ಸೆಕೆಂಡ್‌ ಹಾಫ್ ಸ್ಟ್ರಾಂಗ್‌ ಗುರು


Team Udayavani, Jul 27, 2018, 6:00 AM IST

31.jpg

ನೀವು ಸಿನಿಮಾ ವಿಮರ್ಶೆ ಓದುವವರಾಗಿದ್ದರೆ ನಿಮಗೆ ಇಂತಹ ಸಾಲುಗಳು ಬಹುತೇಕ ಸಿನಿಮಾ ವಿಮರ್ಶೆಗಳಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ, ನೀವು ಸಿನಿ ಪ್ರಿಯರಾಗಿದ್ದರೆ ನಿಮಗೂ ಇಂತಹ ಅನುಭವ ಆಗಿರುತ್ತದೆ. ಇತ್ತೀಚಿನ ಕೆಲವು ಚಿತ್ರಗಳನ್ನು ಗಮನಿಸಿದರೆ, ಚಿತ್ರ ಆರಂಭವಾಗಿ ಇಂಟರ್‌ವಲ್‌
ಬರುವವರೆಗೂ ಏನೂ ನಡೆದಿರುವುದಿಲ್ಲ. ಹೀರೋ ಬಿಲ್ಡಪ್‌, ಸಾಂಗ್‌, ಫೈಟ್‌, ಕಾಮಿಡಿ … ಬಹುತೇಕ ಇಂತಹ ದೃಶ್ಯಗಳಲ್ಲೇ ಮೊದಲಾರ್ಧವನ್ನು ಮುಗಿಸಿಬಿಟ್ಟಿರುತ್ತಾರೆ. ಸಿನಿಮಾ ಏನಿದ್ದರೂ ಸೆಕೆಂಡ್‌ಹಾಫ್ನಲ್ಲಿ ಬಿಚ್ಚಿಕೊಳ್ಳುತ್ತದೆ ಮತ್ತು ಇಡೀ ಸಿನಿಮಾದ ಜೀವಾಳ ಕೂಡಾ ಅದೇ. ಅಲ್ಲಿಗೆ ಒಂದಂಶ ಸ್ಪಷ್ಟ. ಇತ್ತೀಚಿನ ಸಿನಿಮಾಗಳನ್ನು ಕೈ ಹಿಡಿಯುತ್ತಿರೋದು ಸೆಕೆಂಡ್‌ ಹಾಫ್. ಹಾಗಾಗಿ, ಸೆಕೆಂಡ್‌ ಹಾಫ್ ಸ್ಟ್ರಾಂಗ್‌ ಗುರು ಎನ್ನುವಂತಾಗಿದೆ.

ನಿರ್ದೇಶಕರು ಕಥೆ ಮಾಡಿಕೊಂಡಿರೋದಿಲ್ಲವೋ ಅಥವಾ ಇದ್ದ ಕಥೆಯನ್ನು ನಿರೂಪಿಸುವಲ್ಲಿ ಎಡವುತ್ತಿದ್ದಾರೋ, ಒಟ್ಟಿನಲ್ಲಿ ಬಹುತೇಕ ಸಿನಿಮಾಗಳ
ಮೊದಲರ್ಧ ಜಾಳು ಜಾಳು. ಒಂದಿಷ್ಟು ಕಥೆ ಪ್ರೇಕ್ಷಕರಿಗೆ ಸಿಕ್ಕರೆ ಅದು ದ್ವಿತೀಯಾರ್ಧದಲ್ಲಿ. ಹಾಗಂತ ಕೆಲವೊಮ್ಮೆ ಸೆಕೆಂಡ್‌ಹಾಫ್ ಕೂಡಾ
ಕೈ ಕೊಡುತ್ತದೆ. ನಿರ್ದೇಶಕರು ಸೆಕೆಂಡ್‌ ಹಾಫ್ ನಲ್ಲೂ ಫ‌ಸ್ಟ್‌ ಹಾಫ್ ಕಾಮಿಡಿ ಶೋಗಳನ್ನೇ ರಿಪೀಟ್‌ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಇಡೀ ಪಿಕ್ಚರ್‌ ತೋರಿಸಿಬಿಡುತ್ತಾರೆ. ಅದೇನೇ ಆದರೂ ಸದ್ಯ ಸಿನಿ ಪ್ರೇಮಿಗಳ ಹಾಗೂ ಸಿನಿಮಂದಿಯ ನಂಬಿಕೆ ಎಂದರೆ ಕೊನೆಪಕ್ಷ ಸೆಕೆಂಡ್‌ಹಾಫ್ ಚೆನ್ನಾಗಿರಬಹುದು ಮತ್ತು ಸೆಕೆಂಡ್‌ಹಾಫ್ ಚೆನ್ನಾಗಿದ್ದರೂ ಸಿನಿಮಾ ಓಡಬಹುದೆಂಬುದು.

ಎಲ್ಲಾ ಓಕೆ, ಸೆಕೆಂಡ್‌ ಹಾಫ್ನಲ್ಲೇ ಕಥೆ ಅಡಗಿರಲು ಮತ್ತು ಫ‌ಸ್ಟ್‌ ಹಾಫ್ ಖಾಲಿ ಇರಲು ಕಾರಣವೇನು ಎಂದು ನೀವು ಕೇಳಬಹುದು. ಇಲ್ಲಿ ನಿರ್ದಿಷ್ಟ
ಕಾರಣಗಳು ಇರದೇ ಹೋದರೂ ಸಿನಿಮಾದ ಅವಧಿ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಎರಡು ಗಂಟೆ ಇಪ್ಪತ್ತು ನಿಮಿಷ ಇರಬೇಕೆಂಬ ಅಲಿಖೀತ ನಿಯಮದಂತೆ ಬಹುತೇಕ ಎಲ್ಲಾ ಸಿನಿಮಾಗಳು ಅದೇ ಅವಧಿಯೊಂದಿಗೆ ಬರುತ್ತಿವೆ. ಅದಕ್ಕೆ ಕಾರಣ ಚಿತ್ರಮಂದಿರಗಳಲ್ಲಿನ ಶೋ ಅವಧಿ. ಬೆಳಗ್ಗಿನ ಶೋಗೂ ಮಧ್ಯಾಹ್ನದ ಶೋಗೂ ಸಮಯ ಹೊಂದಾಣಿಕೆಯಾಗಬೇಕೆಂಬ ಕಾರಣಕ್ಕೆ ಚಿತ್ರಮಂದಿರಗಳು ಕೂಡಾ ಸಿನಿಮಾದ ಅವಧಿಯ ಬಗ್ಗೆ ಗಮನಹರಿಸುತ್ತವೆ. ನೀವು 90 ನಿಮಿಷದ ಸಿನಿಮಾ ಮಾಡಿದರೆ ಅದು ಬೇಗನೇ ಮುಗಿದು ಹೋಗುತ್ತದೆ. ಇನ್ನೊಂದು ಶೋ ಆರಂಭವಾಗುವ ಮಧ್ಯೆ ಸಾಕಷ್ಟು ಸಮಯವಿರುತ್ತದೆ. ಈ ಕಾರಣದಿಂದ ಚಿತ್ರಮಂದಿರದ ಆಶಯದ ಜೊತೆಗೆ ಅಲಿಖೀತ
ನಿಯಮದಂತೆ ಬಹುತೇಕ ಸಿನಿಮಾಗಳು ಎರಡು ಗಂಟೆ 20 ನಿಮಿಷ ಅಥವಾ ಎರಡು ಗಂಟೆ 10 ನಿಮಿಷದ ಅವಧಿಯಲ್ಲೇ ತಯಾರಾಗುತ್ತಿವೆ. ಹಾಗೆ ನೋಡಿದರೆ ಎರಡು ಗಂಟೆ ಒಂದು ಸಿನಿಮಾಕ್ಕೆ ಬೋರ್‌ ಹೊಡೆಸುವ ಅವಧಿಯಲ್ಲ. ಆದರೆ, ಇಲ್ಲಿ ಮುಖ್ಯವಾಗುವುದು ಚಿತ್ರಕಥೆ ಮತ್ತು ನಿರ್ದೇಶಕನ ಜಾಣ್ಮೆ. ಆತ ಎರಡು ಗಂಟೆ ಅವಧಿಯಲ್ಲಿ ಇಡೀ ಸಿನಿಮಾವನ್ನು ಹೇಗೆ ಕಟ್ಟಿಕೊಡುತ್ತಾನೆಂಬುದರ ಮೇಲೆ ಇಡೀ ಸಿನಿಮಾದ ಭವಿಷ್ಯ ನಿಂತಿರುತ್ತದೆ.

ಮೊದಲೇ ಹೇಳಿದಂತೆ ಅನೇಕ ನಿರ್ದೇಶಕರಲ್ಲಿ ಕಥೆಯೇ ಇರೋದಿಲ್ಲ. ಇರೋ ಒನ್‌ಲೈನ್‌ನಲ್ಲಿ ಇಡೀ ಸಿನಿಮಾವನ್ನು ಬೆಳೆಸುತ್ತಾ ಹೋಗಬೇಕಾದ ಹಾಗೂ ಎರಡು ಗಂಟೆ ಅವಧಿಗೆ ಸಿನಿಮಾ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಇದೇ ಕಾರಣದಿಂದ ಎಡಿಟಿಂಗ್‌ ಟೇಬಲ್‌ನಲ್ಲಿ ಕುಳಿತ 
ನಿರ್ದೇಶಕರು, ಮೊದಲರ್ಧದಲ್ಲಿ ಕಾಮಿಡಿ, ಫೈಟ್‌, ಹೀರೋ ಬಿಲ್ಡಪ್‌ … 

ಈ ತರಹದ ದೃಶ್ಯಗಳನ್ನು ತುಂಬಿಸುತ್ತಾ ಹೋಗಿ, ಇಂಟರ್‌ವಲ್‌ ಪಾಯಿಂಟ್‌ಗೆ ಸಿನಿಮಾದ ಒಂದು ಕುತೂಹಲಭರಿತ ಅಂಶವನ್ನಿಟ್ಟು ಬ್ರೇಕ್‌ ಕೊಡುತ್ತಾರೆ. ಇಲ್ಲಿ ಗಮನಿಸಬೇಕಾದ ಒಂದಂಶವೆಂದರೆ ಬಹುತೇಕ ಎಲ್ಲಾ ಸಿನಿಮಾಗಳು ಪ್ರದರ್ಶನ ಆರಂಭವಾಗಿ ಒಂದು ಗಂಟೆಗೆ ಇಂಟರ್‌ವಲ್‌ ಇಡುತ್ತವೆ. ಹಾಗಾಗಿ, ಮೊದಲರ್ಧದ ಒಂದು ಗಂಟೆಯಲ್ಲಿ ಏನೂ ನಡೆಯದಿರುವುದರಿಂದ ಒಂದು ಗಂಟೆ ಅನಾವಶ್ಯಕವಾಗಿ ಕಳೆದು ಹೋಯಿತು ಎಂಬ ಭಾವ ಮೂಡದೇ ಪ್ರೇಕ್ಷಕರಲ್ಲಿ ಇರದು.  ಇಂಟರ್‌ವಲ್‌ನಲ್ಲಿ ಸಿನಿಮಾಕ್ಕೊಂದು ಟ್ವಿಸ್ಟ್‌ ಕೊಟ್ಟು, ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದೊಳಗೆ ಬರಮಾಡಿಕೊಳ್ಳುವ ಸಿನಿಮಾಗಳು, ಕೆಲವೊಮ್ಮೆ ಆಶಾಭಾವನೆ ಮೂಡಿಸಿದರೆ, ಇನ್ನು ಕೆಲವೊಮ್ಮೆ ತರಾತುರಿಯಲ್ಲಿ ಎಲ್ಲವನ್ನು ಹೇಳಿಬಿಟ್ಟಿರುತ್ತವೆ. ಸಿನಿಮಾಗಳು ಸೆಕೆಂಡ್‌ ಹಾಫ್ನಿಂದಲೇ ಗೆದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಫ‌ಸ್ಟ್‌ಹಾಫ್ ಜಾಳು ಜಾಳು ಎನಿಸಿದರೂ ಸೆಕೆಂಡ್‌ಹಾಫ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಸಿನಿಮಾಗಳನ್ನು ಗೆಲ್ಲಿಸಿದ ಅನೇಕ ನಿರ್ದೇಶಕರಿದ್ದಾರೆ. ಇನ್ನು ಕೆಲವು ನಿರ್ದೇಶಕರು ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆಕೆಂಡ್‌ಹಾಫ್ನಲ್ಲೇ ತೋರಿಸಬೇಕೆಂದು ದೃಶ್ಯಗಳನ್ನು “ಗುಡ್ಡೆ’ ಹಾಕಿಕೊಂಡು, ಕೊನೆಗೆ ತರಾತುರಿಯಲ್ಲಿ ಯಾವುದನ್ನು ಸರಿಯಾಗಿ ತೋರಿಸದೇ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಾರೆ. ಅದರಲ್ಲೂ ಹಾರರ್‌ ಸಿನಿಮಾಗಳಂತೂ ಮೊದಲರ್ಧ ಭಯಬೀಳಿಸುವ ರೀರೆಕಾರ್ಡಿಂಗ್‌, ಅತ್ತಿಂದಿತ್ತ ಓಡಾಡೋ ಆಕೃತಿ, ಏಕಾಏಕಿ ಸಂಚರಿಸುವ ಪಾತ್ರೆ-ಪಗಡಿ, ಜೀವ ಬಂದಂತಾಡುವ ಆರಾಮ್‌ ಚೇರ್‌ … ಇಂತಹ ದೃಶ್ಯಗಳಲ್ಲೇ ಫ‌ಸ್ಟ್‌ ಹಾಫ್ ಮುಗಿಸಿಬಿಡುತ್ತಾರೆ. ಹೊಸ ನಾಯಕನ ಇಂಟ್ರೋಡಕ್ಷನ್‌ ಸಿನಿಮಾವಾದರೆ, ಇಂಟ್ರೋಡಕ್ಷನ್‌ ಫೈಟ್‌, ಆತನ ಅಡ್ಡ, ಲವ್‌, ಸಾಂಗ್‌ ಅಷ್ಟೇ ಇಲ್ಲಿ ಸೀಮಿತ. 

ಕೆಲವು ಸಿನಿಮಾಗಳ ಫ‌ಸ್ಟ್‌ ಹಾಫ್ನಲ್ಲಿ ಏನೂ ಇಲ್ಲದಿದ್ದರೂ ಕಡೆಪಕ್ಷ ಸೆಕೆಂಡ್‌ ಹಾಫ್ನಲ್ಲಾದರೂ ಪ್ರೇಕ್ಷಕರನ್ನು ಸಂತುಷ್ಟನನ್ನಾಗಿಸುತ್ತವೆ. ಆದರೆ, ಒಂದಷ್ಟು ಸಿನಿಮಾಗಳು ಇಡೀ ಸಿನಿಮಾದಲ್ಲಿ ಏನನ್ನೂ ಹೇಳದೇ ಕೊನೆಗೆ “ಪಾರ್ಟ್‌-2′ ಎಂದು ಹೇಳುತ್ತಾ, ಮುಂದುವರೆದ ಭಾಗದಲ್ಲಿ ಹೇಳುವ ಸೂಚನೆ ನೀಡುತ್ತದೆ. ಅಲ್ಲಿಗೆ ಎರಡನೇ ಭಾಗದಲ್ಲಿ ಹೇಳಲು ಇಡೀ ಒಂದು ಸಿನಿಮಾವನ್ನೇ ಪೀಠಿಕೆಯನ್ನಾಗಿಸಿದಂತಾಗುತ್ತದೆ. ಇಂತಹ ಸಿನಿಮಾಗಳಿಂದ ಪ್ರೇಕ್ಷಕ ಏನನ್ನೂ ನಿರೀಕ್ಷಿಸಲಾಗುವುದಿಲ್ಲ.

ಚಿತ್ರಮಂದಿರದೊಳಗೆ ಬರುವ ಪ್ರೇಕ್ಷಕ ಬಯಸೋದು ಒಳ್ಳೆಯ ಸಿನಿಮಾ ಹಾಗೂ ನೋಡಿಸಿಕೊಂಡು ಹೋಗುವ ಗುಣವನ್ನಷ್ಟೇ. ಆತ ನಿಮ್ಮ ಸಿನಿಮಾದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೋ ಸಿನಿಮಾಗಳ ಕ್ಲೈಮ್ಯಾಕ್ಸ್‌ ಅನ್ನು ಪ್ರೇಕ್ಷಕರು ಇವತ್ತಿಗೂ ನೆನಪಿನಲ್ಲಿಟ್ಟಿದ್ದಾರೆಂದರೆ ಅದಕ್ಕೆ ಕಾರಣ ಆ ದೃಶ್ಯಗಳು ಮೂಡಿಬಂದ ರೀತಿ. ಅದರಂತೆ, ಮೊದಲರ್ಧ, ದ್ವಿತೀಯಾರ್ಧ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಒಳ್ಳೆಯ ಸಿನಿಮಾವನ್ನಷ್ಟೇ ಕಟ್ಟಿಕೊಡಬೇಕೆಂಬ ಉದ್ದೇಶದೊಂದಿಗೆ ಸಿನಿಮಾ ಮಾಡಿದರೆ, ಆಗ “ಹಾಫ್’ಗಳ ಮಾತೇ ಬರೋದಿಲ್ಲ. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.