ವಾಸುದೇವ ಸಾಮಗರಿಗೆ ಯಕ್ಷ ಸಂಗಮದ ಸಮ್ಮಾನ 


Team Udayavani, Jul 27, 2018, 6:00 AM IST

8.jpg

ಮೂಡಬಿದಿರೆಯ ಯಕ್ಷ ಸಂಗಮದ ವಾರ್ಷಿ ಕೋತ್ಸವದಲ್ಲಿ ಈ ವರ್ಷದ ಸಮ್ಮಾನವನ್ನು ತೆಂಕು – ಬಡಗು ತಿಟ್ಟಿನ ಪ್ರಸಿದ್ಧ ಅರ್ಥಧಾರಿ ಹಾಗೂ ವೇಷಧಾರಿ ಮಲ್ಪೆ ವಾಸುದೇವ ಸಾಮಗರಿಗೆ ನೀಡಲಾಗುವುದು.ಜು.28ರಂದು ಕಾರ್ಯಕ್ರಮ ಜರಗಲಿದೆ. 

 ಸಾಮಗ ಪರಂಪರೆಯಲ್ಲಿ ಬೆಳೆದು ಬಂದ ಅಪ್ರತಿಮ ಅರ್ಥಧಾರಿ ವಾಸುದೇವ ಸಾಮಗರು . ಆದಿ ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ, ಹೆಜಮಾಡಿಯಲ್ಲಿ ಪಿ.ಯು.ಸಿ. ಪೂರೈಸಿದ ಸಾಮಗರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು . ಕಾಲೇಜ್‌ ವಿದ್ಯಾರ್ಥಿ ಜೀವನದಲ್ಲೇ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು.ಸಾಮಗರ ಅರ್ಥಗಾರಿಕೆಯ ಆಳವನ್ನು ಗಮನಿಸಿದ ಯಕ್ಷಗಾನ ಪೋಷಕ ಹಾಗೂ ಸಂಘಟಕರಾದ ಕೋಟ ಶ್ರೀಧರ ಹಂದೆಯವರು ಸಾಮಗರನ್ನು ದೊಡ್ಡ ಕೂಟಕ್ಕೆ ಪ್ರವೇಶ ಕೊಡಿಸಿದರು . ದೊಡ್ಡಪ್ಪ ಶಂಕರನಾರಾಯಣ ಸಾಮಗ , ತಂದೆ ರಾಮದಾಸ ಸಾಮಗ , ಕೆರೆಮನೆ ಮಹಾಬಲ ಹೆಗಡೆಯವರಂಥಹ ಘಟಾನುಘಟಿಗಳಿರುವ ಕೂಟದಲ್ಲಿ ಸಾಮಗರು ಕಾಣಿಸಿಕೊಂಡರು . 

 ಎರಡು ವರ್ಷ ಅಮೃತೇಶ್ವರಿ ಮೇಳದ ತಿರುಗಾಟದಲ್ಲಿ ಸಾಮಗರಿಗೆ ಶಂಕರನಾರಾಯಣ ಸಾಮಗ , ಚಿಟ್ಟಾಣಿ , ಗೋಡೆಯವರಂಥಹ ಕಲಾವಿದರ ಒಡನಾಟವಾಗಿ ಬೆಳೆಯಲು ಅವಕಾಶ ಆಯಿತು . ಆಗ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾಗಿದ್ದ ನಾರಣಪ್ಪ ಉಪ್ಪೂರರಲ್ಲಿ ಸಾಮಗರು ಯಕ್ಷಗಾನದ ನಾಟ್ಯವನ್ನು ಕರಗತ ಮಾಡಿಕೊಂಡರು . ತಮ್ಮ ಅಸ್ಖಲಿತ ಮಾತುಗಾರಿಕೆ , ಹದವರಿತ ನಾಟ್ಯ , ಪಾತ್ರಗಳ ಒಳಮರ್ಮ ಅರಿತು ನೀಡುವ ಪಾತ್ರಚಿತ್ರಣ , ಪಾತ್ರಗಳಿಗೆ ನವೀನ ಸ್ಪರ್ಶ ನೀಡುವ ಶೈಲಿ ಎಲ್ಲವೂ ಸಾಮಗರನ್ನು ಎತ್ತರದ ಸಾಲಿಗೆ ಏರಿಸಿದವು .ಮುಂದೆ ಕರ್ಣಾಟಕ , ಇರಾ , ಧರ್ಮಸ್ಥಳ , ಪೆರ್ಡೂರು , ಸಾಲಿಗ್ರಾಮ, ಕದ್ರಿ , ಸುರತ್ಕಲ…, ಬಗ್ವಾಡಿ , ಕಾಟಿಪಳ್ಳ , ಸೌಕೂರು , ಶಿರಸಿ ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದರು . 

ಸಾಮಗರು ನಿರ್ವಹಿಸಿದ ಕೆಲವು ಪಾತ್ರಗಳಂತೂ ಅನನ್ಯ. ತಪಸ್ವಿ ತರಂಗಿಣಿ ಪ್ರಸಂಗದಲ್ಲಿ ಹೆಣ್ಣು ಎಂದರೆ ಏನೆಂದೇ ಅರಿಯದ ಮುಗ್ಧ ಋಷ್ಯಶೃಂಗನ ಪಾತ್ರಕ್ಕೆ ಮೂಲ ಚಿತ್ರಣ ಕೊಟ್ಟವರು ಸಾಮಗರು. ಗೋಗ್ರಹಣ ಪ್ರಸಂಗದ ಉತ್ತರಕುಮಾರನ ಪೌರುಷ, ಪಟ್ಟಾಭಿಷೇಕ ಪ್ರಸಂಗದಲ್ಲಿ ದಶರಥನ ಮಾನಸಿಕ ತುಮುಲ , ಕರ್ಮಬಂಧನದಲ್ಲಿ ಧರ್ಮ ಪ್ರಜ್ಞೆಯ ಭೀಷ್ಮ , ಗದಾಯುದ್ಧದ ದುರಂತ ಕೌರವ , ಕಟಿಲತೆಯ ಮಂಥರೆ , ಕೈಕೇಯಿ , ಮಹಾಕವಿ ಕಾಳಿದಾಸ ಪ್ರಸಂಗದ ದುಷ್ಟಮಂತ್ರಿ , ಅಂಬೆ , ಶೂರ್ಪನಖೀ ,ಶ್ರೀಕೃಷ್ಣ ಈ ಎಲ್ಲಾ  ಪಾತ್ರಗಳು ಸಾಮಗರಿಗೆ ಅಪಾರ ಪ್ರಸಿದ್ಧಿ ನೀಡಿ ಮಾಸ್ಟರ್‌ಪೀಸ್‌ ಎಂದು ಪರಿಗಣಿಸಲ್ಪಟ್ಟಿವೆ .ವಿತಂಡವಾದಕ್ಕೆ ಅವಕಾಶವಿರುವ ಪೌಂಢಕ , ಕೌರವ , ಉತ್ತರ ಕುಮಾರ , ಮಂಥರೆ , ಸಾಲ್ವ , ದಕ್ಷ ಮುಂತಾದ ಪಾತ್ರಗಳು ಸಿಕ್ಕರಂತೂ ಪ್ರೇಕ್ಷಕರಿಗೆ ರಸಕವಳ . 

ಪ್ರಸ್ತುತ ತಮ್ಮದೇ ಆದ ಸಂಯಮಂ ಎಂಬ ತಂಡ ಕಟ್ಟಿ ತಾಳಮದ್ದಳೆ ಪ್ರದರ್ಶನ ನೀಡುತ್ತಿದ್ದಾರೆ.ಅಪರೂಪಕೊಮ್ಮೆ ಹರಿಕಥೆಯಲ್ಲೂ ತೊಡಗಿಸಿಕೊಂಡಿದ್ದಾರೆ .

 ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.