ಶತಕದ ತವಕದಲ್ಲಿ ಕೋಸ್ಟಲ್‌ವುಡ್‌; ಇನ್ನು ಆರು ಸಿನೆಮಾಕ್ಕೆ ಸೆಂಚುರಿ! 

Team Udayavani, Jul 26, 2018, 12:10 PM IST

26-july-8.jpg

ತುಳು ಚಿತ್ರರಂಗ ಶತಕದ ಹೊಸ್ತಿಲಲ್ಲಿದೆ . 94ನೇ ಸಿನೆಮಾ ‘ದಗಲ್‌ಬಾಜಿಲು’ ಮೊನ್ನೆ ತಾನೆ ರಿಲೀಸ್‌ ಆಗಿದ್ದು, ಇನ್ನು 6 ಸಿನೆಮಾ ಬಂದರೆ ಅಲ್ಲಿಗೆ ಕೋಸ್ಟಲ್‌ವುಡ್‌ ಸೆಂಚುರಿ ಬಾರಿಸುವುದು ಖಚಿತ. ಪ್ರಾದೇಶಿಕ ಚೌಕಟ್ಟಿನಲ್ಲಿಯೇ ಇದ್ದುಕೊಂಡು ಸೀಮಿತ ಪ್ರೇಕ್ಷಕರ ಮನ ಗೆಲ್ಲುವಂತೆ ಮಾಡಿರುವ ತುಳು ಸಿನೆಮಾಗಳು ಇಷ್ಟು ರೇಂಜಿನಲ್ಲಿ ಸದ್ದು ಮಾಡುವುದು ಆಶ್ಚರ್ಯ ಹಾಗೂ ಕುತೂಹಲ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಧ್ಯಭಾಗಕ್ಕೆ ತುಳು ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಸಂಭ್ರಮವೇನೂ ಇರಲಿಲ್ಲ. ಯಾಕೆಂದರೆ, ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಡಿಮೆ. ಆದರೆ, ಬಿಡುಗಡೆಯ ತವಕದಲ್ಲಿ ಹಲವಾರು ಸಿನೆಮಾ ಇರುವುದರಿಂದ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿದ್ದಂತು ಸತ್ಯ. ಫೆಬ್ರವರಿಯಲ್ಲಿ ‘ಬಲೇ ಪುದರ್‌ ದೀಕ ಈ ಪ್ರೀತಿಗ್‌’ ಸಿನೆಮಾ, ಮಾರ್ಚ್‌ನಲ್ಲಿ ‘ಅಪ್ಪೆ ಟೀಚರ್‌’ ಮತ್ತು ‘ತೊಟ್ಟಿಲು’ ರಿಲೀಸ್‌ ಆಗಿತ್ತು. ಇದರಲ್ಲಿ ‘ಅಪ್ಪೆ ಟೀಚರ್‌’ 100 ದಿನ ಪೂರೈಸಿ ಗಮನ ಸೆಳೆಯಿತು. ವಿಶೇಷ ಎಂಬಂತೆ ಮಹಿಳಾ ಸಂಘಟನೆಗಳು ಈ ಸಿನೆಮಾದ ವಿರುದ್ಧ ಸ್ವರ ಎತ್ತಿದರು. ಬಳಿಕ ‘ಪೆಟ್‌ ಕಮ್ಮಿ’, ‘ಅಮ್ಮೆರ್‌ ಪೊಲೀಸಾ’, ‘ಪಡ್ಡಾಯಿ’ ಬಂದು ಈಗ ‘ದಗಲ್ಬಾಜಿ’ಯಲ್ಲಿ ನಿಂತಿದೆ.

ಇದಿಷ್ಟು ಈ ವರ್ಷದ ಇಲ್ಲಿಯವರೆಗಿನ ಸಿನೆಮಾ ಕಥೆಯಾದರೆ, ಮುಂದೆ ಸಾಲು ಸಾಲು ಸಿನೆಮಾಗಳು ತೆರೆಗೆ ಬರುವ ಕಾತುರದಲ್ಲಿದೆ ಎಂಬುದು ಇನ್ನೊಂದು ಇಂಟ್ರೆಸ್ಟಿಂಗ್‌ ಸಂಗತಿ. ಪಮ್ಮಣ್ಣೆ ದಿ ಗ್ರೇಟ್‌, ಪತ್ತೀಸ್‌ ಗ್ಯಾಂಗ್‌, ಏರಾ ಉಲ್ಲೆರ್‌ಗೆ, ಮೈ ನೇಮ್‌ ಈಸ್‌ ಅಣ್ಣಪ್ಪೆ, ಕಟಪಾಡಿ ಕಟ್ಟಪ್ಪೆ, ಉಮಿಲ್‌, ಕೋರಿ ರೊಟ್ಟಿ, ಗೋಲ್‌ ಮಾಲ್‌, ಕರ್ಣೆ, ಎಕ್ಕೂರು, ಜುಗಾರಿ, ಗಂಟ್‌ ಕಲ್ವೆರ್‌ಸಹಿತ ಹಲವು ಸಿನೆಮಾಗಳು ಮುಂದಿನ ತಿಂಗಳಿನಿಂದ ತೆರೆಕಾಣಲು ತುದಿಗಾಲಲ್ಲಿ ನಿಂತಿವೆ.

ಯಾವ ಸಿನೆಮಾ ಯಾವ ಕಾಲದಲ್ಲಿ ಬರಲಿದೆ ಎಂಬುದು ಈಗ ಹೇಳಲು ಆಗದು. ಯಾಕೆಂದರೆ ಒಂದೇ ದಿನ ಎರಡು ಸಿನೆಮಾಗಳು ರಿಲೀಸ್‌ ಆದ ಉದಾಹರಣೆ ಮಂಗಳೂರಿನಲ್ಲಿ ಇರುವುದರಿಂದ ಯಾವ ಸಿನೆಮಾ?ಯಾವಾಗ ರಿಲೀಸ್‌? ಎಂಬುದು ಕುತೂಹಲ ಮೂಡಿಸಿದೆ. ಅಂದಹಾಗೆ, 1971ರಲ್ಲಿ ‘ಎನ್ನ ತಂಗಡಿ’ ಪ್ರಥಮ ತುಳು ಸಿನೆಮಾವು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತ್ತು.

2014ರಲ್ಲಿ ಅದೇ ಜ್ಯೋತಿ ಚಿತ್ರಮಂದಿರದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ಬಿಡುಗಡೆಗೊಂಡು 50ನೇ ತುಳು ಸಿನೆಮಾವಾಗಿ ದಾಖಲೆ ಮಾಡಿತ್ತು. ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನೆಮಾಗಳ ಕೊಡುಗೆ ನೀಡಿತು. ಅನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾಗಳು ಮಾತ್ರ ಬಂದಿತ್ತು. ಬಳಿಕ 5 ವರ್ಷ ಸ್ಥಗಿತಗೊಂಡ ತುಳುಚಿತ್ರರಂಗ ಮತ್ತೆ 2006ರಲ್ಲಿ ಚೇತರಿಕೆಗೊಂಡು, 2013ರವರೆಗೆ 14 ಸಿನೆಮಾಗಳು ತೆರೆಕಂಡವು. 75ರ ಸಿನೆಮಾವಾಗಿ ‘ಪನೊಡಾ ಬೊಡ್ಚಾ’ ದಾಖಲಾಯಿತು.

ವಿಶೇಷವೆಂದರೆ, 50 ಸಿನೆಮಾ ಆಗಬೇಕಾದರೆ 44 ವರ್ಷ ಬೇಕಾಯಿತು. ಆದರೆ, 2- 3 ವರ್ಷಗಳ ಒಳಗೆ ಸುಮಾರು 30ರಷ್ಟು ಸಿನೆಮಾ ಬರುವಂತಾಯಿತು.!

ಬರೋಬ್ಬರಿ 46ನೇ ವರ್ಷದಲ್ಲಿ ತುಳು ಸಿನೆಮಾವಿದೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ಮೂಲಕ ತುಳು ಚಿತ್ರ ನಡಿಗೆ ಮುಂದೆ ಸಾಗುತ್ತಿದೆ. 25- ಬೆಳ್ಳಿಹಬ್ಬ, 40- ಮಾಣಿಕ್ಯ, 50- ಸುವರ್ಣ, 60- ವಜ್ರ ಸಂಭ್ರಮ, 75- ಅಮೃತ ಮಹೋತ್ಸವವನ್ನು ದಾಟಿ ತುಳು ಸಿನೆಮಾಗಳು ಮುಂದೆ ಸಾಗಿದ್ದು, ಈಗ 94ನೇ ಸಿನೆಮಾ ‘ದಗಲ್ಬಾಜಿಲು’ ಪ್ರದರ್ಶನದಲ್ಲಿದೆ. 

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.