ಭರತ್‌ನಗರ: 21 ಮಕ್ಕಳಿದ್ದರೂ ಶಾಶ್ವತ ಅಂಗನವಾಡಿ ಇಲ್ಲ !
Team Udayavani, Jul 27, 2018, 6:00 AM IST
ಗಂಗೊಳ್ಳಿ: ಒಂದು ಶಾಶ್ವತ ಅಂಗನವಾಡಿಯನ್ನು ತೆರೆಯುವಷ್ಟು ಮಕ್ಕಳ ಸಂಖ್ಯೆ ಇಲ್ಲಿದೆ. ಆದರೆ ಅಂಗನವಾಡಿ ಬಗ್ಗೆ ಸರಕಾರ ಗಮನವೇ ಹರಿಸಿಲ್ಲ. ಪರಿಣಾಮ ಊರವರೇ ತಮ್ಮ ಸ್ವಂತ ಖರ್ಚಿನಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ.
ಇದು ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಕಂಚುಗೋಡು ಸಮೀಪದ ಭಗತ್‌ನಗರದ ಸ್ಥಿತಿ. ಕಂಚುಗೋಡಿನಲ್ಲಿ ಅಂಗನವಾಡಿ ಕೇಂದ್ರವಿದ್ದರೂ ಭರತ್‌ನಗರದವರಿಗೆ ಇದು ದೂರವಾಗಿದೆ. ಭವಿಷ್ಯದಲ್ಲಿ ಇಲ್ಲಿ ಕಂಚುಗೋಡಿನ ಪ್ರಾಥಮಿಕ ಶಾಲೆಗೆ ದಾಖಲಾತಿ ಕಡಿಮೆಯಾಗಬಾರದು ಎಂಬ ಉದ್ದೇಶದಿಂದಲೂ ಇಲ್ಲಿನ ಹಳೆ ವಿದ್ಯಾರ್ಥಿಗಳೇ ಅಂಗನವಾಡಿ ನಿರ್ವಹಣೆಗೆ ಮುಂದೆ ಬಂದಿದ್ದಾರೆ.
ಮಕ್ಕಳಿಗೆ ನೀಡುವ ಆಹಾರವೊಂದನ್ನು ಹೊರತುಪಡಿಸಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ವೇತನ ಸಹಿತ ಬಾಕಿ ಉಳಿದ ಎಲ್ಲ ಅಗತ್ಯತೆಗಳನ್ನು ಈ ಹಳೆ ವಿದ್ಯಾರ್ಥಿಗಳೇ ಪೂರೈಸುತ್ತಿದ್ದಾರೆ.
ಕಟ್ಟಡವೂ ಶಾಲೆಯದ್ದು
ಸದ್ಯ ಕಂಚುಗೋಡು ಸರಕಾರಿ ಹಿ. ಪ್ರಾ. ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಅಂಗನವಾಡಿ ನಡೆಯುತ್ತಿದೆ. ಇಲ್ಲಿ ಶಾಶ್ವತ ಕಟ್ಟಡದೊಂದಿಗೆ, ರಸ್ತೆ ಬದಿ ಆಗಿರುವುದ ರಿಂದ ಸುತ್ತಲೂ ಆವರಣಗೋಡೆ ನಿರ್ಮಿ ಸಲು ಊರವರು ಒತ್ತಾಯಿಸಿದ್ದಾರೆ.
ತಾತ್ಕಾಲಿಕ ಅಡುಗೆ ಕೋಣೆ
ಇದು ಕಂಚುಗೋಡು ಅಂಗನವಾಡಿಯ ವಿಸ್ತರಣಾ ಕೇಂದ್ರವಾಗಿರುವುದರಿಂದ ಮಕ್ಕಳಿಗೆ ಆಹಾರವೆಲ್ಲ ಅಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಆದರೆ ಈಗ ಮಳೆಗಾಲದಲ್ಲಿ ಸಾಗಾಟ ಕಷ್ಟ ಎಂದು ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಅಂಗನವಾಡಿ ಕೇಂದ್ರದ ಕೋಣೆಯಲ್ಲಿಯೇ ತಾತ್ಕಾಲಿಕ ಅಡುಗೆ ಕೋಣೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.
ಇಲಾಖೆ, ಶಾಸಕರು ಸ್ಪಂದಿಸಲಿ
ಅಂಗನವಾಡಿಯ ಕಾರ್ಯರ್ತೆ,ಸಹಾಯಕಿಯ ವೇತನ, ಮಕ್ಕಳನ್ನು ಕರೆ ತರಲು ವಾಹನದ ವ್ಯವಸ್ಥೆ ಮಾಡಿದ್ದು, ಒಟ್ಟು ತಿಂಗಳಿಗೆ 10 ಸಾವಿ ರೂ. ಗೂ. ಅಧಿಕ ಹಣವನ್ನು ಊರವರೇ ಭರಿಸುತ್ತಿದ್ದಾರೆ. ಪ್ರತಿ ತಿಂಗಳು ಇವರಿಗೆ ವೇತನ, ವಾಹನದ ವೆಚ್ಚ ನೀಡುವುದು ಹೊರೆ ಯಾಗುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸಲಿ ಎಂದು ಊರವರು ಆಗ್ರಹಿಸಿದ್ದಾರೆ.
ಶಾಶ್ವತ ಕೇಂದ್ರ ಆಗಲಿ
ಕೆಲವೆಡೆ 3-4 ಮಕ್ಕಳಿದ್ದರೂ ಅಂಗನ ವಾಡಿಗಳನ್ನು ನಡೆಸಲಾಗುತ್ತಿದೆ. ಆದರೆ ಇದು ಈಗ ವಿಸ್ತರಣಾ ಕೇಂದ್ರ
ವಾಗಿದ್ದರೂ, ಇಲ್ಲಿ 21 ಮಕ್ಕಳಿದ್ದಾರೆ. ಇದನ್ನೇ ಶಾಶ್ವತ ಅಂಗನವಾಡಿ ಕೇಂದ್ರ ವಾಗಿಸಲಿ. ಆಗ ಸರಕಾರ ದಿಂದಲೇ ಎಲ್ಲ ಸವಲತ್ತುಗಳು ಸಿಗಲಿದೆ. ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ನೆರವು ನೀಡುತ್ತಿದ್ದೇವೆ. ಆದರೆ ಪ್ರತಿ ತಿಂಗಳು ನೀಡುವುದು ನಮ್ಮಿಂದ ಕಷ್ಟವಾಗುತ್ತಿದೆ.
– ಸುರೇಶ್ ವಿ.ಕೆ.ಕಂಚುಗೋಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ
ಪ್ರಸ್ತಾವನೆ ಸಲ್ಲಿಕೆ
ಭಗತ್‌ನಗರದಲ್ಲಿ ಶಾಶ್ವತ ಅಂಗನವಾಡಿ ಆರಂಭಿಸಲು ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರದೇ ಆದ ಪ್ರಕ್ರಿಯೆಗಳಿವೆ. ಕೇಂದ್ರ ಸರಕಾರದ ಅನುಮೋದನೆ ಕೂಡ ಬೇಕಿದೆ. ಅಲ್ಲಿಯವರೆಗೆ ಸಹಾಯಕಿ, ಕಾರ್ಯಕರ್ತೆಯರ ವೇತನ ನೀಡಲು ಸಾಧ್ಯವಿಲ್ಲ. ಆದರೆ ಕಂಚುಗೋಡು ಅಂಗನವಾಡಿಯಿಂದಲೇ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.
– ನಿರಂಜನ್ ಭಟ್,
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.