ವಾತ್ವಾನಿ, ವಾಂಗ್ಚುಕ್ಗೆ “ಮ್ಯಾಗ್ಸೆಸೆ’ ಪ್ರಶಸ್ತಿ ಗರಿ
Team Udayavani, Jul 27, 2018, 6:00 AM IST
ಮನಿಲಾ: ಏಷ್ಯಾ ಮಟ್ಟದ ನೋಬೆಲ್ ಬಹುಮಾನ ಎಂದೇ ಖ್ಯಾತಿ ಗಳಿಸಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಮುಂಬೈನ ಮನೋವೈದ್ಯ ಭರತ್ ವಾತ್ವಾನಿ ಹಾಗೂ ಈಶಾನ್ಯ ರಾಜ್ಯಗಳ ಪ್ರಾಂತ್ಯದ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ಗೆ ಸಂದಿದೆ.1988ರಲ್ಲಿ ಅವರು ಸ್ಥಾಪಿಸಿರುವ ಶ್ರದ್ಧಾ ರಿಹಬಲಿಟೇಷನ್ ಫೌಂಡೇಷನ್ ಮೂಲಕ ಡಾ. ಭರತ್ ವಾಗ್ವಾಣಿ, ಮನೋರೋಗಕ್ಕೆ ತುತ್ತಾಗಿರುವ ನಿರ್ಗತಿಕರನ್ನು ಗುಣಪಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು, ಲಡಾಖ್ನಲ್ಲಿ ಶೈಕ್ಷಣಿಕವಾಗಿ ಹಿಂದು ಳಿದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸ್ಟೂಡೆಂಟ್ಸ್ ಎಜುಕೇಷನ್ ಆ್ಯಂಡ್ ಕಲ್ಚರಲ್ ಮೂವ್ಮೆಂಟ್ ಆಫ್ ಲಡಾಕ್ (ಸೆಕ್ವೊಲ್) ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಇವರಲ್ಲದೆ, ಈ ಬಾರಿಯ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಯೋಕ್ ಚಾಂಗ್ (ಕಾಂಬೋಡಿಯಾ), ಮರಿಯಾ ಡಿ ಲಾರ್ಡೆಸ್ ಮಾರ್ಟಿನ್ಸ್ ಕ್ರುಜ್ (ಈಸ್ಟ್ ತೈಮೊರ್), ಹೊವಾರ್ಡ್ ಡೀ (ಫಿಲಿಪ್ಪೀನ್ಸ್) ಹಾಗೂ ವೊ ಥಿ ಹೊವಾಂಗ್ ಯೆನ್ (ವಿಯೆಟ್ನಾಂ) ಅವರಿಗೂ ಸಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.