ಇನ್ನು ಗ್ರಾಮಗಳಲ್ಲಿ ಸ್ವಚ್ಚ ಸರ್ವೇಕ್ಷಣೆ


Team Udayavani, Jul 27, 2018, 12:16 PM IST

jipam.jpg

ಬೆಂಗಳೂರು: ರಾಜ್ಯದ ಮೊದಲ ಬಯಲು ಬಹಿರ್ದೆಸೆ ಮುಕ್ತ ಜಿಲ್ಲಾ ಪಂಚಾಯ್ತಿ ಬೆಂಗಳೂರು ನಗರದಲ್ಲಿ ಗುರುವಾರ “ಸ್ವಚ್ಚ ಸರ್ವೇಕ್ಷಣ ಗ್ರಾಮೀಣ- 2018’ಕ್ಕೆ ಚಾಲನೆ ದೊರೆಯಿತು.

“ಸ್ವಚ್ಚ ಸರ್ವೇಕ್ಷಣ ಗ್ರಾಮೀಣ’ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಚ ಭಾರತ್‌ ಮಿಷನ್‌ನ ಮುಂದುವರಿದ ಭಾಗ. ಈ ಮೊದಲು ಮನೆಗಳಲ್ಲಿನ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿತ್ತು. ಈಗ “ಸ್ವಚ್ಚ ಸರ್ವೇಕ್ಷಣ ಗ್ರಾಮೀಣ ರಥ’ವು ಹಳ್ಳಿಗಳಲ್ಲಿನ ಸಾಮೂಹಿಕ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಿದೆ.

ಆಸ್ಪತ್ರೆಗಳು, ಶಾಲೆಗಳು, ಅಂಗನವಾಡಿ, ಬಸ್‌ ನಿಲ್ದಾಣಗಳಲ್ಲಿನ ಸಮುದಾಯ ಶೌಚಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡುವುದು, ಶೌಚಾಲಯಗಳ ಬಳಕೆ ಸೇರಿದಂತೆ ಸಮಗ್ರ ನೈರ್ಮಲ್ಯ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಗುವುದು. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡರೆ, ಇದಕ್ಕೆ ಉತ್ತಮ ಅಂಕಗಳೂ ಸಿಗಲಿವೆ. 

ಅಷ್ಟೇ ಅಲ್ಲ, ಈ ಜಾಗೃತಿ ನಡುವೆ ಆ. 1ರಿಂದ 30ರವರೆಗೆ ಕೇಂದ್ರದಿಂದ ನೇಮಕಗೊಂಡ ಸ್ವಯಂಸೇವಾ ಸಂಸ್ಥೆಯೊಂದು ಜಿಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ, ಖುದ್ದು ಸ್ವಚ್ಚತೆಯ ಸಮೀಕ್ಷೆ ನಡೆಸಲಿದೆ. ಜನರ ಅಭಿಪ್ರಾಯ ಸಂಗ್ರಹಿಸಿ, ಅಂಕಗಳನ್ನು ನೀಡಲಿದೆ.

ಇದರ ಜತೆಗೆ ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಲ್ಲಿ ಸಾಧಿಸಿದ ಪ್ರಗತಿಗೂ 65 ಅಂಕಗಳು ದೊರೆಯಲಿವೆ. ಉತ್ತಮ ಶ್ರೇಣಿ ಪಡೆದ ರಾಜ್ಯ ಮತ್ತು ಜಿಲ್ಲೆಗಳಿಗೆ ಬರುವ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರವು ದೆಹಲಿಯಲ್ಲಿ ಪುರಸ್ಕಾರ ನೀಡಿ ಗೌರವಿಸಲಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ಚಾಲನೆ ನೀಡಲಾದ ಸ್ವಚ್ಚ ಸರ್ವೇಕ್ಷಣ ರಥವು ಜನ ಜಾಗೃತಿ ಮೂಡಿಸಲಿದೆ. ಜಿಲ್ಲೆಯಲ್ಲಿ ಒಟ್ಟು ಮೂರು ಸ್ವಚ್ಚ ರಥಗಳು ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ, ಕರಪತ್ರಗಳು, ಧ್ವನಿವರ್ಧಕದ ಮೂಲಕ ಸ್ವಚ್ಚತೆ ಬಗ್ಗೆ ತಿಳಿವಳಿಕೆ ನೀಡಲಿದೆ.

ಇದಲ್ಲದೆ, ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಶಾಲಾ ಮತ್ತು ಅಂಗನವಾಡಿ ಶಿಕ್ಷಕರು, ಆರೋಗ್ಯ ಅಧಿಕಾರಿಗಳ ಸಭೆ ಆಯೋಜನೆ ಮಾಡಿ, ರೇಡಿಯೊ, ದೂರದರ್ಶನದ ಮೂಲಕ ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಿದ್ದಾರೆ. 

ಸ್ವಚ್ಚ ರಥಕ್ಕೆ ಜಿಪಂ ಅಧ್ಯಕ್ಷ ಸಿ. ಮುನಿರಾಜು ಚಾಲನೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌. ಅರ್ಚನಾ, ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಯೋಜನಾ ನಿರ್ದೇಶಕ ಎ. ಹನುಮನರಸಯ್ಯ, ಜಿಲ್ಲಾ ಸಮಾಲೋಚಕ ಎಚ್‌.ವಿ. ಹಾಲೇಶ್‌ ಉಪಸ್ಥಿತರಿದ್ದರು.

ದೇಶಾದ್ಯಂತ ಸಮೀಕ್ಷೆ: ದೇಶಾದ್ಯಂತ ಹಮ್ಮಿಕೊಂಡ ಈ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ’ದ ಮೌಲ್ಯಮಾಪನ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಡೆಸಲಾಗುವ ಸಮೀಕ್ಷೆಗೆ ಒಳಪಡಲಿರುವ ಜಿಲ್ಲೆ, ಗ್ರಾಮ, ಸಾರ್ವಜನಿಕ ಸ್ಥಳಗಳ ವಿವರ ಹೀಗಿದೆ. 

-698 ಜಿಲ್ಲೆಗಳು
-6,980 ಗ್ರಾಮಗಳು
-34,900 ಸಾರ್ವಜನಿಕ ಸ್ಥಳಗಳು
-50 ಲಕ್ಷ ನಾಗರಿಕರ ಪ್ರತಿಕ್ರಿಯೆಗಳ ಸಂಗ್ರಹ

ಶೇ. 90ರಷ್ಟು  ದಂಡಕ್ಕೆ ಅರ್ಹ!: ಮಾಹಿತಿ ಹಕ್ಕು ಆಯೋಗಕ್ಕೆ ಬರುವ ಪ್ರಕರಣಗಳಲ್ಲಿ ಶೇ. 90ರಷ್ಟು ದಂಡಕ್ಕೆ ಅರ್ಹ ಆಗಿರುತ್ತವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. 

ಬೆಂಗಳೂರು ನಗರ ಜಿ.ಪಂ.ಯಲ್ಲಿ ಗುರುವಾರ ಗ್ರಾಮಿಣ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. “ನೀವು (ವಿವಿಧ ಇಲಾಖೆಗಳ ಅಧಿಕಾರಿಗಳು) ಸರಿಯಾಗಿ ಮಾಹಿತಿ ಕೊಡುವುದಿಲ್ಲ.

ಹಾಗಾಗಿ, ಅವರು ಆಯೋಗದ ಮೊರೆಹೋಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಶೇ. 90ರಷ್ಟು ದಂಡ ಪ್ರಯೋಗಕ್ಕೆ ಅರ್ಹ ಆಗಿರುತ್ತವೆ ಎಂದ ಕೆ.ಎಂ. ಚಂದ್ರೇಗೌಡ, ಇದೆಲ್ಲಕ್ಕಿಂತ ಹೆಚ್ಚಾಗಿ ಕಡತಗಳು ಮತ್ತು ಅರ್ಜಿಗಳನ್ನು ಸರಿಯಾಗಿ ಓದುವುದನ್ನು ಕಲಿಯಿರಿ ಎಂದು ಸೂಚ್ಯವಾಗಿ ಹೇಳಿದರು. 

ಆರ್‌ಟಿಐ ಕಾರ್ಯಕರ್ತರು ಬ್ಲ್ಯಾಕ್‌ವೆುಲ್‌ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ, “ನೀವು ಮೊದಲು ಸರಿಯಾಗಿರಬೇಕು. ನಿಮ್ಮಲ್ಲಿನ ಲೋಪವೇ ಮತ್ತೂಬ್ಬರಿಗೆ ಅಸ್ತ್ರ ಆಗುತ್ತದೆ. ನೀವು ಸರಿಯಾಗಿದ್ದರೆ, ಆರ್‌ಟಿಐ ಕಾರ್ಯಕರ್ತರಿಗೆ ಹೆದರುವ ಅವಶ್ಯಕತೆ ಇಲ್ಲ’ ಎಂದರು. 

ಟಾಪ್ ನ್ಯೂಸ್

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.