್ಸಿಡೆಂಟ್ ಝೋನ್
Team Udayavani, Jul 26, 2018, 6:25 AM IST
ಕೋಟೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರ ಬೆ„ಪಾಸ್ ಜಂಕ್ಷನ್ ಬಳಿ ನಿರ್ಮಿಸಲಾಗಿರುವ ಎಂಬೇಕ್‌ವೆುಂಟ್‌ನ “ಅಂಡರ್‌ಪಾಸ್’ನ ಸಂಪರ್ಕ ರಸ್ತೆಯು ಅಪಾಯಕಾರಿಯಾಗಿದ್ದು, ಟ್ರಾಫಿಕ್ ಪೊಲೀಸರು ಇದಕ್ಕೊಂದು ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇದೆ.
ಇಲ್ಲಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿನ ಸರ್ವಿಸ್ ರಸ್ತೆಯು ಬೆ„ಪಾಸ್ ಜಂಕ್ಷನ್‌ನಲ್ಲಿ ಸಂದಿಸುತ್ತದೆ. ಈ ಒಂದು ಜಂಕ್ಷನ್ ಸದಾ ವಾಹನಗಳ ಒತ್ತಡದಿಂದ ಕೂಡಿದ್ದು ಹಾಲಾಡಿ-ಕೋಟೇಶ್ವರ ಪೇಟೆ-ಕುಂಭಾಶಿ- ಕುಂದಾಪುರ ಸಹಿತ ಸಾಗುವ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ
ಇಲ್ಲಿ ಸಾಗುವ ವಾಹನಗಳಿಗೆ ಯಾವುದೇ ರೀತಿಯ ಟ್ರಾಫಿಕ್ ಕಾನೂನು ಅನ್ವಯವಾಗುವುದಿಲ್ಲವೇ ಅನ್ನುವಷ್ಟರ ಮಟ್ಟಿಗೆ ವಿವಿಧ ಕಡೆಗಳಿಂದ ಆಗಮಿಸುವ ಲಘು ಹಾಗೂ ಘನ ವಾಹನಗಳು ಅಮಿತ ವೇಗದಿಂದ ಮನಬಂದಂತೆ ಸಾಗುತ್ತಿರುವುದು ಭಯದ ವಾತಾ ವರಣವನ್ನು ಸೃಷ್ಟಿಸಿದೆ. ಸರಕಾರಿ ಪದವಿ ಕಾಲೇಜು ಸಹಿತ ಕಟ್ಕರೆಯಲ್ಲಿನ ಕೈಗಾರಿಕೋದ್ಯಮಕ್ಕೆ ಸಾಗುವ ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ದ್ವಿಚಕ್ರ ವಾಹನಗಳು ಕರ್ಕಶ ಶಬ್ದದೊಡನೆ ಸಾಗುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ರಸ್ತೆ ಉಬ್ಬು ನಿರ್ಮಾಣ
ಬೈಪಾಸ್ ಜಂಕ್ಷನ್‌ನ ಅಂಡರ್‌ಪಾಸ್‌ನಲ್ಲಿ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿರುವ ವಾಹನಗಳ ಒತ್ತಡದಿಂದಾಗಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ಲೋಕೋಪಯೋಗಿ ಅಧಿಕಾರಿಗಳೊಡನೆ ಚರ್ಚಿಸಿ ಹಾಲಾಡಿ ರಸ್ತೆಯಲ್ಲಿ ಅಗತ್ಯ ಬಿದ್ದಲ್ಲಿ ರಸ್ತೆ ಉಬ್ಬು ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಆ ಭಾಗದಲ್ಲಿ ಅತೀ ವೇಗದಿಂದ ಸಾಗುವ ವಾಹನಗಳನ್ನು ಗುರುತಿಸಿ ದಂಡಿಸಲಾಗುವುದು.
– ಕುಂದಾಪುರ ಟ್ರಾಫಿಕ್ ಪೊಲೀಸ್
ಪಾರ್ಕಿಂಗ್ ಕಡಿವಾಣ ಅಗತ್ಯ
ಬೈಪಾಸ್ ಜಂಕ್ಷನ್‌ಬಳಿ ಮನ ಬಂದಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವುದರೊಡನೆ ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆಗೊಳಿ ಸುತ್ತಿರುವುದು ನಿತ್ಯ ಪ್ರಯಾಣಿಕರಿಗೆ ಸುಗಮ ವಾಹನ ಸಂಚಾರಕ್ಕೆ ತಡೆವೊಡ್ಡಿದಂತಾಗುತ್ತಿದೆ. ಒಟ್ಟಾರೆ ಕೋಟೇಶ್ವರ ಬೈಪಾಸ್ ಜಂಕ್ಷನ್ ವಾಹನಗಳ ಒತ್ತಡದಿಂದ ಆಕ್ಸಿಡೆಂಟ್ ಝೋನ್ ಆಗಿ ಕಂಡುಬಂದಿದ್ದು ಇಲಾಖೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಇದೆ.
-ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.