ಗಡಿನಾಡ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಜಯಮಾಲಾ
Team Udayavani, Jul 27, 2018, 7:00 AM IST
ಕಾಸರಗೋಡು: ಕಾಸರಗೋಡಿನ ಸಾಹಿತ್ಯ ವಲಯದ ಕನ್ನಡ ಚಳವಳಿಗಾರರ ಸಮಗ್ರ ಮಾಹಿತಿ ಕಲೆಹಾಕಿ ಕೈಪಿಡಿಯನ್ನು ಹೊರತರುವ ಕಾರ್ಯ ಶ್ಲಾಘನೀಯ ಎಂದು ಬಹುಭಾಷಾ ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಕೈರಳಿ ಪ್ರಕಾಶನ ಬಿಡುಗಡೆಗೊಳಿಸುವ ಕಾಸರಗೋಡಿನ ಸಾಹಿತಿಗಳ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೈರಳಿ ಪ್ರಕಾಶನಕ್ಕೆ ಅಭಿನಂದನೆ
ಕಾಸರಗೋಡು ಬಹುಭಾಷೆ, ಸಂಸ್ಕೃತಿ ಗಳ ನೆಲೆವೀಡು. ಕನ್ನಡ ಸಾರಸ್ವತ ಲೋಕವು ಇಲ್ಲಿ ಸಂಪತ್ಸಮೃದ್ಧವಾಗಿದೆ. ಇಲ್ಲಿನ ಕನ್ನಡ ಹೋರಾಟ, ಚಳವಳಿಯು ದೇಶಕ್ಕೇ ಮಾದರಿ. ಆದರೆ ಇಲ್ಲಿನ ಸಾಹಿತಿಗಳ, ಚಳವಳಿಗಾರರ ಸಮಗ್ರ ಮಾಹಿತಿಯ ದಾಖಲೀಕರಣ ಇನ್ನೂ ಆಗಿಲ್ಲ. ಆ ನಿಟ್ಟಿನಲ್ಲಿ ಸಮಗ್ರ ಮಾಹಿತಿಯ ಕೋಶ ರಚಿಸಲು ಮುಂದಾಗಿರುವ ಕೈರಳಿ ಪ್ರಕಾಶನದ ಸಾಹಸ ನಿಜಕ್ಕೂ ಶ್ಲಾಘನೀಯ. ಪ್ರಕಾಶಕರು ಅಭಿನಂದನಾರ್ಹರೆಂದು ಅವರು ಹೇಳಿದರು.
ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಇಲ್ಲಿನ ಸಮಸ್ಯೆ ಪರಿಹಾರಕ್ಕೆ ತನ್ನಿಂದಾದ ಪ್ರಯತ್ನ ನಿರ್ವಹಿಸುವುದಾಗಿಯೂ ಭರವಸೆಯನ್ನಿತ್ತರು. ಈ ಸಂದರ್ಭದಲ್ಲಿ ಕೈರಳಿ ಪ್ರಕಾಶನದ ಎ.ಆರ್. ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ನಿವೃತ್ತ ಪ್ರಾಂಶುಪಾಲ ಪ್ರೊ| ಶ್ರೀನಾಥ್, ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ನಿದೆೇìಶಕರಾದ ದೇವಿಪ್ರಸಾದ್ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕೋಶಾಧಿ ಕಾರಿ ರವಿ ನಾಯ್ಕಪು ಮೊದಲಾದವರು ಉಪಸ್ಥಿತರಿದ್ದರು.
ಎಲೆಮರೆಯ ಕಾಯಿಗಳಾಗಿರುವ ಕಾಸರಗೋಡಿನ ಪ್ರತಿಭಾವಂತ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಹೊರ ತರುವ ಕೈಂಕರ್ಯ ಕೈರಳಿ ಪ್ರಕಾಶನವು ಮುಂದುವರಿಸಿದೆ. ಇದೀಗ ಎರಡನೇ ಹಂತವಾಗಿ ಕನ್ನಡ ಸಾಹಿತಿಗಳ, ಚಳವಳಿಗಾರರ ಪರಿಶ್ರಮ, ಕಟ್ಟುಪಾಡು, ವಚನ ಬದ್ಧತೆ, ಸಾಧನೆ ಮತ್ತು ಕೊಡುಗೆ ಗಳನ್ನು ಗುರುತಿಸುವ, ಪರಿಚಯಿಸುವ, ದಾಖಲಿಸುವ ಅಭಿಯಾನ ಕೈಗೊಂಡಿದೆ ಎಂದು ಎ.ಆರ್. ಸುಬ್ಬಯ್ಯಕಟ್ಟೆ. ಹೇಳಿದರು.
ಕಾಸರಗೋಡು ವಲಯ ಸಾಹಿತಿಗಳು ಜಯಮಾಲಾ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.