ರಾಮಕುಂಜದ ಅಮೈ ಕೆರೆಗೆ ಭದ್ರಾವತಿ ಮೀನು
Team Udayavani, Jul 26, 2018, 2:35 AM IST
ಪುತ್ತೂರು: ಹೊಸ ಆದಾಯ ಮೂಲದ ಹುಡುಕಾಟದಲ್ಲಿ ತೊಡಗಿರುವ ಗ್ರಾ.ಪಂ.ಗಳು ಇದೀಗ ಕೃಷಿಯ ಕಡೆಗೂ ಚಿತ್ತ ಹರಿಸಿವೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ರಾಮಕುಂಜ ಗ್ರಾ.ಪಂ. ಹೊಸ ಬೆಳವಣಿಗೆಗೆ ನಾಂದಿ ಹಾಡಿದ್ದು, ಕೆರೆಯಲ್ಲಿ ಮೀನು ಕೃಷಿಗೆ ಮುಂದಾಗಿದೆ. 1.18 ಎಕರೆ ಜಾಗದಲ್ಲಿ ಸುಮಾರು ಮುಕ್ಕಾಲು ಎಕರೆಯಷ್ಟು ವಿಸ್ತೀರ್ಣದಲ್ಲಿ ಅಮೈ ಕೆರೆ ಹರಡಿಕೊಂಡಿದೆ. ಕೆಲ ವರ್ಷಗಳ ಹಿಂದಷ್ಟೇ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ನರೇಗಾ ಯೋಜನೆಯ 30 ಲಕ್ಷ ರೂ., SKDRDPಯ 5 ಲಕ್ಷ ರೂ. ಸಹಾಯಧನ, ಶಾಸಕರ 20 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಲಕ್ಷಾಂತರ ವೆಚ್ಚ ಮಾಡಿರುವ ಕೆರೆಯಿಂದ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಏರಿಕೆಯಾಗಿದೆ. ಇತರರಿಗೆ ಮಾದರಿಯಾಗುವ ಜತೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎನ್ನುವುದು ಗ್ರಾ.ಪಂ. ಲೆಕ್ಕಾಚಾರ.
ಬೇಸಗೆಯಲ್ಲೂ ಬರವಿಲ್ಲ
ಕೆರೆಯಲ್ಲಿ ಆಗಲೇ ಒಂದಷ್ಟು ಮೀನುಗಳಿವೆ. ಇವುಗಳನ್ನು ಖಾಲಿ ಮಾಡುವ ಕೆಲಸ ನಡೆಯುತ್ತಿದೆ. ಅನಂತರ ಸಾಮಾನ್ಯ ಗೆಂಡೆ ಮೀನುಗಳನ್ನು ಬಿಡಲಾಗುವುದು. 7 ಸಾವಿರದಷ್ಟು ಮೀನುಗಳನ್ನು ಬಿಟ್ಟರೆ, ಬೇಸಿಗೆಯಲ್ಲಿ ಏನು ಮಾಡುವುದು ಎನ್ನುವ ಭಯ ಬೇಡ. ಏಕೆಂದರೆ, ಈ ಕೆರೆಯಲ್ಲಿ ಬೇಸಗೆ ಕಾಲದಲ್ಲೂ ಸುಮಾರು 20 ಅಡಿಯಷ್ಟು ನೀರು ಸಂಗ್ರಹವಿರುತ್ತದೆ. ವರ್ಷದ ಯಾವುದೇ ಋತುವಿನಲ್ಲೂ ಈ ಕೆರೆ ಬತ್ತುವುದಿಲ್ಲ.
ಆದಾಯದ ಲೆಕ್ಕಾಚಾರ ಹೀಗಿದೆ
ಮೀನು ಕೃಷಿಯಿಂದ ಸುಮಾರು 5 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ಗೆಂಡೆ ಮೀನು ವರ್ಷಕ್ಕೆ 1ರಿಂದ 1.5 ಕೆ.ಜಿ.ಯಷ್ಟು ತೂಗು ತ್ತದೆ. ಈ ಬಾರಿ 7 ಸಾವಿರ ಮೀನುಗಳನ್ನು ಕೆರೆಗೆ ಬಿಡಲಾಗುವುದು. ಸಾವಿರ ಮೀನಿಗೆ 300 ರೂ.ಗಳಂತೆ 2,100 ರೂ.ಗಳನ್ನು ರಾಮಕುಂಜ ಗ್ರಾ.ಪಂ. ಪಾವತಿಸುತ್ತದೆ. ಬಳಿಕ ಇದರ ಆಹಾರಕ್ಕೆ ಒಂದಷ್ಟು ಖರ್ಚು ಇದೆ. ಅದು ಬಿಟ್ಟರೆ ಬೇರಾವ ಖರ್ಚೂ ಇಲ್ಲ. ಟೆಂಡರ್ ಕರೆಯುವುದೇ ಅಥವಾ ಗ್ರಾ.ಪಂ. ನೇರವಾಗಿ ನಿರ್ವಹಣೆ ಮಾಡುವುದೇ ಎನ್ನುವ ತೀರ್ಮಾನಕ್ಕೆ ಬರಲಾಗಿಲ್ಲ.
ಸಿಹಿನೀರಿನ ಮೀನು
ಹೆಚ್ಚಿನವರು ಸಮುದ್ರದ ಮೀನುಗಳನ್ನು ಆಹಾರವಾಗಿ ಬಳಕೆ ಮಾಡುತ್ತಾರೆ. ಮಳೆಗಾಲ ಸಂದರ್ಭ ಸಿಹಿ ನೀರಿನ ಮೀನುಗಳ ಬಳಕೆಯೂ ಇದೆ. ಕೆರೆಗಳು ಕ್ಷೀಣಿಸುತ್ತಿದ್ದಂತೆ ಸಿಹಿನೀರಿನ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು, ಸಮುದ್ರದ ಮೀನುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಹಿನೀರಿನಲ್ಲಿ ಮೀನು ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
7 ಸಾವಿರ ಮೀನು
ಪುತ್ತೂರು ತಾ.ಪಂ.ನ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಅವರು ಈ ಯೋಜನೆಯ ರೂವಾರಿ. ಮಂಗಳೂರಿನ ಫಿಶರೀಶ್ ಕಾಲೇಜನ್ನು ಸಂಪರ್ಕಿಸಿ, ಮೀನು ಕೃಷಿ ಬಗ್ಗೆ ಮಾಹಿತಿ ಪಡೆದರು. ಅವರ ಸಹಕಾರ ಪಡೆದುಕೊಂಡು, ಶಿವಮೊಗ್ಗದ ಭದ್ರಾವತಿ ಮೀನು ಮರಿ ಉತ್ಪಾದನ ಕೇಂದ್ರವನ್ನು ಸಂಪರ್ಕಿಸಿದರು. ಸುಮಾರು ಮುಕ್ಕಾಲು ಎಕರೆ ವಿಸ್ತೀರ್ಣದ ಕೆರೆಗೆ 7 ಸಾವಿರದಷ್ಟು ಸಾಮಾನ್ಯ ಗೆಂಡೆ ಮೀನುಗಳನ್ನು ಹಾಕಬಹುದು ಎನ್ನುವ ಲೆಕ್ಕಾಚಾರವನ್ನೂ ಹಾಕಲಾಯಿತು. ಗ್ರಾ.ಪಂ. ಬಳಿ ಚರ್ಚಿಸಿ ಈ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮುಂದಿನ 15 ದಿನಗಳೊಳಗೆ ಕೆರೆಗೆ ಮೀನುಗಳನ್ನು ಬೀಡುವುದೆಂದು ನಿರ್ಧರಿಸಲಾಗಿದೆ.
ರಾಜ್ಯಕ್ಕೆ ಮಾದರಿಯಾಗಲಿದೆ
ಗ್ರಾ.ಪಂ.ನ ಉತ್ಸಾಹದಿಂದ ಅಮೈ ಕೆರೆಯಲ್ಲಿ ಮೀನು ಕೃಷಿ ಮಾಡಲು ಮುಂದಾಗಿದ್ದೇವೆ. ಗ್ರಾಮಸ್ಥರು ಸಹಕಾರ ನೀಡಿದ್ದು, ರಾಜ್ಯಕ್ಕೆ ಮಾದರಿಯಾಗುವ ಕೆರೆ ನಿರ್ಮಾ ಣವಾಗಲಿದೆ. ಇದೇ ಮಾದರಿಯಲ್ಲಿ ಗೋಳಿತ್ತೂಟ್ಟಿನಲ್ಲೂ ಇನ್ನೊಂದು ಕೆರೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ಕೆರೆಯಲ್ಲಿ ಮೀನು ಕೃಷಿ ಮಾಡಿದರೆ ವರಮಾನಕ್ಕೆ ದಾರಿ ಆಗುತ್ತದೆ. 15 ದಿನದಲ್ಲಿ ಸಾಮಾನ್ಯ ಗೆಂಡೆ ಮೀನುಗಳನ್ನು ಕೆರೆಗೆ ಬಿಡುತ್ತೇವೆ.
– ನವೀನ್ ಭಂಡಾರಿ, ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕ
— ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.