ಕರ್ಜಗಿ-ಸವಣೂರು ಮಧ್ಯ ರೈಲುಗಳಿಗೆ ತಾತ್ಕಾಲಿಕ ಬ್ರೇಕ್
Team Udayavani, Jul 27, 2018, 12:15 PM IST
ಹುಬ್ಬಳ್ಳಿ: ಕರ್ಜಗಿ-ಸವಣೂರು ರೈಲು ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ತಾಂತ್ರಿಕ ಕೆಲಸ ಸೋಮವಾರ ಹೊರತುಪಡಿಸಿ ಜು.31ರವರೆಗೆ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ತಾಸುಗಳ ಕಾಲ ನಡೆಯುವುದರಿಂದ ಕೆಲ ರೈಲುಗಳ ಸಂಚಾರ ನಿಯಂತ್ರಿಸಲಾಗುವುದು.
ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ (56913) ರೈಲನ್ನು 47 ನಿಮಿಷ ಕರ್ಜಗಿಯಲ್ಲಿ ಹಾಗೂ ಹುಬ್ಬಳ್ಳಿ-ಅರಸಿಕೆರೆ ಪ್ಯಾಸೆಂಜರ್ (56274) ರೈಲನ್ನು ಸವಣೂರ ನಿಲ್ದಾಣದಲ್ಲಿ 40 ನಿಮಿಷ ತಡೆ ಹಿಡಿಯಲಾಗುವುದು.
ಕಂಟೋನ್ಮೆಂಟ್‌ನಿಂದ ರೈಲು ಸಂಚಾರ: ಡೀಸೆಲ್ ಇಲೆಕ್ಟ್ರಿಕ್ ಮಲ್ಟಿ ಯುನಿಟ್ (ಡೆಮು) ರೈಲುಗಳ ಸಂಚಾರವನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಜು. 28ರಿಂದ ಆರಂಭಿಸಲಾಗುವುದು.
ಬಂಗಾರಪೇಟ-ಕೆಎಸ್‌ಆರ್ ಬೆಂಗಳೂರು ಡೆಮು (76508) ರೈಲನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಮಧ್ಯಾಹ್ನ 3:30 ಗಂಟೆಗೆ ಬಂಗಾರಪೇಟೆಯಿಂದ ಹೊರಟು ಸಂಜೆ 5:20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಕೆಎಸ್‌ಆರ್ ಬೆಂಗಳೂರು-ಕೋಲಾರ ಡೆಮು (76551) ರೈಲನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಆರಂಭಿಸಲಾಗುವುದು. ಈ ರೈಲು ಬೆಳಗ್ಗೆ 8:40 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಕೋಲಾರ ತಲುಪಲಿದೆ.
ಕೋಲಾರ-ಕೆಎಸ್‌ಆರ್ ಬೆಂಗಳೂರು ಡೆಮು (76552) ರೈಲನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಕೋಲಾರದಿಂದ ಮಧ್ಯಾಹ್ನ 1:45 ಗಂಟೆಗೆ ಹೊರಟು ಬೆಂಗಳೂರು ಕಂಟೋನ್ಮೆಂಟ್‌ನ್ನು ಸಂಜೆ 5:45 ಗಂಟೆಗೆ ತಲುಪಲಿದೆ.
ಕೆಎಸ್‌ಆರ್ ಬೆಂಗಳೂರು-ಧರ್ಮಾಪುರಿ ಡೆಮು (76553) ರೈಲನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಆರಂಭಿಸಲಾಗುವುದು. ಈ ರೈಲು ಸಂಜೆ 6:25 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು ರಾತ್ರಿ 9:40 ಗಂಟೆಗೆ ಧರ್ಮಾಪುರಿ ತಲುಪಲಿದೆ.
ಧರ್ಮಾಪುರಿ-ಕೆಎಸ್‌ಆರ್ ಬೆಂಗಳೂರು ಡೆಮು (76554) ರೈಲನ್ನು ಕೆಎಸ್‌ಆರ್ ಬೆಂಗಳೂರು ಬದಲು ಬೆಂಗಳೂರು ಕಂಟೋನ್ಮೆಂಟ್‌ಗೆ ಮೊಟಕುಗೊಳಿಸಲಾಗುವುದು. ಈ ರೈಲು ಬೆಳಗಿನ ಜಾವ 5 ಗಂಟೆಗೆ ಧರ್ಮಾಪುರಿಯಿಂದ ಹೊರಟು ಬೆಳಗ್ಗೆ 8 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.