ಪುಣೆ ತುಳುಕೂಟದ ಯುವ ವಿಭಾಗ: ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ


Team Udayavani, Jul 26, 2018, 12:25 PM IST

2507mum01.jpg

ಪುಣೆ: ಪುಣೆ ತುಳುಕೂಟದ ಯುವ ವಿಭಾಗ ಆರಂಭಗೊಂಡು ನಿರಂತರವಾಗಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಂಘಿಕ ನೆಲೆ ಯಲ್ಲಿ ಯುವ ಸಮೂಹವನ್ನು  ಬೆಸೆಯುವ ಕಾರ್ಯವನ್ನು  ಮಾಡುತ್ತಿದ್ದು ಮುಖ್ಯವಾಗಿ ಇಂದು  ಮಕ್ಕಳಿಗೆ ತಮ್ಮ ಆಸಕ್ತಿಯ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು  ಸ್ತುತ್ಯರ್ಹವಾಗಿದೆ ಎಂದು ಪುಣೆ ತುಳುಕೂಟದ ಅಧ್ಯಕ್ಷರಾದ ತಾರಾನಾಥ ಕೆ. ರೈ ಮೇಗಿನಗುತ್ತು ನುಡಿದರು.

ಅವರು ಜು. 22 ರಂದು ನಗರದ ಮೆಜೆಸ್ಟಿಕ್‌ ಸಭಾಂಗಣ ವಾರ್ಜೆ ಇಲ್ಲಿ ನಡೆದ ಪುಣೆ ತುಳುಕೂಟದ ಯುವ ವಿಭಾಗ ಮಕ್ಕಳಿಗೆ  ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯ ಪ್ರಮಾಣ ಪತ್ರಗಳನ್ನು ವಿತರಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿ,  ಯಾವುದೇ ಚಟುವಟಿಕೆಗಳಾಗಲಿ, ಸ್ಪರ್ಧೆಗಳಾಗಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಇದರಿಂದಾಗಿ ನಮ್ಮ ಜೀವನಕ್ಕೆ ಪ್ರೇರಣೆ ಸಿಗುವುದರಲ್ಲಿ ಸಂಶಯವಿಲ್ಲ. ಮುಂದೆ ದೊಡ್ಡ ದೊಡ್ಡ ಕಲಾವಿದರಾದರೂ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ ಆನಂದ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ. ಯುವ ವಿಭಾಗದಿಂದ  ಇನ್ನೂ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರಲಿ ಸಂಘದ ವತಿಯಿಂದ ಸಹಕಾರ ನೀಡಲಾಗುವುದು ಎಂದರು.

ಹಿರಿಯ ಯಕ್ಷ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಮಾತನಾಡಿ, ನಾವು ಇಂದು ಇಷ್ಟು ದೊಡ್ಡವರಾಗಿ ಬೆಳೆದರೂ ನಮ್ಮ ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿದೆ. ಶಾಲಾ ದಿನಗಳಲ್ಲಿ ನಮಗೆ ಸಿಕ್ಕಿದ ಇಂತಹ ಅವಕಾಶಗಳಲ್ಲಿ ಭಾಗವಹಿ ಸುತ್ತಾ ಭವಿಷ್ಯದಲ್ಲಿ ಉನ್ನತ ಯಶಸ್ಸನ್ನು ಗಳಿಸುವಂತವರಾಗಿ. ಪುಣೆ ತುಳುಕೂಟದ ಯುವ ವಿಭಾಗದ ಕಾರ್ಯ ಅಭಿನಂದನೀಯ ಎಂದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ ಮಾತನಾಡಿ, ನಾವು ಸತತವಾಗಿ ದ್ವಿತೀಯ ವರ್ಷ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ.  ಮಕ್ಕಳ ಅಭಿರುಚಿಯನ್ನು ಪ್ರೋತ್ಸಾಹಿ ಸುವ ಉದ್ದೇಶ ನಮ್ಮದಾಗಿದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಆನಂದಿಸುತ್ತಿ¨ªಾರೆ. ನಮ್ಮ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಮ್ಮೆಲ್ಲ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸುವುದರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋ ಜಿಸಲು ಸಾಧ್ಯವಾಗುತ್ತದೆ. ಇಂತಹ ಅವ ಕಾಶಗ  ಒದಗಿಸಿರುವುದಕ್ಕೆ ಅವ ರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಸಂಘದ ಗೌರವಾಧ್ಯಕ್ಷ  ಮಿಯ್ನಾರ್‌ ರಾಜ್‌ ಕುಮಾರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕÇÉಾಡಿ, ಮಹಿಳಾ ವಿಭಾಗದ ಉಮಾ ಶೆಟ್ಟಿ ಇವರುಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭ ಭಾಗವಹಿಸಿದ ಎÇÉಾ ಮಕ್ಕಳಿಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು. ನೂರಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ  ಸಂಘದ ಪದಾಧಿಕಾರಿಗಳಾದ  ದಿವಾಕರ ಶೆಟ್ಟಿ ಮಾಣಿಬೆಟ್ಟು, ಯಶವಂತ್‌ ಶೆಟ್ಟಿ ತಾಮಾರು, ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಸುಜಾತಾ ಡಿ. ಶೆಟ್ಟಿ, ಸರಿತಾ ಟಿ. ಶೆಟ್ಟಿ, ಸರಿತಾ ವೈ. ಶೆಟ್ಟಿ, ರಂಜಿತಾ ಶೆಟ್ಟಿ, ಶಕುಂತಲಾ ಆರ್‌. ಶೆಟ್ಟಿ, ನಯನಾ ಸಿ. ಶೆಟ್ಟಿ, ರಮಾ ಶೆಟ್ಟಿ,  ಉಮಾ ಶೆಟ್ಟಿ ಹಾಗೂ ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.  ಯುವ ವಿಭಾಗದ ಅಭಿಜಿತ್‌ ಶೆಟ್ಟಿ, ಸುಮಿತ್‌ ಶೆಟ್ಟಿ, ಪ್ರತೀಕ್‌ ಶೆಟ್ಟಿ, ಆದರ್ಶ್‌ ಶೆಟ್ಟಿ, ಪ್ರೀತಮ್‌ ಶೆಟ್ಟಿ, ರತನ್‌ ಸಾಲ್ಯಾನ್‌, ರಾಜೇಂದ್ರ ಕೋಟ್ಯಾನ್‌, ಅಪೂರ್ವಾ ಶೆಟ್ಟಿ, ಮಧುರಾ ನಾಯ್ಕ…, ಪ್ರಾಣೇಶ್‌ ಶೆಟ್ಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಶ್ರಮಿಸಿದರು. 

ಚಿತ್ರ-ವರದಿ:ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.